ಹೊಯ್ಸಲಕಟ್ಟೆ,ದಸೂಡಿ,ದಬ್ಬ ಗುಂಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರುಗಳು ಹುಳಿಯಾರಿನ ನಾಡ ಕಛೇರಿಗೆ ಮುತ್ತಿಗೆ ಹಾಕಿ ಗ್ರಾಮ ಪಂಚಾಯ್ತಿ,ಕಂದಾಯ ಇಲಾಖಾಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸದೆ,ನಮ್ಮನ್ನು ಶೋಷಿಸುತ್ತಿದ್ದು ನಮಗೆ ನ್ಯಾಯ ದೊರೆಕಿಸಿಕೊಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಕೆಲ ವೃದ್ದರು,ಅಂಗವಿಕಲರುಗಳಿಗೆ ಸರ್ಕಾರದಿಂದ ಬರುತ್ತಿದ್ದ ವೇತನವನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿದ್ದಾರೆ. ಸರ್ಕಾರ ಈ ಹಿಂದೆ ಸಂಧ್ಯಾಸುರಕ್ಷ,ವೃದ್ದಾಪ್ಯ,ಅಂಗವಿಕಲವೇತನ ಪಡೆಯುವ ಫಲಾನುಭವಿಗಳ ಗಣತಿ ಕಾರ್ಯ ಮಾಡಿಸಿದ್ದಾಗ ಗಣತಿ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು ಗ್ರಾಮದ ಯಾವುದೊ ಒಂದು ಸ್ಥಳಕ್ಕೆ ಬಂದು ತಮಗೆ ಬೇಕಾದವರಿಂದ ಮಾಹಿತಿ ಪಡೆದಿದ್ದಾರೆ.ಜೊತೆಗೆ ಕೆಲ ಅರ್ಹ ಫಲಾನುಭವಿಗಳಿಗೆ ಈ ವೇತನ ತಪ್ಪುವಂತೆ ಮಾದಿದ್ದಾರೆ, ಅಧಿಕಾರಿಗಳೇ ಹೀಗೆ ಮಾಡಿದರೆ,ನಾವು ಈ ಬಗ್ಗೆ ಯಾರಲ್ಲಿ ಕೇಳುವುದು ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಉಮೇಶ್ಚಂದ್ರ ರೊಂದಿಗೆ ದೂರು ನೀಡಿದ ಪ್ರತಿಭಟನಾ ನಿರತರು ಬಗರ್ ಹುಕುಂ ನಲ್ಲಿ ಜಮೀನ ಬಗ್ಗೆ ಮಾಹಿತಿ ಕೇಳುವ ರೈತರ ಮೇಲೆ ದಬಾ ಯಿಸುವುದಲ್ಲದೆ,ಲಂಚಕೇಳುತ್ತಿದ್ದು,ಲಂಚ ಕೊಟ್ಟವರಿಗೆ ಮಾತ್ರ ಕೆಲಸ ಮಾಡಿ ಕೊಡುತ್ತಿರುವ ಇಂತಹ ಅಧಿಕಾರಿಗಳಿಗೆ ಸರ್ಕಾರಿ ಸಂಬಳ ಸಾಲುತ್ತಿಲ್ಲವೆ ಎಂದು ಪ್ರಶ್ನಿಸಿದರು,ರೈತರ ಸಮಸ್ಯೆಗಳನ್ನು ಆಲಿಸದ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು..
ರೈತರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಉಮೇಶ್ಚಂದ್ರ ಬಗರ್ ಹುಕುಂ ನಲ್ಲಿ ಮಂಜೂರಾಗಿರುವ ರೈತರು ಯಾವುದೇ ರೀತಿಯ ಹಣವನ್ನು ಯಾರಿಗೂ ನೀಡಬೇಡಿ,ನಾನೇ ಖುದ್ದು ಸ್ಥಳಕ್ಕೆ ಬಂದು ಪರಿಶೀಲಿಸುವುದಾಗಿ ತಿಳಿಸಿದರು. ಈ ಮುಂಚೆ ಅಂಗವಿಕಲ,ವಿಧವಾ ವೇತನ, ವೃದ್ಯಾಪ್ಯ ವೇತನ ಪಡೆಯುತ್ತಿದ್ದು,ಈಗ ವೇತನ ಬಾರದೇ ಇರುವ ಅರ್ಹಫಲಾನುಭವಿಗಳು ಮತ್ತೆ ಅರ್ಜಿಯನ್ನು ನೀಡಿದಲ್ಲಿ , ಅದನ್ನು ಶೀಘ್ರ ಪರಿಶೀಲಿಸಿ ಅವರಿಗೆ ವೇತನವನ್ನು ಮುಂಜೂರು ಮಾಡಿಸುವುದಾಗಿ ತಿಳಿಸಿ ರೈತರನ್ನು ಸಮಾಧಾನ ಪಡಿಸಿ ಪ್ರತಿಭಟನೆಯನ್ನು ಹಿಂಡೆಯುವಂತೆ ಮಾಡಿದರು.
ತಹಶೀಲ್ದಾರ್ ಮಾತಿಗೆ ಒಪ್ಪಿ ಧರಣಿ ಹಿಂಪಡೆದ ರೈತರು ಈ ಸಮಸ್ಯೆಗೆಳಿಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪುನಃ ಮತ್ತೊಮ್ಮೆ ಉಪವಾಸ ಧರಣಿಯನ್ನು ನಡೆಸುವುದಾಗಿ ಎಚ್ಚರಿಕೆ ಮಾತುಗಳಾನ್ನಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ