ಕೊಂಡಳಿಕ್ರಾಸ್ ಸಮೀಪದ ಎನ್.ಹೊಸಳ್ಳಿ ಗ್ರಾಮದ ವಧುವಿನ ಮನೆಯಿಂದ ಸಂಬಂಧಿಕರನ್ನು ಕಾರೇಹಳ್ಳಿಯಲ್ಲಿ ನಡೆಯಲಿದ್ದ ಮದುವೆಗೆ ಕಾರ್ಯಕ್ಕೆ ಕರೆದುಕೊಂಡು ಬಂದಿದ್ದ ಶಿವಗಂಗಾ ಬಸ್ , ಸಂಬಂಧಿಕರನ್ನು ಕಾರೆಹಳ್ಳಿಯಲ್ಲಿ ಇಳಿಸಿ, ಡಿಸೇಲ್ ಹಾಕಿಸಲೆಂದು ಡ್ರೈವರು ಸೇರಿದಂತೆ ಮೂವರು ಹುಳಿಯಾರಿಗೆ ಬಂದಿದ್ದು,ಬಸ್ ಗೆ ಡಿಸೇಲ್ ಹಾಕಿಸಿಕೊಂಡು ಪುನ: ಕಾರೇಹಳ್ಳಿಗೆ ವಾಪಸಾಗಿದ್ದು, ಕಂಪನಹಳ್ಳಿ ಸಮೀಪದ ತಿರುವಿನಲ್ಲಿ ಡ್ರೈವರ್ ನ ಅಜಾಗರೂಕತೆಯಿಂದ ಬಸ್ ಆಯಾತಪ್ಪಿ ರಸ್ತೆಯ ಎಡ ಭಾಗಕ್ಕೆ ಉರುಳಿ ಬಿದ್ದು,ತುಮಕೂರಿನ ಡ್ರೈವರು ಮಾರುತಿ,ಹೊಸಳ್ಳಿಯ ರಂಗನಾಥ ಹಾಗೂ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಗೆ ತೀವ್ರಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ.ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.ಎ.ಎಸ್.ಐ.ಕೃಷ್ಣಮೂರ್ತಿ ಚಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಠಾಣೆಯಲ್ಲಿ ದೂರು ದಾಖಲಿಸಿ ಕೊಂಡಿದ್ದಾರೆ.
ಹುಳಿಯಾರು ಸಮೀಪಸ ಕಂಪನಹಳ್ಳಿ ಬಳಿ ತಿರುವಿನಲ್ಲಿ ಡ್ರೈವರ್ ನ ಅಜಾಗರೂಕತೆಯಿಂದ ಆಯಾತಪ್ಪಿ ಬಿದ್ದಿರುವ ಶಿವಗಂಗಾ ಬಸ್.
ಬಸ್ ಒಂದು ಪಲ್ಟಿ ಹೊಡೆದು,ಬಸ್ಸಿನಲ್ಲಿದ್ದ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಶಿರಾ ಹುಳಿಯಾರು ಮಾರ್ಗದಲ್ಲಿ ಬರುವ ಹುಳಿಯಾರಿನಿಂದ ಸುಮಾರು ನಾಲ್ಕೈದು ಕೀ.ಮೀ ದೂರದ ಕಂಪನಹಳ್ಳಿ ಬಳಿ ಮಾ.13ರ ಮಂಗಳವಾರ ರಾತ್ರಿ ಸುಮಾರು 10 ರ ಸಮಯದಲ್ಲಿ ಸಂಭವಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ