
ಸುಮಾರು 5-6 ಅಡಿ ಎತ್ತರದ ಈ ಕಲ್ಲು ಸದ್ಯದಲ್ಲಿ 1 ಅಡಿಯಷ್ಟು ಮಾತ್ರ ಗೋಚರಿಸುತ್ತಿದೆ,ಪ್ರತೀತಿ ಎಂಬಂತೆ ಕೆರೆಯ ನೀರಿನ ಮಟ್ಟವನ್ನು ತಿಳಿಯಲು ಈ ಕಲ್ಲನ್ನು ಬಳಸುತ್ತಿದ್ದರು. ಕಲ್ಲು ಸಂಪೂರ್ಣ ಮುಳುಗಿದರೆ ಕೆರೆ ಕೊಡಿ ಬಿಳುತ್ತದೆಂದು ಹೇಳಲಾಗುತ್ತದೆ.ಅಲ್ಲದೆ ಹಿಂದೆ ನಾಯಿಗೂ ಮತ್ತು ಹುಲಿಗೂ ಕಾಳಗ ನಡೆಯುವಾಗ ಹುಲಿಯು ಇಲ್ಲಿನ ಕೋಟೆಯನ್ನು ಹಾರಿದ್ದರರಿಂದ ಈ ಪ್ರದೇಶಕ್ಕೆ ಹುಳಿಯಾರು ಎಂದು ಹೆಸರು ಬಂದಿದೆ ಎನ್ನಲಾಗುತ್ತದೆ. ನಾಯಿಗೆ ಹುಲಿ ಹೆದರಿದ್ದರಿಂದ ಈ ಶಿಲೆಯನ್ನು ಕೆತ್ತಿಸಿ,ಇಲ್ಲಿ ಸ್ಥಾಪಿಸಿರಬಹುದು.ಆದರೆ ಇಂದು ಅಂತಹ ಇತಿಹಾಸವನ್ನು ತಿಳಿಸುವಂತಹ ಒಂದು ಕುರುಹು ನಾಶವಾಗುತ್ತಿದೆ.ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಊರಿನ ಬಗೆಗೆ ಮಾಹಿತಿನೀಡುವಂತಹ ಕುರುಹುಗಳು ಇಲ್ಲದಂತಾಗುತ್ತವೆ.ಅಲ್ಲದೆ ಈ ಕಲ್ಲಿನ ಸುತ್ತಲೂ ಯಾವುದೇ ಅಂಗಿಲ್ಲದೆ ಮಲಮೂರ್ತ ವಿಸರ್ಜನೆ ಮಾಡುವುದಲ್ಲದೆ,ತ್ಯಾಜ್ಯವಸ್ತುಗಳ ರಾಶಿ ರಾಶಿ ಬಿದ್ದಿದೆ.ಇದರ ಸಂರಕ್ಷಣೆಯಾಗಿ ಗ್ರಾಮ ಪಂಚಾಯ್ತಿಯಾಗಲಿ,ಪುರಾತತ್ವ ಇಲಾಖೆಯವರಾಗಲಿ ಮುಂದಾಗಿಲ್ಲ.ಇನ್ನೂ ಮುಂದೆ ಯಾದರೂ ಇಂತಹ ಪ್ರಾಚ್ಯವಸ್ತುಗಳ ಸಂರಕ್ಷೆಣೆ ಕಡೆ ಸಂಬಂಧಿಸಿದ ಇಲಾಖೆಯವರು ಗಮನ ಹರಿಸಿ,ಅವುಗಳ ಸಂರಕ್ಷಣೆಯಾಗಲಿ ಎಂದು ಸಾರ್ವಜನಿಕ ಮಹೇಶ್ ಪತ್ರಿಕೆ ಮೂಲಕ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ