ಇಲ್ಲಿನ ಬಸವೇಶ್ವರ ನಗರದಲ್ಲಿ ಸೃಜನ ಸಂಘದವರು ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಮಹಿಳೆ ಮತ್ತು ಸಮಾಜ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು.
ಪ್ರಕೃತಿದತ್ತವಾಗಿ ಮಾನವ,ಮನುಷ್ಯ ಎಂದು ಕರೆಯಲ್ಪಡುವ ಜೀವಿಗಳಲ್ಲಿ ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರ್ತಿಸಿದ್ದು, ಇಂದಿನ ಸಮಾಜದಲ್ಲಿ ಪುರುಷ,ಮಹಿಳೆ ಎಂಬ ಯಾವುದೇ ಬೇಧ ಭಾವವಿಲ್ಲ ಎಂದರು.ಅದೇ ನಿಟ್ಟಿನಲ್ಲಿ ಸೃಜನಾ ಮಹಿಳಾ ಸಂಘಟನೆಯು ಗಂಡು-ಹೆಣ್ಣು ಎಂದು ಪ್ರತ್ಯೇಕವಾಗಿ ನೋಡದೇ,ತಮ್ಮಲ್ಲಿನ ಸಂಘಟನೆಯನ್ನು ಬಿಂಬಿಸುತ್ತಿದೆ ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಿಂತ ಪುರುಷರು ಅನೇಕ ಮಾರಕ ರೋಗಗಳಿಂದ ಬಳಲುತ್ತಿದ್ದಾರೆ.ಅದರಂತೇ ಮಹಿಳೆಯರು ಸಹ ಏಡ್ಸ್,ಸ್ತನಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಉತ್ತಮ ಆರೋಗ್ಯದ ಬಗೆಗಿನ ವಿಚಾರಗಳನ್ನು,ಕಾನೂನುಗಳನ್ನು ತಿಳಿಯುವುದರೊಂದಿಗೆ ಅನೇಕ ಸಾಮಾಜಿಕ ಸೌಲಭ್ಯಗಳನ್ನು ಮಹಿಳೆಯರು ಪಡೆಯುವ ಮೂಲಕ ಸಮಾಜದಲ್ಲಿ ಸಬಲರಾಗಿ ಬಾಳಬೇಕಿದೆ ಎಂದು ಸಲಹೆ ನೀಡಿದರು.
ಮಹಿಳೆ ಮತ್ತು ಆರೋಗ್ಯ ಎಂಬ ವಿಷಯವನ್ನು ಕುರಿತಂತೆ ಡಾಸಿ.ಎನ್.ರಂಗನಾಥ್ ಮಾತನಾಡಿ,ಮಹಿಳೆ ತನ್ನ ಆರೋಗ್ಯವನ್ನು ಮೊದಲು ಚೆನ್ನಾಗಿರಿಸಿಕೊಳ್ಳಬೇಕು. ಕಾರಣ ಒಂದು ಮನೆಯಲ್ಲಿ ತಾಯಿ ಆರೋಗ್ಯವಾಗಿದ್ದರೆ,ಆಕೆ ತನ್ನ ಇಡೀ ಮನೆಯ ಸದಸ್ಯರ ಆರೋಗ್ಯದ ಕಡೆ ಗಮನ ನೀಡುತ್ತಾಳೆ ಎಂದರು.ಅಲ್ಲದೆ ಇಂದು ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಿರದೇ ಸಮಾಜದಲ್ಲಿ ರಾಜಕೀಯವಾಗಿ,ಆರ್ಥಿಕವಾಗಿ ಮೇಲೇರುತ್ತಿದ್ದಾರೆ,ಆದರೆ ಈ ಸಾಧನೆ ಇನ್ನೂ ಹೆಚ್ಚಿನದಾಗಬೇಕಾದರೆ ಮಹಿಳೆಯರೆಲ್ಲರೂ ಉತ್ತಮ ಹಾಗೂ ಉನ್ನತ ಶಿಕ್ಷಣ ಪಡೆಯಬೇಕಿದೆ ಎಂದರು.
ಚಿಕ್ಕನಾಯಕನಹಳ್ಳಿ ಸೃಜನಾ ಸಂಘದ ಅಧ್ಯಕ್ಷೆ ಎಲ್.ಜಯಮ್ಮ,ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ ತುಳಸಿ ಸಸಿಗೆ ನೀರು ಹಾಕುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ,ಸೃಜನ ಕೈಬರಹ ಪತ್ರಿಕೆಯನ್ನು ಆನಾವರಣ ಮಾಡಲಾಯಿತು.ಸಂಘದ ಕಾರ್ಯದರ್ಶಿ ಜಯಲಕ್ಷ್ಮಿ ಹಾಗೂ ಮಹಿಳಾ ವಿಭಾಗದ ಸಂಚಾಲಕಿ ಚಂದ್ರಕಲಾ ಪ್ರಾಸ್ತಾವಿಕ ನುಡಿನುಡಿದರು,ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ನಿರೂಪಿಸಿ,ಸೃಜನ ಸಂಘದ ಕಾರ್ಯದರ್ಶಿ ಪೂರ್ಣಮ್ಮ ವಂದಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ