ಇಲ್ಲಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜ ಭವನ ಉದ್ಘಾಟನೆಯ ಅಂಗವಾಗಿ ಒಂದು ತಿಂಗಳುಗಳಕಾಲ ಪ್ರತಿ ದಿನ ಸಂಜೆ ಏರ್ಪಡಿಸಿರುವ ಶರಣರು ಕಂಡ ಶಿವ ಎಂಬ ಪ್ರವಚನ ಮಾಲೆಯಲ್ಲಿ ಅವರು ಪ್ರವಚನ ನೀಡಿದರು.
ನಮ್ಮ ದೇಹ ಕ್ಷಣ ಕ್ಷಣಕ್ಕೂ ತನ್ನ ರೂಪವನ್ನು ಬದಲಿಸುತ್ತಿರುತ್ತದೆ.ಇದನ್ನು ಗಮನಿಸದೇ ನಡೆದಾಗ ಅದರ ಸ್ವರೂಪವೇನು ಎಂಬುದು ತಿಳಿಯುವುದಿಲ್ಲ.ಆಸ್ಥಿಪಂಜರದಿಂದಾದ ಈ ದೇಹಕ್ಕೆ ಚರ್ಮದ ಹೊದಿಕೆಯಿಂದ ಒಂದು ರೂಪ ಬಂದಿದೆ ಎಂದರು.ಮಾನವ ತಾನು ಮಾಡುವ ಎಲ್ಲಾ ಕಾರ್ಯಗಳಾನ್ನು ನಾನೇ ಮಾಡಿದ್ದು ಎಂದು ಬೀಗುತ್ತಾನೆ,ಆದರೆ ಈ ಕಾರ್ಯಗಳನ್ನು ಮಾಡುವಂತೆ ಮಾಡುವುದು ಆತ್ಮವೆಂಬ ಜ್ಯೋತಿ.ಇದನ್ನರಿಯದವರು ಕುರುಡರೂ,ಮೂರ್ಖರೂ ಆಗಿರುತ್ತಾರೆ ಎಂದರು.
ಕೇವಲ ತಪಸ್ಸಿನಿಂದ ಮಾತ್ರ ಶಾಂತಿ,ನೆಮ್ಮದಿ ದೊರೆಯುವುದಿಲ್ಲ,ಇದರಿಂದ ದೇಹದಂಡನೆಯಾಗುತ್ತದೆ.ನಾವು ಯಾವಾಗ ಆತ್ಮ ಶುದ್ದಿ ಮಾಡಿಕೊಲ್ಳುತ್ತೇವೆ ಆಗ ಶಾಂತಿ,ನೆಮ್ಮದಿ ಲಭಿಸುತ್ತವೆ.ಇಡೀ ನಮ್ಮದೇಹವನ್ನು ನಿಯಂತ್ರಿಸುವ ಆತ್ಮವೆಂಬ ಜ್ಯೋತಿಯಿಂದ ಮಾನವ ಎಂತಹ ಕಾರ್ಯವನ್ನಾದರೂ ಸಾಧಿಸಭುದಾಗಿದೆ.ಇದರಿಂದ ತನ್ನ ಜೀವನವನ್ನು ಸುಲಲಿತವಾಗಿ ಸಾಗಿಸಬಹುದು ಎಂದರು.ಆತ್ಮಶಾಂತಿ ಪಡೆಯಬೇಕಾದೆ ಅದು ಧ್ಯಾನದಿಂದಲೆ ಸಾಧ್ಯ ಎಂದು ತಿಳಿಸಿದರು.
ಇಂದಿನ ಯುವಜನತೆಗೆ ಸಾಮಾಜಿಕ ಜ್ಞಾನ,ನೈತಿಕ ಜ್ಞಾನ,ಆಧ್ಯಾತ್ಮಿಕಜ್ಞಾನದ ಅರಿವು ಅತೀ ಮುಖ್ಯ.ಇದನ್ನು ತಿಳಿಯುವುದರಿಂದ ತಮ್ಮ ಮುಂದಿನ ಜೀವನದಲ್ಲಿ ಇಅತರರೊಂದಿಗೆ ಯಾವರೀತಿ ಬದುಕಿ ಬಾಳಬೆಕೆಂಬುದನ್ನು ತಿಳಿಸುತ್ತವೆ.ಇಂದು ಸಂಪತ್ತು ಹೆಚ್ಚಾದಂತೆ ಆಶಾಂತಿ,ಒತ್ತಡ ಹೆಚ್ಚಾಗಿದ್ದು,ಮಾನವ ತನ್ನ ದೇಹವನ್ನು ನಾನಾ ರೋಗಗಳಿಗೆ ಮನೆ ಮಾಡಿಕೊಟ್ಟಿದ್ದಾನೆ ಎಂದು ತಿಳಿಸಿದರು.
ನಮ್ಮ ದೇಹವನ್ನು ಯಂತ್ರಗಳಿಗೆ ಹೋಲಿಸಿ ಹೇಳುವಲ್ಲಿ ಮಾನವನ ಮೆದುಳು ಕಂಪ್ಯೂಟರ್ ಇದ್ದಂತೆ,ಕಣ್ಣುಗಳು ಕ್ಯಾಮರವಿದ್ದಂತೆ,ಕಿವಿಗಳು ಪೋನ್ ರೀಸಿವರ್ ಗಳಂತೆ,ಜಠರ ಗ್ರೈಂಡರ್ ನಂತೆ ವಿವಿಧ ಬಾಗಗಳನ್ನು ವಿವಿಧ ಯಂತ್ರಗಳಂತೆ ತಮ್ಮ ಕಾರ್ಯ ಮಾಡುತ್ತಿರುತ್ತವೆ.ಆದ್ರೆ ಇವುಗಳನ್ನೆಲ್ಲಾ ನಿಯಂತ್ರಿಸುವುದೇ ಆತ್ಮ ಎಂದು ತಿಳಿಸಿದರು.
ಪ್ರವಚನ ಕಾರ್ಯಕ್ರಮದಲ್ಲಿ ಕಲ್ಪತರು ಬ್ರಿಕ್ಸ್ ನ ಮಾಲೀಕ ಟಿ.ಎಸ್.ರಂಗನಾಥ ಶ್ರೇಷ್ರ್ಠಿ,ಡಾ ಸಿದ್ದರಾಮಯ್ಯ, ಜಿ.ಎಂ.ನೀಲಕಂಠಯ್ಯ,ಡಾ ರಾಜಶೇಖರ್ ಸೇರಿದಂತೆ ಅಕ್ಕಂದಿರು ಹಾಗೂ ಸಾರ್ವಜನಿಕರು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ