ಇಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ೧೦೦ಕ್ಕೂ ಹೆಚ್ಚಿನ ಸಂಖ್ಯೆಯ ಅಜೀವ ಸದಸ್ಯರನ್ನು ಹೊಂದಿರುವಂತ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಹುಳಿಯಾರು ಆಗಿದ್ದು,ಕಳೆದೆರಡು ತ್ರೈವಾರ್ಷಿಕ ಚುನಾವಣೆಗಳನ್ನು ಉಪ ತಹಶೀಲ್ದಾರ್ ಅವರ ಮೇಲುಸ್ತವಾರಿಯಲ್ಲಿ ಯಾವುದೇ ಲೋಪ ದೋಷಗಳಿಲ್ಲದಂತೆ,ಯಾವುದೇ ಅಡ್ಡಿಯಿಲ್ಲದಂತೆ ಮತದಾನ ಕಾರ್ಯ ನಡೆದಿತ್ತು.ಆದರೆ ಈಗ ಏಕಾಏಕಿ ಹಾಲಿ ಚಾಲನೆಯಲ್ಲಿರುವಂತಹ ಮತ ಕೇಂದ್ರವನ್ನು ರದ್ದು ಮಾಡಿರುವುದು,ಇಲ್ಲಿನ ೧೫೦ಕ್ಕೂ ಹೆಚ್ಚಿನ ಮತದಾರರಿಗೆ ತೊಂದರೆಯುಂಟಾಗುವಂತೆ ಮಾಡಿರುವುದಲ್ಲದೆ,ಮತದಾನಕ್ಕಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಿದ್ದು,ವೃತಾ ದುಂದು ವೆಚ್ಚ ಹಾಗೂ ಉರಿಬಿಸಿಲಿನಲ್ಲಿ ಮತದಾರರು ಪರದಾಡುವಂತಾಗುತ್ತದೆ ಎಂದಿದ್ದಾರೆ.
ಅಧಿಕಾರ ವಿಕೇಂದ್ರೀಕರಣದ ನಿಟ್ಟಿನಲ್ಲಿ ಕೇವಲ ಕಾನೂನು ಪಾಲನೆಯಷ್ಟೇ ಮುಖ್ಯವಲ್ಲ,ಜೊತೆಗೆ ಮಾನವೀಯತೆಯೂ ಸಹ ಇರಬೇಕು.ಕೆಲವು ತಾಲ್ಲೂಕು ಸಾಹಿತ್ಯ ಪರಿಷತ್ ಘಟಕಗಳಲ್ಲಿ ೧೦೦ಕ್ಕೂ ಕಡಿಮೆ ಸದಸ್ಯರಿದ್ದು,ಪಕ್ಕದ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಮತದಾನ ಮಾಡಿರುವ ಸಂಗತಿಗಳಿವೆ.ಆದರೆ ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದಲ್ಲಿ ಪ್ರಸ್ತುತ ೧೫೦ಕ್ಕೂ ಹೆಚ್ಚಿನ ಅಜೀವ ಸದಸ್ಯರಿರುವುದು ಹೆಮ್ಮೆಯ ಸಂಗತಿಯಾಗಿದ್ದು,ಚುನಾವಣಾಧಿಕಾರಿಗಳು ಇದರ ಬಗ್ಗೆ ಪರಾಮರ್ಷಿಸಿ,ಹಾಲಿ ಇರುವಂತಹ ಮತಕೇಂದ್ರವನ್ನು ರದ್ದು ಮಾಡದೇ,ಇಲ್ಲೇ ಮತದಾನಕ್ಕೆ ಅನುವು ಮಾಡಿಕೊಡಬೇಕೆಂದು ಹೋಬಳಿ ಸಾಹಿತ್ಯ ಪರಿಷತ್ ನ ಸಂಚಾಲಕರಾದ ತ.ಶಿ.ಬಸವಮೂರ್ತಿ ಅವರು ಪತ್ರಿಕೆ ಮೂಲಕ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ