ತಾಲ್ಲೂಕಿನಾದ್ಯಂತ ಈ ಬಾರಿ ಮುಂಗಾರು,ಹಿಂಗಾರು ಮಳೆಯ ವಿಫಲತೆಯಿಂದಾಗಿ ಬರದ ಪರಿಸ್ಥಿತಿ ತಲೆದೋರಿದ್ದು,ಈ ಗಾಗಲೇ ಬೇಸಿಗೆ ದಿನಗಳು ಪ್ರಾರಂಭವಾಗಿದ್ದು,ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯುಂಟಾಗಿ,ರೈತರು ತಮ್ಮ ಜಾನುವಾರುಗಳನ್ನು ಸಾಕಲಾಗದೆ ಮಾರುವಂತಹ ದುಸ್ಥಿತಿ ಉಂಟಾಗಿದೆ. ಅಲ್ಲದೆ ಜಾನುವಾರುಗಳಿಗೆ ನೀರು,ಮೇವು ಸಿಗದೆ ಕಂಗಾಲಾಗಿವೆ.ಕೆಲ ರೈತರು ದುಪ್ಪಟ್ಟು ಹಣ ಕೊಟ್ಟು ಮೇವು ಖರೀದಿಸುಲು ಮುಂದಾದರೂ ಮೇವು ದೊರೆಯುತ್ತಿಲ್ಲ.ಇದೇ ರೀತಿ ಮುಂದುವರೆದರೆ ಜಾನುವಾರುಗಳು ಇಲ್ಲದಂತಾಗಿ,ಕೃಷಿಯನ್ನು ಕೈಬಿಡುವಂತಹ ಕಾಲ ಬರಬಹುದು. ಕಳೆದ ೪-೫ ವರ್ಷಗಳ ಹಿಂದೆ ಸಮೀಪದ ಕಾರೇಹಳ್ಳಿ ರಂಗನಾಥ ಸ್ವಾಮಿ ಕ್ಷೇತ್ರದಲ್ಲಿ ಗೋಶಾಲೆಯನ್ನು ಪ್ರಾರಂಭಿಸಿದ್ದು,ಇಲ್ಲಿನ ಜನ,ಜಾನುವಾರುಗಳಿಗೆ ತುಂಬಾ ಅನುಕೂಲವಾಗಿತ್ತು.ಅದೇ ರೀತಿ ಈ ಸಲವೂ ಸಹ ತಾಲ್ಲೂಕಿನ ನಾನಾ ಭಾಗಗಳಲ್ಲಿ ಗೋಶಾಲೆಯನ್ನು ತೆರೆದರೆ ತಾಲ್ಲೂಕಿನ ರೈತರಿಗೆ ಅನುಕೂಲ ಮಾಡಿಕೊಟ್ಟು, ಗೋವುಗಳ ರಕ್ಷಣೆ, ಸಂತತಿ ಉಳುವಿಗಾಗಿ ಸಹಕಾರ ನೀಡಬೇಕಾಗಿದೆ ಎಂದು ತಾಲ್ಲೂಕು ಕೃಷಿಕ ಸಮಾಜದಅಧ್ಯಕ್ಷ ಟಿ.ಎಲ್.ನಟರಾಜು,ಜಿಲ್ಲಾ ಪ್ರತಿನಿಧಿ ಬಿ.ಎಸ್.ಲೋಕೇಶ್,ಕೃಷಿಕ ಸಮಾಜದ ರಂಗನಕೆರೆ ಮಹೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬರ ಪರಿಸ್ಠಿತಿ ಎದರಿಸುತ್ತಿರುವ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಸುತ್ತಮುತ್ತ ಜಾನುವಾರುಗಳಿಗೆ ಕುಡಿಯುವ ನೀರು,ಮೇವಿನ ಕೊರತೆಯಾಗದಂತೆ ಗೋಶಾಲೆಯನ್ನು ಪ್ರಾರಂಭಿಸ ಬೇಕೆಂದು ತಾಲ್ಲೂಕು ಕೃಷಿಕ ಸಮಾಜ ಸರ್ಕಾರವನ್ನು ಒತ್ತಾಯಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ