ವಿಷಯಕ್ಕೆ ಹೋಗಿ

ಉತ್ತಮ ತತ್ವಗಳ ಪರಸ್ಪರ ವರ್ಗಾವಣೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಜಿ.ಪಂ.ಸದಸ್ಯ ಪಂಚಾಕ್ಷರಿ

ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನದ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ.ಸದಸ್ಯ ಪಂಚಾಕ್ಷರಿ,ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿ,ಚನ್ನಬಸವೇಶ್ವರ ಪ್ರಭುಸ್ವಾಮಿಗಳು,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ಟಿ.ಎಸ್.ರಂಗನಾಥ ಶ್ರೇಷ್ರ್ಠಿ, ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ, ಸದಸ್ಯ ಕೆಂಕೆರೆ ನವೀನ್,ಬ್ಯಾಂಕ್ ಮರುಳಯ್ಯ,ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರಿದ್ದಾರೆ.

ಇಂದಿನ ಸಮಾಜದಲ್ಲಿ ನಾನಾ ರೀತಿಯ ಜನರಿದ್ದು, ಅವರೆಲ್ಲರಲ್ಲೂ ಒಂದೊಂದು ರೀತಿಯ ವಿಭಿನ್ನ ಮನೋಭಾವ ಹೊಂದಿರುತ್ತಾರೆ.ಇಂತಹ ಎಲ್ಲಾ ಜನರು ಒಂದೆಡೆ ಸೇರಿ ಉತ್ತಮ ವಿಚಾರ,ತತ್ವಗಳನ್ನು ಪರಸ್ಪರ ವರ್ಗಾವಣೆ ಮಾಡಿದ್ದೇ ಆದರೆ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದು ಶೆಟ್ಟಿಕೆರೆ ಜಿ.ಪಂ.ಸದಸ್ಯ ಪಂಚಾಕ್ಷರಿ ಅಭಿಪ್ರಾಯಪಟ್ಟರು.

ಇಲ್ಲಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ,ಮಾತನಾಡಿದರು.


ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವನಿಗೆ ದಿನದ 24 ಗಂಟೆಗಳು ಕಡಿಮೆಯಾಗಿದ್ದು,ನೆಮ್ಮದಿಯಿಲ್ಲದ ಜೀವನ ನಡೆಸುತ್ತಿದ್ದಾನೆ.ಶಾಂತಿ,ನೆಮ್ಮದಿಗಾಗಿ ಪರಿತಪಿಸುತ್ತಿರುವವರಿಗೆ ಈ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಒಂದು ವರದಾನವಾಗಿದೆ.ಇಲ್ಲಿ ಶಿವನ ಹಾಗೂ ಶಿವತತ್ವದ ಆರಾಧನೆಯಿಂದ ಮನುಷ್ಯ ತನ್ನ ಜೀವನದಲ್ಲಿ ಯಾವರೀತಿ ಬದುಕಿ ಬಾಳಬೇಕು ಎಂಬುದನ್ನು ಕಲಿಯುತ್ತಾನೆ ಎಂದರು.ಇಲ್ಲಿ ನಡೆಯುವ ಧ್ಯಾನದ ಕಾರ್ಯಕ್ರಮಗಳಿಂದ ನಮ್ಮ ಮನಸ್ಸನ್ನು ಯಾವ ರೀತಿ ಹಿಡಿತದಲ್ಲಿಟ್ಟು ಕೊಳ್ಳಬಹುದೆಂಬುದನ್ನು ತಿಳಿಸುವ, ಶಿವನಿರುವ ಸಂಸ್ಥೆಯಾಗಿರುವ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಬೆಳೆಯುವ ಮೂಲಕ ಜನರಲ್ಲಿ ನೆಮ್ಮದಿಯನ್ನುಂಟುಮಾಡಲಿ ಎಂದು ಆಶಿಸಿದರು.


ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದ ಕಿರು ಪರಿಚಯದಲ್ಲಿ ರಶ್ಮಿ ಅವರು ಮಾತನಾಡಿ ಇಂದು ಮಾನವ ತನ್ನ ಜೀವನದಲ್ಲಿ ಏನೆನೆಲ್ಲಾ ಪಡೆದಿದ್ದರು ಸಹ ಜೀವನದಲ್ಲಿ ನೆಮ್ಮದಿಯಿಲ್ಲದೆ ತನ್ನ ಜೀವನದ ಸಂತೋಷದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವ ಪ್ರಪಂಚದಲ್ಲಿ ಮನುಷ್ಯನ ಮನಸ್ಸಿಗೆ ನೆಮ್ಮದಿ,ಶಾಂತಿ ಪಡೆಯಬೇಕಾದರೆ,ಮೊದಲು ತನ್ನ ಮನಸ್ಸನ್ನು ಕೇಂದ್ರಿಕರಿಸಬೇಕಿದೆ. ಅದು ಓಂ ಶಾಂತಿ ಬೀಜಾಕ್ಷರ ಉಚ್ಚಾರಣೆಮಾಡಿದ್ದೆ ಆದರೆ ಸಾಧ್ಯವೆಂದು ತಿಳಿಸಿದರು.ಗೃಹಸ್ಥರಿಗೆ ಗೃಹಸ್ಥಾಶ್ರಮವಾಗಿ,ವೃದ್ದರಿಗೆ ವೃದ್ದಾಶ್ರಮವಾಗಿ,ವೈದ್ಯರಿಗೆ ವೈದ್ಯಾಲಯವಾಗಿ,ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಬಗ್ಗೆ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಹೇಗೆ ಬಾಳ ಬೇಕೆಂದು ತಿಳಿಸುತ್ತದೆ. ಮನುಷ್ಯ ಜೀವನದಲ್ಲಿನ ಎಡರು,ತೊಡರುಗಳನ್ನು ಹೇಗೆ ನಿವಾರಿಸಿ ಕೊಳ್ಳಬೇಕು,ಮನುಅಷ್ಯ ತನ್ನ ಮನಸ್ಸನ್ನು ಯಾಬರೀತಿ,ಏಕೆ ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂಬ ಹತ್ತು ಹಲವು ಸಾಮಾಜಿಕ ವಿಚಾರಗಳ ಬೆಳಕನ್ನು ಚೆಲ್ಲುವುದೇ ಈ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಗುರಿಯಾಗಿದೆ.


ಇದರ ವಿಚಾರಗಳನ್ನು,ವಿಚಾರಧಾರೆಯನ್ನು ಕಂಡ ವಿಶ್ವಸಂಸ್ಥೆ ತನ್ನ ಅಂಗಸ್ಥೆಗಳಲ್ಲಿ ಒಂದಾಗಿಸಿಕೊಂಡಿದೆ.ಅಲ್ಲದೆ ಇಲ್ಲಿ ಯಾವುದೇ ಜಾತಿ,ಮತ,ಧರ್ಮವೆಂಬುದಿಲ್ಲದೆ ಇಲ್ಲಿ ಯಾರುಬೇಕಾದರು ಶಾಂತಿ,ನೆಮ್ಮದಿಯ ಮಾರ್ಗಗಳನ್ನು,ಶಿವತತ್ವ ವಿಚಾರಗಳನ್ನು ಗ್ರಹಿಸಬೇಬಹುದು.ಮನುಷ್ಯ ಶಾಂತಿ,ಮನಸ್ಸಿನ ಏಕಾಗ್ರತೆ ಪಡೆಯುವ ಮೂಲಕ ಆ ಶಿವನ್ನು ಕಾಣುವಂತೆ ಮಾಡುವುದಾಗಿದೆ ಎಂದರು.


ಸಮಾರಂಭದಲ್ಲಿ ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿಯವರು ಆಶೀರ್ವಚನ ನೀಡಿದರು. ವಾಣಿಜ್ಯೋದ್ಯಮಿ ಟಿ.ಆರ್.ಶ್ರೀನಿವಾಸಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದು, ಗುಬ್ಬಿಯ ಚನ್ನಬಸವೇಶ್ವರ ಪ್ರಭುಸ್ವಾಮಿಗಳು,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ಕಲ್ಪತರು ಬ್ರಿಕ್ಸ್ ನ ಮಾಲೀಕ ಟಿ.ಎಸ್.ರಂಗನಾಥ ಶ್ರೇಷ್ರ್ಠಿ, ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ, ಸದಸ್ಯ ಕೆಂಕೆರೆ ನವೀನ್,ಬ್ಯಾಂಕ್ ಮರುಳಯ್ಯ,ಮಲ್ಲಿಕಾರ್ಜುನಯ್ಯ,ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದ ಬಿ.ಕೆ.ಗೀತಾ, ವಿಜಯಾಜಿ, ಬಿ.ಕೆ.ಶೋಭಾ,ಸುಹಾಸಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಅಲ್ಲದೆ ವಿಧ್ಯಾವಾರಿಧಿ ಶಾಲೆ ಹಾಗೂ ಜ್ಞಾನ ಜ್ಯೋತಿ ಶಾಲೆಯ ಮಕ್ಕಳು ನಡೆಸಿಕೊಟ್ಟ ನೃತ್ಯಗಳು ಸಮಾರಂಭದ ಕಳೆ ಹೆಚ್ಚುವಂತೆ ಮಾಡಿದ್ದವು.ಉದ್ಘಾಟನೆಗೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಅಕ್ಕಂದಿರು ಪೂರ್ಣಕುಂಬ ಹಾಗೂ ಶಿವಲಿಂಗದ ಮೆರವಣಿಗೆ ನಡೆಸಿದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.