ರಾಜ ಭವನವನ್ನು ಮಧುಗಿರಿ ಕ್ಷೇತ್ರದ ಶಾಸಕರಾದ ಅನಿತಾಕುಮಾರಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆವಹಿಸುವರು. ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿಯವರು ಆಶೀರ್ವಚನ ನೀಡುವರು.ಹುಬ್ಬಳ್ಳಿ ಉಪವಲಯದ ಈಶ್ವರೀ ವಿಶ್ವವಿದ್ಯಾನಿಲಯದ ಸಂಚಾಲಕ ರಾಜಯೋಗಿ ಬಿ.ಕೆ.ನಿರ್ಮಲಾದೇವಿ ಈಶ್ವರೀ ಸಂದೇಶ ನೀಡುವರು, ಶಾಸಕ ಡಿ.ಸುಧಾಕರ್, ಶೆಟ್ಟಿಕೆರೆ ಜಿ.ಪಂ.ಸದಸ್ಯ ಪಂಚಾಕ್ಷರಿ,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ವಾಣಿಜ್ಯೋದ್ಯಮಿ ಟಿ.ಆರ್.ಶ್ರೀನಿವಾಸಶ್ರೇಷ್ಠಿ,ಕಲ್ಪತರು ಬ್ರಿಕ್ಸ್ ನ ಮಾಲೀಕ ಟಿ.ಎಸ್.ರಂಗನಾಥ ಶ್ರೇಷ್ರ್ಠಿ ಭಾಗವಹಿಸಲಿದ್ದಾರೆ.
ಇದೇ ದಿನ ಸಂಜೆ 6ಕ್ಕೆ ಶರಣರು ಕಂಡ ಶಿವ ಪ್ರವಚನ ಮಾಲೆಯ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಲಿದ್ದು, ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿಯವರು ಪ್ರವಚನ ನೀಡುವರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆವಹಿಸುವರು.ಕಾಂಗ್ರೇಸ್ ಯುವಮುಖಂಡ ಸಂತೋಷ್ ಜಯಚಂದ್ರ,ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತೀಮಾ,ತಾ.ಪಂ.ಸದಸ್ಯ ನವೀನ್,ಗ್ರಾ.ಪಂ.ಉಪಾಧ್ಯಕ್ಷೆ ವೆಂಕಟಮ್ಮ,ಸಿ.ಪಿ.ಐ ಪ್ರಭಾಕರ್,ಎಸೈ ಪಾರ್ವತಮ್ಮ, ಕಲ್ಪತರು ಟೈಲ್ಸ್ ನ ಮಾಲೀಕ ನಾಗೇಶ್ ಅತಿಥಿಗಳಾಗಿ ಆಗಮಿಸುವರು. ನಿತ್ಯ ವಿವಿಧ ವಿಚಾರಗಳ ಬಗ್ಗೆ ಪ್ರವಚನ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯರಮವನ್ನು ಯಶಸ್ವಿಗೊಳಿಸಬೇಕೆಂದು ಹುಳಿಯಾರು ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದ ರಾಜಯೋಗಿನಿ ಬಿ.ಕೆ.ಗೀತಾ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ