ಮಾಧ್ಯಮದವರ ಮೇಲೆ ವಕೀಲರ ಹಲ್ಲೆ ಖಂಡಿಸಿದ ಹುಳಿಯಾರಿನ ವಿವಿಧ ಸಂಘಟನೆಗಳು ಶುಕ್ರವಾರ ಪಟ್ಟಣದ ನಾಢಕಛೇರಿ ಆವರಣದಲ್ಲಿ ಮನವಿ ಪತ್ರ ಸಲ್ಲಿಸಿದರು. ಗ್ರಾ.ಪಂ.ಅಧ್ಯಕ್ಷ ಅನ್ಸರ್ ಆಲಿ,ಟಿಪ್ಪು ಮಹಾವೇದಿಕೆಯ ಉಪಾಧ್ಯಕ್ಷ ಸಯ್ಯದ್ ಅಮೀದ್,ಕಾರ್ಯದರ್ಶಿ ಅಮೀದ್ ಷರೀಪ್,ಇಮ್ರಾಜ್,ಅರುಣ್ ಇದ್ದಾರೆ.
ಈ ಸಂಧರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ ಮಾತನಾಡಿ, ವಕೀಲರ ಇಂತಹ ವರ್ತನೆ ನ್ಯಾಯಾಂಗವೇ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಾಯುವಂತವರೇ ಈ ರೀತಿ ಮಾಡಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆ ಮಾಡಿದಂತೆ. ವಕೀಲರು ತಮ್ಮ ತನವನ್ನೇ ಮರೆತು ಕಾಡು ಮೃಗಗಳಂತೆ ವರ್ತಿಸಿರುವುದು ನಾಚೀಕೆಗೇಡು ಎಂದರು. ಇದನ್ನು ಕಂಡವರು ವಕೀಲರ ಬಳಿ ಹೇಗೆ ಹೋಗುವುದು ಎಂಬಂತಾಗಿದೆ,ಇದಕ್ಕೆ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ ಎಂದರು.
ಹೋಬಳಿ ಟಿಪ್ಪು ಮಹಾವೇದಿಕೆಯ ಉಪಾಧ್ಯಕ್ಷ ಸಯ್ಯದ್ ಅಮೀದ್,ಕಾರ್ಯದರ್ಶಿ ಅಮೀದ್ ಷರೀಪ್, ಸಾಮಾಜಿಕ ಕಾರ್ಯಕರ್ತರಾದ ಇಮ್ರಾಜ್,ಅರುಣ್ ಇದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ