ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು ತಾಲ್ಲೂಕು ಕೇಂದ್ರ ಮಾಡಲು ಒತ್ತಾಯಿಸಿ ಪ್ರತಿಭಟನೆ

ರೈತಸಂಘ ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವ ಹುಳಿಯಾರು: ಹೋಬಳಿ ಕೇದ್ರವಾಗಿರುವ ಹುಳಿಯಾರು ಸಧ್ಯ ತಾಲ್ಲೂಕು ಕೇಂದ್ರವನ್ನು ಮೀರಿ ಬೆಳೆದಿದ್ದು ಜನಸಂಖ್ಯಾ ಆಧಾರದ ಮೇಲೆ ಈಗಲಾದರೂ ಹುಳಿಯಾರನ್ನು ತಾಲ್ಲೂಕು ಕೇಂದ್ರವಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಜಿಲ್ಲಾ ರೈತಸಂಘ (ಹೊಸಹಳ್ಳಿ ಚಂದ್ರಣ್ಣ ಬಣ) ಹಾಗೂ ಕರವೇ, ಜಯಕರ್ನಾಟಕ, ದಲಿತ ಸಂಘ, ಸೃಜನ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸೋಮವಾರದಂದು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.             ಇಲ್ಲಿನ ಪರಿವೀಕ್ಷಣಾಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಹೆಚ್.ರಸ್ತೆ, ಬಸ್ ನಿಲ್ದಾಣ ಮಾರ್ಗವಾಗಿ ಡಾ:ರಾಜ್‌ಕುಮಾರ್ ರಸ್ತೆ, ಪೊಲೀಸ್ ಠಾಣೆ ವೃತ್ತದ ಮೂಲಕ ನಾಡಕಚೇರಿ ತಲುಪಿ ಮನವಿ ಸಲ್ಲಿಸಿ ಸರ್ಕಾರವನ್ನು ಒತ್ತಾಯಿಸಿದರು.              ವಕೀಲ ಬಿ.ಕೆ.ಸದಶಿವು ಮಾತನಾಡಿ ಕೆಲವು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗಾಗಿ ಈ ಹಿಂದೆ ತಾಲ್ಲೂಕು ಕೇಂದ್ರವಾಗಿದ್ದ ಹುಳಿಯಾರನ್ನು ಬದಲಿಸಿ ಚಿಕ್ಕನಾಯಕನಹಳ್ಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಇದರಿಂದ ಹೋಬಳಿಯ ಗಡಿ ಪ್ರದೇಶದಲ್ಲಿ ನೆಲಸಿರುವ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಸುಮಾರು ೫೦ಕಿಮೀ ದೂರದಲ್ಲಿನ ಚಿಕ್ಕನಾಯಕನಹಳ್ಳಿ ಕೇಂದ್ರಕ್ಕೆ ತೆರಳುವಂತಾಗಿದೆ.ಅಲ್ಲದೆ ತಾಲ್ಲೂಕು ಕೇಂದ್ರಕ್ಕೆ ತೆರಳಲು ಗಡಿಭಾಗದ ಜನರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆಯು ಸಹಾ ಇಲ್ಲದೆ ಪರದ

ಕಾಣೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆ

ಹುಳಿಯಾರು: ಒಂದೂವರೆ ತಿಂಗಳ ಹಿಂದೆ ಕಾಣೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆಯಾಗಿರುವ ಘಟನೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.              ಪತ್ತೆಯಾಗಿರುವ ಅಸ್ಥಿಪಂಜರವನ್ನು ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಮದ ಮಲ್ಲಿಕಾರ್ಜುಯ್ಯ (೨೫) ಎಂಬಾತನದಿರಬಹುದೆಂದು ಊಹಿಸಲಾಗಿದೆ. ಈತ ಕಳೆದ ಡಿಸೆಂಬರ್ ಮಾಹೆಯ ೧೦ ನೇ ತಾರೀಖು ಚೀಟಿಗೆ ಹಣ ಕಟ್ಟಲು ಸ್ನೇಹಿತನಿಂದ ಹಣ ಪಡೆದು ಬರುವುದಾಗಿ ಹೇಳಿ ಮನೆಯಿಂದ ಹೋದವನು ಇದುವರೆವಿಗೂ ಹಿಂದಿರುಗಿರುವುದಿಲ್ಲ ಎನ್ನಲಾಗಿದೆ.           ಮಲ್ಲಿಕಾರ್ಜುನಯ್ಯ ಕಾಣೆಯಾಗಿರುವ ಬಗ್ಗೆ ಪೋಷಕರು ಹುಳಿಯಾರು ಪೊಲೀಸ್ ಠಾಣೆಗೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ನೀಡಿದ್ದರು. ಆದರೆ ಇದುವರೆವಿಗೂ ಈತನ ಬಗ್ಗೆ ಯಾವುದೇ ಸುಳಿಹು ಪತ್ತೆಯಾಗಿರಲಿಲ್ಲ. ಭಾನುವಾರ ಸಂಜೆ ಕುರಿಗಾಹಿ ತೊರೆಮನೆಯ ರಾಮಣ್ಣ ಅವರು ಕುರಿ ಮೇಯಿಸಲು ಹುಳಿಯಾರು ಸಮೀಪದ ತಿಮ್ಲಾಪುರ ಕೆರೆಗೆ ಹೋದಾಗ ಅಲ್ಲಿ ಪಂಜೆ, ಶರ್ಟ್, ಬನೀನು, ಚಪ್ಪಲಿ ಹಾಗೂ ತಲೆ ಬುರುಡೆ ಸೇರಿದಂತೆ ಕೆಲ ಮೂಳೆಗಳು ಪತ್ತೆಯಾಗಿದೆ.           ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದರೆ ತಿಮ್ಲಾಪುರ ಕೆರೆಯ ಬಳ್ಳಾರಿ ಜಾಲಿ ಪೊದೆಯಲ್ಲಿ ಪತ್ತೆಯಾಗಿರುವ ಬಟ್ಟೆಯ ಕುರುಹು ಹಾಗೂ ದೊಡ್ಡ ಬಿದರೆ ಮಲ್ಲಿಕಾರ್ಜುನಯ್ಯ ಅವರ ಪೋಷಕರು ಕೊಟ್ಟ ಮಲ್ಲಿಕಾರ್ಜುನಯ್ಯ ಅವರ ಬಟ್ಟೆಯ ಕುರುಹು ಹೊಂದಾಣಿಕೆಯಾಗಿದ್ದು ಅಸ್ಥಿಪಂಜರ ಮಲ್ಲಿಕಾರ್ಜುನಯ್ಯ ಅವರದೇ

ಮಡಲಕ್ಕಿ ಸೇವೆಯೊಂದಿಗೆ ಹುಳಿಯಾರಮ್ಮ ಜಾತ್ರೆಗೆ ಚಾಲನೆ

ಹುಳಿಯಾರು: ಗ್ರಾಮದೇವತೆ ಶ್ರಿ ಹುಳಿಯಾರಮ್ಮನವರ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಅಮ್ಮನವರಿಗೆ ಮಡಲಕ್ಕಿ ಸೇವೆ ಸಲ್ಲಿಸುವ ಮೂಲಕ ಶನಿವಾರದಂದು ಚಾಲನೆ ನೀಡಲಾಯಿತು.ನಂತರ ಊರಿನ ಗೌಡರು,ಭಕ್ತರ ಮನೆಗೆ ತೆರಳಿ ಮಡಿಲಕ್ಕಿ ಶಾಸ್ತ್ರ ಮುಗಿಸಿ ಗ್ರಾಮದೇವತೆ ದುರ್ಗಮ್ಮನೊಂದಿಗೆ ಕೋಡೀಪಾಳ್ಯಕ್ಕೆ ತೆರಳಿತು.       ದೇವಾಲಯದ ಅಧ್ಯಕ್ಷ ನರೇಂದ್ರಬಾಬು,ದುರ್ಗಾಪರಮೇಶ್ವರಿ ದೇವಾಲಯದ ಕನ್ವೀನರ್ ಹು.ಕೃ.ವಿಶ್ವನಾಥ್,ಗುಂಚಿಗೌಡರುಗಳಾದ ಪಾಳ್ಯ ದುರ್ಗಪ್ಪ,ದುರ್ಗರಾಜು,ಟೈಲರ್ ಹನುಮಂತ ರಾವ್, ಟೈಲರ್ ಗೋಪಿ,ಏಜೆಂಟ್ ಗಂಗಣ್ಣ,ರಂಗನಾಥ್ ಪ್ರಸಾದ್ ಮುಂತಾದವರಿದ್ದರು. ಜಾತ್ರಾ ಮಹೋತ್ಸವ ಫೆ.5 ರವರೆಗೆ ನಡೆಯಲಿದೆ. ಕಾರ್ಯಕ್ರಮ: 29 ರಂದು ಕಾಮಶೆಟ್ಟಿಪಾಳ್ಯ ,ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ ಜ.30 ರಂದು ಧ್ವಜಾರೋಹಣ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನಡೆಯಲಿದೆ. ಜ.31 ರಂದು ಆರತಿ ಬಾನ ಹಾಗೂ ಎಡೆ ಸೇವೆ ಫೆ.1ರಂದು ಗ್ರಾಮದೇವತೆ ದುರ್ಗಮ್ಮ ಕೆಂಚಮ್ಮದೇವಿ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ. ಫೆ.2 ರ ಗುರುವಾರದಂದು ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ , ಫೆ 3 ರ ಶುಕ್ರವಾರದಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ ನಡೆದು ಶನಿವಾರ ಕಂಕಣವಿಸರ್ಜನೆ ,ಓಕಳಿ ಮತ್ತು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಭಕ್ತಾಧಿಗಳು ಹೆಚ್ಚ

ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ

ಹುಳಿಯಾರು : ಪ್ರತಿಯೊಂದು ಮಗುವಿಗೂ ಸಹಾ ಕಡ್ಡಾಯವಾಗಿ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನ ಆಸ್ತಿವಂತರನ್ನಾಗಿ ಮಾಡುವಂತೆ ಸಿ.ಆರ್.ಪಿ.ಪ್ರೇಮಲೀಲಾ ಸಲಹೆ ನೀಡಿದರು. ಹುಳಿಯಾರಿನ ಎಂ.ಪಿ.ಎಸ್.ಸರ್ಕಾರಿ ಶಾಲೆಯ ವಾರ್ಷಿಕೊತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.         ಇಂದಿನ  ಸ್ಪರ್ಧ್ಮಾತ್ಮಕ  ಯುಗದಲ್ಲಿ ಶಿಕ್ಷಣ ಅತಿ ಮುಖ್ಯವಾಗಿದ್ದು ಪ್ರತಿಯೊಬ್ಬರು ಸಹಾ ಕಡ್ಡಾಯವಾಗಿ ಶಿಕ್ಷಣವನ್ನ ಕಲಿಯುವುದು ಮುಖ್ಯವಾಗಿದೆ ಎಂದರು.        ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸರಕಾರವು ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದು ಉಚಿತ ಸೈಕಲ್, ಸಮವಸ್ತ್ರ, ಪಠ್ಯಪುಸ್ತಕ, ಸೇರಿದಂತೆ ಅನೇಕ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಸಮಪರ್ಕವಾಗಿ ಸದಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗುವಂತೆ ತಿಳಿಸಿದರು.          ಹೆಚ್.ಪಿ.ಜಿ.ಎಸ್.ಶಾಲೆಯ ಮುಖ್ಯಶಿಕ್ಷಕ ನಂದಾವಡಗಿ ಮಾತನಾಡಿ ಈ ಶಾಲೆಯ ಆವರಣದಲ್ಲಿ ಲೈಟ್ ಇಲ್ಲದಿರುವುದರಿಂದ ರಾತ್ರಿಯ ಕತ್ತಲಿನಲ್ಲಿ ಶಾಲೆಯ ಮುಂಭಾಗ ಮತ್ತು ಕೊಠಡಿಗಳ ಕಟ್ಟೆಯ ಮೇಲೆ ಕೆಲವು ಕಿಡಿಗೇಡಿಗಳು ರಾತ್ರಿಯ ವೇಳೆ ಮದ್ಯಪಾನ ಮಾಡಿ ಕಾಲಿಬಾಟಲ್‌ಗಳನ್ನ ಎಸೆದಿರುತ್ತಾರೆ. ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಗೆ ದೂರನ್ನು ಸಹಾ ನೀಡಲಾಗಿದ್ದರೂ ಸಹಾ ಪ್ರಯೋಜನವಾಗಿಲ್ಲಾ. ಈಗಲಾದರೂ ಗ್ರಾಮಪಂಚಾಯ್ತಿಯವರು ಶಾಲೆಯ ಆವರಣಕ್ಕೆ ಎರಡು ದೊಡ್ಡ ವಿದ್ಯುತ್ ಲೈಟ್ ಅಳವಡಿಸುವ ಮೂಲಕ ಇಂತಹ ಕೃತ್ಯಕ್ಕೆ ತಡೆಯೊಡ್ಡಬೇಕೆಂದು ಮನವಿ ಮ

ಬಸ್ ನಿಲ್ದಾಣದಲ್ಲಿ ಸೌಕರ್ಯ ಕಲ್ಪಿಸಲು ಮನವಿ

ಹುಳಿಯಾರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಬಂದು ಹೋಗುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆಯಿಲ್ಲ,ಇರುವ ಪ್ರಯಾಣಿಕರ ತಂಗುದಾಣವಂತೂ ಗಬ್ಬೆದು ಹೋಗಿದ್ದು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿದ್ದು ನೀರುನಿಡಿಯಿಲ್ಲದಿರುವ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಮಾಲಿ ಸಂಘ ಒತ್ತಾಯಿಸಿದೆ.        ಹುಳಿಯಾರಿನ ಬಸ್ ನಿಲ್ದಾಣದ ಪಕ್ಕದ ಕೆರೆ ದಂಡೆಯ ಮೇಲೆ ಹಮಾಲಿ ಸಂಘ, ಫುಟ್‌ಪಾತ್ ವ್ಯಾಪಾರಿಗಳು, ಬಸ್ ಏಜೆಂಟ್‌ಗಳು ಕಾಡು ಗೋಡಂಬಿ ಸಸಿ ನೆಟ್ಟು ನಿಲ್ದಾಣದಲ್ಲಿನ ಸಮಸ್ಯೆ ಬಗ್ಗೆ ಗಮನಸೆಳೆದರು.          ಹುಳಿಯಾರು ಪಟ್ಟಣ ತಾಲ್ಲೂಕು ಮಟ್ಟಕ್ಕೆ ಬೆಳೆದು ನಿಂತಿದ್ದು ಪ್ರತಿದಿನ ನೂರಾರು ಸರ್ಕಾರಿ ಬಸ್‌ಗಳು ಸೇರಿದಂತೆ ಅಪಾರ ಸಂಖ್ಯೆಯ ಖಾಸಗಿ ವಾಹನಗಳು ಬಸ್ ನಿಲ್ದಾಣಕ್ಕೆ ಬಂದು ಹೋಗಿ ಮಾಡುತ್ತವೆ. ಸಾವಿರಾರು ಪ್ರಯಾಣಿಕರು ಬಂದುಹೋಗಿ ಮಾಡುತ್ತಾರೆ.ಆದರೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಹಾಗೂ ಸೂಕ್ತ ಆಸನದ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಆರೋಪಿಸಿದರು. ಪ್ರಯಾಣ ಬೆಳೆಸಲು ಬರುವ ವಯೋವೃದ್ಧರು, ಗರ್ಭಿಣಿಯರು, ಶಾಲಾ ವಿದ್ಯಾರ್ಥಿಗಳು, ಅಂಗವಿಕಲರು ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆಯಿಲ್ಲದೆ ಗಂಟೆಗಟ್ಟಲೆ ನಿಂತು ನೋವನ್ನನುಭವಿಸುತ್ತಾರೆ. ಕುಡಿಯಲಿಕ್ಕೆ ನೀರು ಸಿಗದೆ ಅಕ್ಕಪಕ್ಕದ ಹೋಟೆಲ್‌ಗಳಿಗೆ ತೆರಳಿ ಕಾಡಿಬೇಡುವ ದೃಶ್ಯ ಸಾಮಾನ್ಯವಾಗಿದೆ ಎಂದರು.    

ಗೌಡಗೆರೆಯಲ್ಲಿ ಇಂದು ಮತ್ತು ನಾಳೆ ಮಂಡಲಪೂಜೆ

ಹುಳಿಯಾರು: ಸಮೀಪದ ಗೌಡಗೆರೆಯಲ್ಲಿ ಶ್ರೀದುರ್ಗಾದೇವಿಯವರ ಮಂಡಲ ಪೂಜ ಕಾರ್ಯಕ್ರಮವನ್ನು ಜ.೧೯ರ ಗುರುವಾರ ಮತ್ತು ಜ.೨೦ ಶುಕ್ರವಾರ ಎರಡು ದಿನಗಳ ಕಾಲ ಜರುಗಲಿದೆ.         ಜ. ೧೯ ರ ಗುರುವಾರ ಸಂಜೆ ಹುಳಿಯಾರಿನ ಗ್ರಾಮದೇವತೆ ಶ್ರೀಹುಳಿಯಾರಮ್ಮನವರ ಆಗಮನ ನಂತರ ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಪಂಚಗವ್ಯ, ಕಳಶಸ್ಥಾಪನೆ ಮಹಾಮಂಗಳಾರತಿ ನಡೆಯಲಿದೆ.         ಜ. ೨೦ ರ ಶುಕ್ರವಾರ ಬೆಳಿಗ್ಗೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಪ್ರಾರ್ಥನೆ, ವೇದಪಾರಾಯಣ, ಕಳಸಪೂಜೆ, ಅಗ್ನಿಪ್ರತಿಷ್ಠಾಪನೆ, ಹೋಮ, ವಿಶೇಷವಾಗಿ ರುದ್ರಹೋಮ ಮತ್ತು ಶ್ರೀಲಲಿತ ಸಹಸ್ರನಾಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಗೌಡಗೆರೆ ಮಜುರೆಯ ಕೆ.ಸಿ.ಪಾಳ್ಯ, ಕುರಿಹಟ್ಟಿ, ಕೋಡಿಪಾಳ್ಯ, ಗೌಡಗೆರೆ, ದಸೂಡಿ, ಬೆನಕನಹಳ್ಳಿ, ಎಲ್ಲಾ ಗ್ರಾಮಗಳಿಗೆ ಸೇರಿದ ಭಕ್ತಾದಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಆಗಮಿಸುವಂತೆ ದೇವಸ್ಥಾನದ ಧರ್ಮದರ್ಶಿ ಕೃಷ್ಣಮೂರ್ತಿ ಕೋರಿದ್ದಾರೆ.

ಕೊಬ್ಬರಿ ಧಾರಣೆಯಲ್ಲಿ ಏರಿಕೆ

ಹುಳಿಯಾರು : ಕಳೆದ ಹಲವಾರು ತಿಂಗಳಿನಿಂದ ಆರುಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ಇದೀಗ 600 ರೂ ದಿಢೀರ್ ಏರಿಕೆ ಕಂಡಿದ್ದು ಬುಧವಾರದಂದು ನಡೆದ ತಿಪಟೂರು ಹರಾಜಿನಲ್ಲಿ 7360 ಧಾರಣೆ ಕಂಡಿದೆ.         ಹುಳಿಯಾರು ಮಾರುಕಟ್ಟೆಯಲ್ಲಿ ಕಳೆದ ವಾರದ ಹರಾಜಿನಲ್ಲಿ 6565 ರೂ ಬೆಲೆಗೆ ಟೆಂಡರ್ ನಿಂತಿದ್ದು ಸೋಮವಾರದ ಬೆಲೆ 6700 ರೂ ಇತ್ತು.ಇದೀಗ ತಿಪಟೂರು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಇಲ್ಲೂ ಕೂಡ 7300 ರೂ ನಂತೆ ಖರೀದಿ ನಡೆಯಲಿದೆ.       ಹುಳಿಯಾರಿನ ಮಾರುಕಟ್ಟೆಯಲ್ಲಿ ಗುರುವಾರ ನಾಲ್ಕು ಗಂಟೆಗೆ ಟೆಂಡರ್ ನಡೆಯಲಿದ್ದು ಬೆಲೆ ಮತ್ತಷ್ಟು ಏರಿಕೆ ಕಾಣಲಿದೆಯೆಂದು ಕೊಬ್ಬರಿ ವರ್ತಕರು ಹಾಗೂ ಎಪಿಎಂಸಿ ಸದಸ್ಯರು ಆದ ಚಿಕ್ಕಬಿದರೆ ಶಾಂತಣ್ಣ ಸುಳಿವು ನೀಡಿದ್ದಾರೆ.

ಸಂಕಷ್ಟಹರ ಚತುರ್ಥಿ ಅಂಗವಾಗಿ ಗಣಪನಿಗೆ ಅವರೆಕಾಯಿ ಅಲಂಕಾರ

ಹುಳಿಯಾರು: ಪಟ್ಟಣದ ಶ್ರೀಪ್ರಸನ್ನ ಗಣಪತಿ ದೇವಾಯಲದಲ್ಲಿ ಸಂಕಷ್ಟಹರ ಚತುರ್ಥಿ ವಿಧಿವತ್ತಾಗಿ ನೆರವೇರಿತು .ಪೂಜೆಯ ಅಂಗವಾಗಿ ಗಣಪತಿಗೆ ವಿಶೇಷವಾಗಿ  ಅವರೆಕಾಳು  ಹಾಗೂ ಅವರೆಕಾಯಿಯ ಅಲಂಕಾರ ಮಾಡಲಾಗಿತ್ತು . ಗಣಪತಿಗೆ ಮಾಡಲಾಗಿದ್ದ ಅವರೆಕಾಯಿ ಅಲಂಕಾರ        ಅರ್ಚಕ ರಾಜಣ್ಣ ಹಾಗೂ ಚೇತನ್ ಅವರುಗಳ ೨೩ ಗಂಟೆಗಳ ಕಾಲ ಪರಿಶ್ರಮದಿಂದ ಗಣಪನಿಗೆ ಮಾಡಲಾಗಿದ್ದ ಅಲಂಕಾರ ಎಲ್ಲರ ಗಮನ ಸೆಳೆಯಿತು.ವ್ರತಧಾರಿ ಮಹಿಳೆಯರು ಗಣಪನಿಗೆ ಅರ್ಘ್ಯ ನೀಡಿ ಚಂದ್ರದರ್ಶನ ಪದೆದರು.         ಇಂದಿನ ಪೂಜೆ ಸತ್ಯನಾರಯಣ ಜೋಯಿಸ್,ಅರ್ಚಕ ರಾಜಣ್ಣನಡೆಸಿಕೊಟ್ಟರು.ಆಗಮಿಸಿದ್ದ ಭಕ್ತಾಧಿಗಳಿಗೆ ಮೋದಕ ಪ್ರಸಾದ ಹ್ಜಾಗೂ ಫಲಹಾರ ವಿತರಿಸಲಾಯಿತು.ಅಧ್ಯಕ್ಷ ಮೋಹನ್,ಹೂವಿನ ಬಸವರಾಜ್,ತಾಂಡವಾಚಾರ್,ತಮ್ಮಯ್ಯ,ವೆಂಕಟರಾಯ,ಗೌಡಿ,ದಯಾನಂದ್ ಮೊದಲಾದವರಿದ್ದರು.

ಲಂಚಮುಕ್ತ ಕಂದಿಕೆರೆ ಪಂಚಾಯ್ತಿ ಅಭಿಯಾನ

ಸಮಸ್ಯೆಗಳ ಸರಮಾಲೆ ಹೊದ್ದಿರುವ ಕಛೇರಿ :ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು 30ದಿನಗಳ ಗಡುವು ಹುಳಿಯಾರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸದಸ್ಯರಿಂದ "ಲಂಚ ಮುಕ್ತ ಚಿಕ್ಕನಾಯಕನಹಳ್ಳಿ" ಅಭಿಯಾನದ ಮುಂದುವರೆದ ಭಾಗವಾಗಿ ಲಂಚಮುಕ್ತ ಕಂದಿಕೆರೆ ಪಂಚಾಯ್ತಿ ಅಭಿಯಾನವನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಂದೀಕೆರೆ ಹೋಬಳಿ ಗ್ರಾಮಪಂಚಾಯ್ತಿಯ ಮುಂದೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸದಸ್ಯರುಗಳು.     ಹತ್ತು ಗಂಟೆ ಸುಮಾರಿಗೆ ವೇದಿಕೆಯ ಸದಸ್ಯರುಗಳು ಹಾಗೂ ಸಾರ್ವಜನಿಕರೊಂದಿಗೆ ಅಭಿಯಾನ ಆರಂಭಿಸಿ ಕಂದಿಕೆರೆಯ ವಿವಿಧ ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆಗಳನ್ನು ಪಟ್ಟಿಮಾಡಲಾಯಿತು.       ಸಾರ್ವಜನಿಕರ ದೂರನ್ನಾಧರಿಸಿ ಮೊದಲಿಗೆ ಅಲ್ಲಿನ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಗ್ರಾಮ ಪಂಚಾಯತ್ ಯೋಜನೆಗಳ ಅನುಷ್ಟಾನ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮತ್ತು ಗ್ರಾಮ ಸಭೆಗಳ ಬಗ್ಗೆ ವಿವರಣೆ ಪಡೆಯಲಾಯಿತು.ದಾಖಲೆಗಳ ಪರಿಶೀಲನೆ ಮಾಡಲಾಗಿ ನಮ್ಮ ಗ್ರಾಮ,ನಮ್ಮ ಯೋಜನೆಯ ಜಾರಿ ಮಾಡಿಲ್ಲದಿರುವುದು,ಪಂಚಾಯ್ತಿ ಸದಸ್ಯರ ಆಸ್ತಿ ವಿವರ ಲಭ್ಯವಿಲ್ಲದಿರುವುದು,ಪಂಚಾಯ್ತಿಯಲ್ಲಿ ದೊರೆಯಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಫಲಕ ಪ್ರದರ್ಶಿಸದಿರುವುದು,ದೂರುಪೆಟ್ಟಿಗೆ ಇಲ್ಲದಿರುವುದು,ಸಕಾಲ ಅನುಷ್ಟಾನ ,ಮಾಹಿತಿ ಹಕ್ಕು ಅನುಷ್ಟಾನದಲ್ಲಿ ಹಿನ್ನಡೆ ಹೀಗೆ ಅನ

ಗ್ರಾಪಂ ಸದಸ್ಯೆ ಗಾಯತ್ರಿದೇವಿ ಆರೋಪದಲ್ಲಿ ಹುರುಳಿಲ್ಲ:ಅಧ್ಯಕ್ಷ ದೇವರಾಜು

ಸುಖಾಸುಮ್ಮನೆ ಪ್ರಚಾರದ ಹುಚ್ಚಿನಿಂದ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟಮೊಕದ್ದಮೆ ಹುಳಿಯಾರು: ಗ್ರಾಮನೈರ್ಮಲ್ಯ ಯೋಜನೆಯ ಕೂಲಿ ಕಾರ್ಮಿಕರ ಹಣವನ್ನು ನೇರವಾಗಿ ಅವರವರ ಹೆಸರಿಗೆ ಚೆಕ್ ಕೊಡುವ ಪರಿಪಾಠವಿದ್ದು, ಸದಸ್ಯೆ ಗಾಯತ್ರಿದೇವಿ ಕೂಲಿಹಣ ನೀಡಲು ನೀಡಿರುವ ದಾಖಲೆಗಳಲ್ಲಿನ ಪೋಟೊಗಳಲ್ಲಿರುವ ಕಾರ್ಮಿಕರೇ ಬೇರೆ ಹಾಗೂ ಹಣ ನೀಡುವಂತೆ ಕೇಳುತ್ತಿರುವ ವ್ಯಕ್ತಿಗಳೇ ಬೇರೆ .ತಮ್ಮ ಅಧಿಕಾರ ದುರುಪಯೋಗಿಸಿಕೊಂಡು ಅನ್ಯ ವ್ಯಕ್ತಿಯ ಹೆಸರಿಗೆ ಚೆಕ್ ಕೊಡಿ ಎಂದು ಹೇಳಿದರೇ ಕೊಡಲು ಹೇಗೆ ಸಾಧ್ಯ ಎಂದು ತಿರುಮಲಾಪುರ ಗ್ರಾಪಂ ಅಧ್ಯಕ್ಷ ದೇವರಾಜ್ ಪ್ರಶ್ನಿಸಿದರು. ಗ್ರಾಮ ನೈರ್ಮಲ್ಯ ಯೋಜನೆಯ ಕುರಿತಂತೆ ತಿರುಮಲಾಪುರ ಗ್ರಾಮಪಂಚಾಯ್ತಿಯಲ್ಲಿ ಸೋಮವಾರದಂದು ಸುದ್ದಿಗೋಷ್ಟಿ ನಡೆಸಿದ ಅಧ್ಯಕ್ಷ ದೇವರಾಜು.ಗ್ರಾಪಂ ಉಪಾಧ್ಯಕ್ಷ ಮೋಹನ್ ಕುಮಾರ್,ಮಾಜಿ ಅಧ್ಯಕ್ಷ ಹೊಸಹಳ್ಳಿಪಾಳ್ಯ ಕೃಷ್ಣಮೂರ್ತಿ ಮೊದಲಾದವರಿದ್ದಾರೆ.            ಗಾಯತ್ರಿದೇವಿ ಗ್ರಾಪಂ ಸದಸ್ಯೆಯಾಗಿದ್ದು ಅಧಿಕಾರ ಚಲಾಯಿಸದೆ ತಮ್ಮ ಪತಿ ಸುರೇಶ್ ಗೆ ಅವಕಾಶ ನೀಡಿರುವುದು ಸರಿಯೇ. ಈತ ಪ್ರತಿಯೊಂದಕ್ಕೂ ಪಂಚಾಯ್ತಿಗೆ ಆಗಮಿಸಿ ಆ ಬಿಲ್ ,ಈ ಬಿಲ್ ಹಣ ಕೊಡಿ ಎಂದು ಸಿಬ್ಬಂದಿಗಳ ಮೇಲೆ ದರ್ಪ ತೋರುತ್ತಾರೆ.ಇವರ ಮೊನ್ನಿನ ದುಂಡಾವರ್ತನೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಈತನ ಬಾಯಿಂದ ಬರುವ ಅವ್ಯಾಚ ಪದಗಳಿಗೆ ಹೆದರಿ ಈಗಾಗಲೇ ಮೂರು ಮಂದಿ ಕಾರ್ಯದರ್ಶಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದ

ಸೀಗೆಬಾಗಿಯಲ್ಲಿ ಸಂಕ್ರಾಂತಿ ಜೋರು

ಮೊಲ ಬಿಡುವ ಮೂಲಕ ಸಂಕ್ರಾಂತಿ ಆಚರಣೆ  ಡಿ.ಆರ್.ನರೇಂದ್ರಬಾಬು --------- ಹುಳಿಯಾರು : ಸುಗ್ಗಿ ಹಬ್ಬವಾದ ಸಂಕ್ರಾತಿಯನ್ನು ರಾಜ್ಯದೆಲ್ಲೆಡೆ ಒಂದೊಂದು ರೀತಿ ತಮ್ಮ ವಾಡಿಕೆಯಂತೆ ಆಚರಿಸಿದರೆ, ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮಾತ್ರ ಮೊಲ ಬಿಡುವ ಮೂಲಕ ಸಂಕ್ರಾತಿ ಹಬ್ಬವನ್ನು ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಸುತ್ತಾರೆ. ಸುಮಾರು ೩೫೦ ಮನೆಗಳಿರುವ ಈ ಗ್ರಾಮದಲ್ಲಿ ಸಂಕ್ರಾಂತಿಯನ್ನು ಗ್ರಾಮಹಬ್ಬದ ರೀತಿ ಗ್ರಾಮಸ್ಥರೆಲ್ಲಾ ಜಾತಿಬೇಧ ಮರೆತು ಆಚರಿಸುತ್ತಾರೆ.  ಸೀಗೆಬಾಗಿಯ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸಿದ ನೂರಕ್ಕೂ ಅಧಿಕ ಸಂಖ್ಯೆಯ ದಾಸಪ್ಪಗಳು          ಅಂದು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ವರದರಾಜಸ್ವಾಮಿ ದೇವಸ್ಥಾನಕ್ಕೆ ಅಡುಗೆಬುತ್ತಿಯನ್ನು ಹೊತ್ತು ತಂದು ಎಲ್ಲರು ಒಟ್ಟಾಗಿ ಹಂಚಿಕೊಂಡು ಊಟ ಮಾಡುವುದು ಇಲ್ಲಿನ ವಾಡಿಕೆ.          ಅದರಂತೆ ಹಬ್ಬದ ದಿನ ಗ್ರಾಮದವರು ತಮ್ಮ ಮನೆಯಲ್ಲಿ ಸಿದ್ದ ಮಾಡಿದ ಎಡೆಯನ್ನು ತಂದು ವರದರಾಜ ಸ್ವಾಮಿಗೆ ಅರ್ಪಿಸುವ ಮೂಲಕ ಎಡೆಗೆಸೇವೆ ಹಾಗೂ ಪೂಜಾ ಕೈಂಕರ್ಯ ನಡೆಸಿದರು.       ಹಬ್ಬದ ಮಾರನೇ ದಿನ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸುವ ನೂರಕ್ಕೂ ಅಧಿಕ ಸಂಖ್ಯೆಯ ದಾಸಪ್ಪಗಳು ಸಂಪ್ರದಾಯ ಉಡುಗೆ ತೊಟ್ಟು ನಂತರ ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ಸಾಂಕೇತಿಕವಾಗಿ ಪಡಿಆಟದ ಮೂಲಕ ಬೇ

ಹುಳಿಯಾರಿನಲ್ಲಿ ಸಂಭ್ರಮದ ಸಂಕ್ರಾಂತಿ : ವಿವಿಧೆಡೆ ನಾಗರು ಆಚರಣೆ

ಹುಳಿಯಾರು : ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯ ಆಚರಣೆ ಗರಿಗೆದರಿದ್ದು , ಬಗೆಬಗೆಯ ಅಡುಗೆಯ ಜೊತೆಗೆ ಎಳ್ಳು-ಸಕ್ಕರೆಅಚ್ಚು, ಎಳ್ಳು-ಬೆಲ್ಲದ ಕಂಪು ಹರಡಿದ್ದು ಕಂಡುಬಂತು.             ಹಬ್ಬದ ಅಂಗವಾಗಿ ಕೆಲವರು ಮನೆಯಲ್ಲೇ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳುಬೆಲ್ಲವನ್ನು ನೈವೇದ್ಯ ಮಾಡಿದರೆ, ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಎಳ್ಳುಬೆಲ್ಲವನ್ನು ಹಂಚಿ ಪೂಜೆ ಸಲ್ಲಿಸಿದರು.           ಹಬ್ಬದ ಅಂಗವಾಗಿ ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಾಲಯ,ಆಂಜನೇಯಸ್ವಾಮಿ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮ,ದುರ್ಗಮ್ಮ ,ಕೆಂಚಮ್ಮನ ದೇವಾಲಯ ಹಾಗೂ ಬನಶಂಕರಿ ಸನ್ನಿಧಿಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಮಾಡಿಸುತ್ತಿದ್ದು ಕಂಡುಬಂತು.ದುರ್ಗಾಪರಮೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಹುಳಿಯಾರಿನಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಎಳ್ಳುಬೀರಲು ರೆಡಿಯಾಗಿರುವ ಹೆಣ್ಣುಮಕ್ಕಳು.        ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಸಕ್ಕರೆಅಚ್ಚು,ಕಬ್ಬು ಹಂಚುವ ವಾಡಿಕೆಯಿದ್ದು ಹೆಣ್ಣುಮಕ್ಕಳು ಬಗೆಬಗೆಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಳ್ಳು-ಬೆಲ್ಲ, ಕಬ್ಬನ್ನು ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಹಬ್ಬದ ಶುಭಾಷಯ ತಿಳಿಸುತ್ತಿದ್ದು ಸಾಮಾನ್ಯವಾಗಿತ್ತು. ಎಪಿಎಂಸಿಯಲ್ಲೂ ಧರಣಿಯಲ್ಲಿ ತೊಡಗಿ

ಹುಳಿಯಾರಿನ ಎಪಿಎಂಸಿಯಲ್ಲಿ ಸಂಕ್ರಾಂತಿ

ಹುಳಿಯಾರಿನ ಎಪಿಎಂಸಿಯಲ್ಲಿ ಕಳೆದ ೬೪ ದಿನಗಳಿಂದ ಧರಣಿಯಲ್ಲಿ ತೊಡಗಿರುವ ರೈತರು ಕೂಡ ಇಂದು ಸಂಕ್ರಾಂತಿ ಆಚರಿಸಿ ಹುರುಳಿತೊಕ್ಕು ,ಪೊಂಗಲ್ ಅಡುಗೆ ಮಾಡಿ ಸೇವಿಸಿದರು. 

ಕಾವ್ಯ ಅಂದರೆ ಪ್ರಾಸಬದ್ಧವಾಗಿ ನಾಲ್ಕು ಸಾಲಿನಲ್ಲಿ ಗೀಚುವ ಕವಿತೆಯಲ್ಲ ,ಇದೊಂದು ಜೀವನ ಕ್ರಮ

"ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೋ.ನಟರಾಜ್ ಬೂದಾಳ್  ಹುಳಿಯಾರು:ಕಾವ್ಯ ಅನ್ನುವುದು ನಿತ್ಯ ಬದುಕಿನ ಭಾಗವಾಗಿದ್ದು ಕಾವ್ಯ ಕಲೆ ಅಂತಿಮವಾಗಿ ರಸದೂಟವನ್ನು ಉಣಬಡಿಸುತ್ತದೆ.ಆರೋಗ್ಯಕ್ಕೆ ಒಳ್ಳೆಯ ಉಟ ಹೇಗೆ ಅಗತ್ಯವೋ ಉತ್ತಮ ಕಾವ್ಯ ರಚನೆಗೆ ನಮ್ಮ ಮನಸ್ಸು,ಚಿಂತನೆ ಆರೋಗ್ಯಕರವಾಗಿರಬೇಕು,ಸಾಹಿತ್ಯದ ಅನುಸಂಧಾನವಿರಬೇಕು,ಒಳ್ಳೆಯ ಅಡುಗೆ ಮಾಡುವುದು ಕೂಡ ಕಾವ್ಯವೇ ಎಂದು ಪ್ರೋ.ನಟರಾಜ್ ಬೂದಾಳ್ ತಿಳಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಬುಧವಾರದಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿತ "ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆಗೊಳಿಸಲಾಯಿತು.           ಹುಳಿಯಾರು-ಕೆಂಕೆರೆ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿಕನ್ನಡ ಸಾಹಿತ್ಯ ಪರಿಷತ್ತು ಹುಳಿಯಾರು ಘಟಕದಿಂದ ಬುಧವಾರದಂದು ಆಯೋಜಿಸಲಾಗಿದ್ದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿತ "ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾವ್ಯ ಪ್ರಸ್ತಾವನೆ ಮಾಡಿ ಮಾತನಾಡಿದ ಅವರು ಕಾವ್ಯ ಅಂದರೆ ಪ್ರಾಸಬದ್ಧವಾಗಿ ನಾಲ್ಕು ಸಾಲಿನಲ್ಲಿ ಗೀಚುವ ಕವಿತೆಯಲ್ಲ ,ಇದೊಂದು ಜೀವನ ಕ್ರಮವಾಗಿದೆ ಎಂದರು. ಈ ಕ್ಷಣದಲ್ಲೂ ಕೂಡ ಕವಿ ದಾರ್ಶನಿಕರು ನಮ್ಮಿಂದ ಹೊರಗಿದ್ದಾರೆ.ಜ್ಯೋತಿಷಿಗಳ ಮಾತು ನೂರಕ್ಕೆನೂರು ಕೇಳುವ ರಾಜಕಾರಣಿಗಳು ಕವಿ,ದಾ

ಇಂದು ಬನದ ಹುಣ್ಣಿಮೆ.... ಇದು ಈ ವರ್ಷದ ಪೂರ್ಣಚಂದಿರನ ಮೊದಲ ದಿನ

(ಕನ್ನಡಪ್ರಭದಲ್ಲಿನ ಮಂಡಗದ್ದೆ ಪ್ರಕಾಶಬಾಬು ಅವರ ಲೇಖನ ) ಒಂದು ಸಂವತ್ಸರದಲ್ಲಿ (ವರ್ಷದಲ್ಲಿ)12 ಹುಣ್ಣಿಮೆಗಳು ಬರುತ್ತದೆ. ಒಂದೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆಯಿದೆ. ಅದರಲ್ಲಿ ಪುಷ್ಯ ಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನುವರು. ಸಾಮಾನ್ಯವಾಗಿ ಇದು ಆಂಗ್ಲ ವರ್ಷದ ಜನವರಿಯಲ್ಲಿ ಬರುತ್ತದೆ. ಆದ್ದರಿಂದ ವರ್ಷದ ಮೊದಲ ಹುಣ್ಣಿಮೆ ಎಂದೂ ಹೇಳಬಹುದು.           ಅಗಸ್ತ್ಯ ಋಷಿಗಳು ಬನಶಂಕರಿ ದೇವಿಯನ್ನು ಬನಸಿರಿದೇವಿ ಎಂದು ಕರೆದಿರುವರು. ಕಾರಣ 'ಬನ' ಎಂದರೆ ಅರಣ್ಯ. 'ಸಿರಿ' ಎಂದರೆ ಸಂಪತ್ತು ಎಂದು.       ಬನದ ಹುಣ್ಣಿಮೆಯ ನವರಾತ್ರಿಯು ಪ್ರತಿವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನದಿಂದ ಪ್ರಾರಂಭ ಆಗುವುದು. ಆ ದಿನದಂದು ಅಷ್ಟಭುಜಗಳಾದ ಅಷ್ಟ ಸಿದ್ಧಿಯನ್ನು ಕೊಡುವ ಸರ್ವಮಂಗಳಾ ದೇವಿಯನ್ನು ಪೂಜಿಸಬೇಕು.        ನವಮಿ ದಿನದಂದು ಒಂಬತ್ತು ಕೋಟಿ ಸಖಿಯರಿಂದೊಡಗೂಡಿದ ನವದುರ್ಗೆ ದೇವಿಯನ್ನು ಪೂಜಿಸಬೇಕು.       ದಶಮಿಯಂದು ದಶ ದಿಕ್ಪಾಲಕ ಕಿರೀಟಗಳಿಂದ ಪೂಜಿತಳಾದ ಪಾದಪದ್ಮಗಳುಳ್ಳ ರಾವಣನನ್ನು ವಧೆ ಮಾಡಲು ವಿಧ್ಯುಕ್ತನಾದ ಶ್ರೀರಾಮನಿಗೆ ಸಂತೋಷ ಕೊಟ್ಟ ದೇವಿಯನ್ನು ಪೂಜಿಸಬೇಕು.              ಏಕಾದಶಿ ದಿನದಂದು ಏಕಾದಶ ರುದ್ರರಿಂದ ಪೂಜಿತಳಾದ ಪರಮೇಶ್ವರಿಯನ್ನು ಪೂಜಿಸಬೇಕು.       ದ್ವಾದಶಿಯಂದು ಆದಿತ್ಯ ಮಂಡಲ ಸ್ಥಳಾದ ಜಗನ್ಮಾತೆಯನ್ನು ಪೂಜಿ

ಕಾಮಶೆಟ್ಟಿಪಾಳ್ಯದಲ್ಲಿ ಬನಹುಣ್ಣಿಮೆ

ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದಲ್ಲಿ ಬನಶಂಕರಿ ಅಮ್ಮನವರ 7ನೇ ವರ್ಷದ ಬನದಹುಣ್ಣಿಮೆ ಕಾರ್ಯಕ್ರಮವನ್ನು ಇಂದು ಜ.11ರ ಬುಧವಾರ ಹಾಗೂ 12ರ ಗುರುವಾರದಂದು ಹಮ್ಮಿಕೊಳ್ಳಲಾಗಿದೆ.        ಇಂದು ಜ.11ರ ಬುಧವಾರ ಸಂಜೆ ಕೆಂಕೆರೆ ಕಾಳಿಕಾಂಭದೇವಿ ಹಾಗೂ ಹುಳಿಯಾರು ಕೆಂಚಮ್ಮದೇವಿಯವರ ಆಗಮನವಾಗಲಿದೆ.          ಜ.12 ರ ಗುರುವಾರ ಬೆಳಿಗ್ಗೆ 4ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಬನಶಂಕರಿ ಅಮ್ಮನವರಿಗೆ ರುದ್ರಾಭಿಷೇಕ,ಅಷ್ಟೋತ್ತರ ಪೂಜೆ ಹಾಗೂ 8 ಗಂಟೆಯಿಂದ ಗಣಪತಿ ಹೋಮ,ವಾಸ್ತುಹೋಮ,ನವಗ್ರಹ ಹೋಮ,ರುದ್ರಹೋಮ,ಮಹಾಲಕ್ಷ್ಮೀ ಹೋಮ ನಡೆದು ಪೂರ್ಣಾಹುತಿ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ. ರಾತ್ರಿ 8ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.         ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಬನಶಂಕರಿ ಕಮಿಟಿಯವರು ಕೋರಿದ್ದಾರೆ.

ಹುಳಿಯಾರು ಸಂಭ್ರಮದ ವೈಕುಂಠ ಏಕಾದಶಿ

ಹುಳಿಯಾರು :ಪಟ್ಟಣದ ಅನಂತಶಯನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಅಪಾರ ಭಕ್ತ ಸಮೂಹದೊಂದಿಗೆ ವೈಕುಂಠನಾರಾಯಣನ ನಾಮಸ್ಮರಣೆ ಮಾಡುತ್ತಾ ಸಂಭ್ರಮದಿಂದ ಆಚರಿಸಲಾಯಿತು. ಹುಳಿಯಾರಿನ ಅನಂತಶಯನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಲಕ್ಷ್ಮೀನಾರಾಯಣ ಹೋಮ ನೆರವೇರಿಸಲಾಯಿತು.            ಶ್ರೀಲಕ್ಷ್ಮಿರಂಗನಾಥಸ್ವಾಮಿ ದೇವಾಲಯದಲ್ಲಿ ೩ ನೇ ವರ್ಷದ ಆಚರಣೆ ಅಂಗವಾಗಿ ದೇವಾಲಯವನ್ನು ಝಗಮಗಿಸುವ ವಿದ್ಯುತ್ ದೀಪಾಲಂಕಾರ,ತಳಿರು ತೋರಣಗಳಿಂದ,ಸಪ್ತದ್ವಾರಗಳನ್ನು ನಿರ್ಮಿಸುವ ಮೂಲಕ ಭೂವೈಕುಂಠವೇನೋ ಎಂಬುವ ರೀತಿ ಅಲಂಕರಿಸಲಾಗಿತ್ತು. ಗ್ರಾಮದೇವತೆಗಳಾದ ಹುಳಿಯಾರಮ್ಮ ,ದುರ್ಗಮ್ಮ ಹಾಗೂ ಕೆಂಚಮ್ಮನವರ ಸಮ್ಮುಖದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ, ಪೂಜೆ,ಮಂಗಳಾರತಿ ,ನೈವೇದ್ಯ ಕಾರ್ಯ ನೆರವೇರಿಸಲಾಯಿತು.ನಂತರ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಲಕ್ಷ್ಮೀನಾರಾಯಣ ಹೋಮ ನೆರವೇರಿಸಲಾಯಿತು.ಸಂಜೆ ಸಪ್ತ ದ್ವಾರ ದರ್ಶನದ ಮೂಲಕ ಸ್ವಾಮಿಯ ವೈಕುಂಠ ದರ್ಶನವನ್ನು ಮಾಡಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರತಿಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.ವೈಕುಂಠ ಏಕಾದಶಿ ಸಮಿತಿಯಿಂದ ಲಾಡು ಹಾಗು ಗೊಜ್ಜವಲಕ್ಕಿ ಪ್ರಸಾದ ವಿತರಿಸಲಾಯಿತು.     ಸಮಿತಿಯ ಧನುಷ್ ರಂಗನಾಥ್,ವಿಶ್ವನಾಥ್,ಬಡ್ಡಿಪುಟ್ಟರಾಜು,ಶೇಷಾದ್ರಿ,ಚಿಕ್ಕಣ್ಣ,ಟಿ.ಆರ್.ರಂಗನಾ

ಲಂಚಮುಕ್ತ ಹುಳಿಯಾರು ಅಭಿಯಾನ ಇಂದು

ಹುಳಿಯಾರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಜ.೯ ರ ಬೆಳಿಗ್ಗೆ 10ಗಂಟೆಗೆ 'ಲಂಚ ಮುಕ್ತ ಚಿಕ್ಕನಾಯಕನಹಳ್ಳಿ'ಯ ಮುಂದುವರೆದ ಭಾಗವಾಗಿ 'ಲಂಚಮುಕ್ತ ಹುಳಿಯಾರು" ಅಭಿಯಾನ ಹಮ್ಮಿಕೊಳ್ಳಲಾಗಿದೆ.       ಈ ನಿಮಿತ್ತ ಪ್ರತಿಯೊಂದು ಸರ್ಕಾರಿ ಕಛೇರಿಗಳಲ್ಲೂ ಸಾಮಾಜಿಕ ಪರಿವೀಕ್ಷಣೆಯನ್ನು ಮಾಡಲಾಗುವುದು. ಹುಳಿಯಾರಿನ ನಾಡ ಕಛೇರಿಯಿಂದ ಆರಂಭವಾಗಿ ರೈತ ಸಂಪರ್ಕ ಕೇಂದ್ರ,ಪೋಲೀಸ್ ಠಾಣೆ,ಸರ್ಕಾರಿ ಆಸ್ಪತ್ರೆ ಹಾಗೂ ಹುಳಿಯಾರು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಸಾಮಾಜಿಕ ಪರಿವೀಕ್ಷಣೆ ನಡೆಸಲಾಗುವುದು.          ಇದೇ ಸಂದರ್ಭದಲ್ಲಿ ಸದರಿ ಕಛೇರಿಗಳಲ್ಲಿ ಲಂಚದ ಸಮಸ್ಯೆ ಎದುರಿಸುತ್ತಿರುವವರು ಸೂಕ್ತ ದಾಖಲೆಗಳೊಂದಿಗೆ ವೇದಿಕೆಯ ಸದಸ್ಯರನ್ನು ಸಂಪರ್ಕಿಸಿದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಬಹುದಿದ್ದು ಎಲ್ಲಾ ನಾಗರೀಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭ್ರಷ್ಟರ ಕಿವಿ ಹಿಂಡುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವೇದಿಕೆಯ ತಾಲ್ಲೂಕ್ ಸಂಚಾಲಕ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ಮನವಿ ಮಾಡಿದ್ದಾರೆ.

ಗೋವುಗಳು ಸಾಯುವ ಮುನ್ನ ಗೋಶಾಲೆ ತೆರೆಯಿರಿ

ಯಳನಾಡುವಿನ್ನಲ್ಲಿ ಗೋಶಾಲೆಗಾಗಿ ಪ್ರತಿಭಟನೆ ಹುಳಿಯಾರು: ಗೋವುಗಳು ಸಾಯುವ ಮುನ್ನ ಗೋಶಾಲೆ ತೆರೆದು ದನಕರುಗಳ ಜೀವ ಉಳಿಸಿ ಎಂದು ರೈತಮುಖಂಡ ಮಲ್ಲಿಕಾರ್ಜುನಯ್ಯ ಒತ್ತಾಯಿಸಿದರು.        ಹುಳಿಯಾರು ಹೋಬಳಿ ಯಳನಾಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಬುಧವಾರದಂದು ರೈತರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹುಳಿಯಾರು ಹೋಬಳಿ ಯಳನಾಡು ಗ್ರಾಮದಲ್ಲಿ ಗೋಶಾಲೆಗಾಗಿ ಬುಧವಾರದಂದು ಗ್ರಾಮದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.          ಈಗಾಗಲೆ ತಾಲ್ಲೂಕಿನ ಪ್ರತಿ ಹೋಬಳಿಗಳಲ್ಲಿ ಗೋಶಾಲೆಗಳನ್ನು ತೆರೆದಿದ್ದು ಉಳಿದೆಡೆ ಅವಶ್ಯಕತೆಯನುಸಾರವಾಗಿ ೨ನೇ ಹಂತದಲ್ಲಿ ತೆರೆಯಲಾಗುವುದಿದ್ದು ಅ ಸಮಯದಲ್ಲಿ ಯಳನಾಡು ಗ್ರಾಮದಲ್ಲಿ ಕೂಡ ಗೋಶಾಲೆ ತೆರೆಯುವುದಾಗಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಮೊದಲನೆ ಹಂತದಲ್ಲಿ ಹುಳಿಯಾರು ಹೋಬಳಿಯ ಕಾರೇಹಳ್ಳಿಯಲ್ಲಿ ಗೋಶಾಲೆ ತೆರೆದು ಸಾಕಷ್ಟು ದಿನಗಳೆ ಕಳೆದಿದ್ದರೂ ಸಹ ಇದುವರೆಗೂ ಯಳನಾಡುನಲ್ಲಿ ಗೋಶಾಲೆ ತೆರೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲವೆಂದು ದೂರಿದರು.           ಬರಗಾಲದ ಹೆಸರಲ್ಲಿ ಸರಕಾರದಿಂದ ಜಿಲ್ಲೆಗೆ ಕೊಟ್ಟಿಗಟ್ಟಲೆ ಹಣ ಬರುತ್ತಿದೆ. ಆದರೆ ಹಳ್ಳಿ ಪ್ರದೇಶದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ದನಕರುಗಳಿಗೆ ತಿನ್ನಲು ಮೇವಿಲ್ಲದೆ ಅಲೆದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.          ಚ

ನಫೇಡ್ ಕೊಬ್ಬರಿ ಹಣ ಇನ್ನೂ ಬಂದಿಲ್ಲ

ಹುಳಿಯಾರು: ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಕೊಳ್ಳುತ್ತಿರುವ ನಫೇಡ್ ಸಂಸ್ಥೆ ರೈತರಿಂದ ಖರೀದಿಸಿದ ಕೊಬ್ಬರಿಗೆ ಇನ್ನೂ ಹಣ ಪಾವತಿಸದಿರುವುದು ಬರಗಾಲದಿಂದ ತತ್ತರಿಸುತ್ತಿರುವ ಕೊಬ್ಬರಿ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.   ಹುಳಿಯಾರು ನಫೇಡ್ ಕೇಂದ್ರ             ಕೇಂದ್ರ ಸರ್ಕಾರದ ಬೆಂಬಲ ಬೆಲೆ 6240ರೂ ಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹಧನವೆಂದು ಒಂದು ಸಾವಿರವನ್ನು ಸೇರಿಸಿ ಕ್ವಿಂಟಾಲ್‌ ಗೆ ಒಟ್ಟು 7240 ರೂಗಳಂತೆ ಖರೀದಿ ನಡೆಸುತ್ತಿದೆ.ಕಳೆದ ಡಿ.೯ ರಿಂದ ನಾಫೆಡ್‌ ಕೊಬ್ಬರಿ ಖರೀದಿಸುತ್ತಿದ್ದು ಈಗಾಗಲೇ ೨೫ ದಿನ ಕಳೆದರೂ ರೈತರಿಗೆ ಮಾತ್ರ ಇನ್ನೂ ಹಣ ಪಾವತಿ ಮಾಡದಿರುವುದು ರೈತರಿಗೆ ದುಸ್ತರವಾಗಿ ಪರಿಣಮಿಸಿದೆ.             ಇದುವರೆಗೂ ಹುಳಿಯಾರಿನಲ್ಲಿ ೩೭ ರೈತರಿಂದ ೩೮೭ ಕ್ವಿಂಟಾಲ್ ಖರೀದಿ ಮಾಡಲಾಗಿದ್ದು ಬೆಂಬಲ ಬೆಲೆಯಾಗಿ ೨೪,೧೬,೧೨೮ ರೂ ಹಾಗೂ ಸಹಾಯಧನವಾಗಿ ೩,೮೭,೨೦೦ ಪಾವತಿಮಾಡಬೇಕಿದೆ. ಹುಳಿಯಾರು ಖರೀದಿ ಕೇಂದ್ರದಲ್ಲಿ ೩೭ ರೈತರಿಗೆ ೨೫ ಲಕ್ಷ ಹಣ ಕೊಡಬೇಕಿದ್ದು ವಾರದೊಳಗೆ ಹಣ ಬರಲಿದೆ.ರೈತರು ಧೃತಿಗೆಡಬೇಕಿಲ್ಲ ಎನ್ನುತ್ತಾರೆ ಖರೀದಿ ಅಧಿಕಾರಿ ದಂಡೇಗೌಡ.              ಸಧ್ಯ ರಾಜ್ಯ ಸರ್ಕಾರ ೨ ಕೋಟಿ ಹಣ ಬಿಡುಗಡೆಯಾಗಿದ್ದು ನಫೇಡ್ ಇನ್ನೂ ಹಣ ಬಿಡುಗಡೆ ಮಾಡಿಲ್ಲ.ಹಣ ಬರುವವರೆಗೂ ರೈತರಿಗೆ ಕೊಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.               ಆದರೆ

ಬೋರನಕಣಿವೆಜಲಾಶಯದ ಗೇಟ್ ಮುರಿದು ನಾಲೆಗೆ ಹರಿದ ನೀರು

ಹುಳಿಯಾರು: ಸಮೀಪದ ಬೋರನಕನಕಣಿವೆ ಜಲಾಶಯದ ಕ್ರಸ್ಟ್ ಗೇಟ್ ಒಡೆದು ನಾಲೆಯ ನೀರು ಹಾಯಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.                    ಬರಗಾಲದಿಂದ ತತ್ತರಿಸುತ್ತಿರುವ ಈ ಭಾಗದಲ್ಲಿ ಬೋರನಕಣೆವೆ ಜಲಾಶಯದ ನೀರೇ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರಿಗೆ ಅಧಾರವಾಗಿದ್ದು ಸಧ್ಯ ಜಲಾಶಯದಲ್ಲಿ ೯ ಅಡಿ ನೀರಿದ್ದೂ ಬೆಳೆಗಾಗಿ ಬಳಸದೆ ಹುಳಿಯಾರಿಗೆ ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿರುವ ಈ ಜಲಾಶಯ ತುಂಬಿ ಏಳೆಂಟು ವರ್ಷಗಳಾಗಿದ್ದು ನಾಲೆಗಳಿಗೆ ನೀರು ಬಿಟ್ಟು ಎರಡ್ಮೂರು ವರ್ಷಗಳೆ ಕಳೆದಿವೆ.                 ಮಂಗಳವಾರ ಮುಂಜಾನೆ ಗೇಟ್ ನಿಂದ ನೀರು ಹರಿಯುತ್ತಿದ್ದು ನಂತರ ಪರಿಶೀಲಿಸಲಾಗಿ ತೂಬಿನ ರಾಡ್ ಮುರಿದಿದ್ದು ನಾಲೆಗಳಿಗೆ ನೀರು ಹರಿಯುವಂತೆ ಮಾಡಲು ಕಿಡೀಗೇಡಿಗಳು ಮಾಡಿರಬಹುದಾದ ಕೃತ್ಯ ಇದು ಎನ್ನಲಾಗುತ್ತಿದೆ. ರಾತ್ರಿಯಿಡೀ ನೀರು ಹರಿದಿದ್ದು ಬೆಳಿಗ್ಗೆ ವಿಷಯ ತಿಳಿದ ತಾಲ್ಲೂಕು ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು ನಂತರ ಲಕವಳ್ಳಿ ಜಲಾಶಯದ ಸಿಬ್ಬಂದಿಗಳನ್ನು ಕರೆಸಿ ತೂಬು ಸರಿಪಡಿಸುವ ವ್ಯವಸ್ಥೆ ಮಾಡಿದರು.ಸಣ ನೀರಾವರಿ ಇಲಾಖೆ ಅಧಿಕಾರಿ ಚಿತ್ತಯ್ಯ ಹಾಗೂ ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ ಸ್ಥಳದಲ್ಲಿದ್ದು ಕಡೆಗೂ ಗೇಟ್ ಮುಚ್ಚುವಲ್ಲಿ ಯಶಸ್ವಿಯಾದರು.            ಈ ಭಾಗದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯಿಂದಾಗಿ ಜನ ಜಾನುವಾರುಗಳಿಗೆ ಕುಡಿಯಲು

ಗೋಶಾಲೆಗಾಗಿ ಯಳನಾಡುವಿನಲ್ಲಿ ಇಂದು ಪ್ರತಿಭಟನೆ

ಹುಳಿಯಾರು: ಹೋಬಳಿಯ ಯಳನಾಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ರೈತರು ಜನವರಿ ೪ ರಂದು ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ರೈತ ಮುಖಂಡ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.            ಈಗಾಗಲೆ ಹುಳಿಯಾರು ಹೋಬಳಿ ಕಾರೇಹಳ್ಳಿಯಲ್ಲಿ ಗೋಶಾಲೆಯನ್ನ ತೆರೆಯಲಾಗಿದೆ. ಆದರೆ ಸರಿ ಸುಮಾರು ೧೮-೨೦ ಕಿಮೀ ದೂರದ ಆ ಗೋಶಾಲೆಗೆ ಯಳನಾಡು ಗ್ರಾಪಂ ವ್ಯಾಪ್ತಿಯ ರೈತರು ತಮ್ಮ ದನ ಕರುಗಳನ್ನ ವಡೆದುಕೊಂಡು ಹೋಗಲು ಸಾಧ್ಯವಿಲ್ಲವಾಗಿದ್ದು ದನಕರುಗಳಿಗೆ ಮೇವಿಲ್ಲದೆ ಪರದಾಡುವಂತಾಗಿದೆ.        ಬರಗಾಲದ ಕಾರಣ ಮೇವಿನ ಕೊರತೆಯಿದ್ದು ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ತುಂಬ ಕಷ್ಟಕರವಾಗಿದೆ. ಈ ಬಗ್ಗೆ ಶಾಸಕರಿಗೆ ಮತ್ತು ತಾಲ್ಲೂಕು ಆಡಳಿತಕ್ಕೆ ಮೇಲಿಂದ ಮೇಲೆ ಮನವಿ ಮಾಡಿಕೊಂಡಿದ್ದರು ಸಹಾ ಎರಡನೇ ಹಂತದಲ್ಲಿ ತೆರೆಯುತ್ತೇವೆಂದು ಮುಂದೂಡುತ್ತಾ ಬಂದಿದ್ದಾರೆ.ಇವರ ನಿರ್ಲಕ್ಷ್ಯ ಮನೋಭಾವ ಖಂಡಿಸಿ ಈ ಕೂಡಲೇ ಯಳನಾಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸರಕಾರದ ಸೌಲಭ್ಯ ಪಡೆಯಲು ಮಡಿವಾಳ ಜನಾಂಗದವರು ಸಂಘಟಿತರಾಗಿ

ಹುಳಿಯಾರು: ತೀರ ಹಿಂದುಳಿದಿರುವ ಮಡಿವಾಳ ಸಮುದಾಯದವರು ಸಂಘಟಿತರಾಗುವ ಮೂಲಕ ಮುಖ್ಯವಾಹಿನಿಗೆ ಬರುವಂತೆ ಹುಳಿಯಾರು ಹೋಬಳಿ ಮಡಿವಾಳ ಸಂಘದ ಅಧ್ಯಕ್ಷ ಹೆಚ್.ಡಿ.ಪರಮೇಶ್ ತಿಳಿಸಿದರು.                ಹುಳಿಯಾರು ಪರಿವೀಕ್ಷಣಾಮಂದಿರದಲ್ಲಿ ಹೋಬಳಿ ಮಡಿವಾಳ ಸಮುದಾಯದವರು ನಡೆಸಿದ ಪದಾಧಿಕಾರಿಗಳ ಆಯ್ಕೆ ಸಭೆಯ ನಂತರ ಮಾತನಾಡಿದ ಅವರು ನಮ್ಮ ಮಡಿವಾಳ ಜನಾಂಗದ ಪ್ರತಿಯೊಬ್ಬರು ಸಹಾ ಕುಲಕಸುಬನ್ನು ಮುಂದುವರಿಸುತ್ತಾ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ಶತಮಾನಗಳಿಂದಲೂ ಸಹಾ ಆಭಿವೃದ್ಧಿ ಕಾಣದೆ ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ.ಈಗಲಾದರೂ ನಾವೆಲ್ಲಾ ಎಚ್ಚೆತ್ತುಕೊಂಡು ಸಂಘಟಿತರಾಗುವ ಅಗತ್ಯವಿದೆ ಎಂದರು.          ಸಂಘಟನಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ ಮಾರ್ಚ್.೧೦ ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರಮಟ್ಟದ ಮಡಿವಾಳ ಜನಾಂಗದ ಬೃಹತ್ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದ್ದು ಇದರಲ್ಲಿ ಪಾಲ್ಗೊಳ್ಳಬಯಸುವವರು ಹೋಬಳಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿಮಾಡಿದರು.           ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕರಾದ ಬಿ.ಹೆಚ್.ರಂಗಸ್ವಾಮಿ ಮಾತನಾಡಿ ಮಡಿವಾಳ ಜನಾಂಗದ ಪ್ರತಿಯೊಬ್ಬರು ಸಹಾ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಹಾಗೂ ಸಮಾಜದ ಸಂಘಟನೆಗೆ ಕೈ ಜೋಡಿಸುವಂತೆ ಮನವಿ ಮಾಡಿದರು.           ಇದೇ ಸಂದರ್ಭದಲ್ಲಿ ಹುಳಿಯಾರು ಹೋಬಳಿ ಮಡಿವಾಳ ಮಾಚಿದೇವ ಸಮಿತಿಗೆ ಪದಾಧಿಕಾರಿಗಳನ

ಮುಖ್ಯಮಂತ್ರಿಗಳು ಪ್ರಧಾನಿಗಳ ಬಳಿ ಕೊಬ್ಬರಿ ಬಗ್ಗೆ ಚಕಾರವೆತ್ತಿಲ್ಲ

ಪ್ರಧಾನಿಗಳು ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕಿತ್ತು --------------------------- ಹುಳಿಯಾರು: ದೆಹಲಿಗೆ ಹೋದಾಗ ಪ್ರಧಾನಿಗಳೊಂದಿಗೆ ಕೊಬ್ಬರಿ ಸಮಸ್ಯೆ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಈ ಬಗ್ಗೆ ಚಕಾರವೆತ್ತಿಲ್ಲ.ಇದರಿಂದಾಗಿ ಮುಖ್ಯಮಂತ್ರಿಗಳು ಕೊಬ್ಬರಿ ಬೆಳೆಗಾರರ ಪರವಾಗಿ ನೀಡಿದ್ದ ಭರವಸೆಯ ಮಾತುಗಳು ಹುಸಿಯಾಗಿದೆ ಎಂದು ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ಬೇಸರಿಸಿದರು.             ಹುಳಿಯಾರಿನ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಅವರು ಕೊಬ್ಬರಿ ಹೋರಾಟದ ಧರಣಿ ಇಂದಿಗೆ ೫೩ ನೇ ದಿನ ತಲುಪಿದ್ದು ಇಷ್ಟು ದಿನವಾದರೂ ಸಹ ಸರ್ಕಾರಗಳು ಸಮಸ್ಯೆ ಇತ್ಯರ್ಥಕ್ಕೆ ದೃಢನಿರ್ಧಾರ ತೆಗೆದುಕೊಳ್ಳದೆ ರೈತರ ಸಮಸ್ಯೆಯನ್ನು ಲಘವಾಗಿ ಪರಿಗಣಿಸಿದೆ ಎಂದು ದೂರಿದರು.           ರಾಜ್ಯಸರ್ಕಾರ ಕೊಬ್ಬರಿ ಬೆಳೆಗಾರರ ಸಮಸ್ಯೆಯನ್ನು ಪ್ರಧಾನಿಗಳ ಗಮನಕ್ಕೆ ತರುವುದಲ್ಲದೆ ಇದಕ್ಕಾಗಿ ದೇವೇಗೌಡರೊಂದಿಗೆ ತೆರಳಲಿರುವ ನಿಯೋಗದಲ್ಲಿ ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು.ಡಿ೩೧ರಂದು ಪ್ರಧಾನಿಗಳನ್ನು ಭೇಟಿಯಾದ ಮುಖ್ಯಮಂತ್ರಿಗಳು ರಾಜ್ಯದ ಕಲ್ಪತರು ನಾಡಿನ ರೈತರ ಸಮಸ್ಯೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಾರೆಂದು ನಾವುಗಳು ಎಣಿಸಿದ್ದರೆ ಮುಖ್ಯಮಂತ್ರಿಗಳು ಈ ಬಗ್ಗೆ ಚಕಾರವೆತ್ತದೆ ಕೇವಲ ಬರ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿ ಹಿಂದುರುಗಿದ್ದಾರೆ.ಹೀಗಾದರೆ ರೈತರ

ಬೆಳವಾಡಿ ಸರ್ಕಾರಿ ಶಾಲೆಯಲ್ಲಿ ಸಿ.ಬಿ.ಎಸ್ ಸಂಘದಿಂದ ಹೊಸವರ್ಷಾಚರಣೆ

ಹುಳಿಯಾರು ಹೋಬಳಿಯ ಬೆಳವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಿ.ಬಿ.ಎಸ್ ಮಾರುತಿ ಯುವಕ ಸಂಘದ ವತಿಯಿಂದ ಹೊಸವರ್ಷವನ್ನು ಆದ್ದೂರಿಯಾಗಿ ಆಚರಿಸಲಾಯಿತು.          ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಸಿ.ಬಿ.ಎಸ್ ಸಂಘದ ಅಧ್ಯಕ್ಷರಾದ ಕುಮಾರಸ್ವಾಮಿ ಮಕ್ಕಳು ಶೈಕ್ಷಣಿಕವಾಗಿ ಮುಂದೆಬರಬೇಕೆಂದರಲ್ಲದೆ ಮಕ್ಕಳ ಬಿಸಿಯೂಟ ಯೊಜನೆಗೆ ಸಂಘದವತಿಯಿಂದ ಹಾಗೂ ದಾನಿಗಳ ಮೂಲಕ ತಟ್ಟೆಲೋಟದ ನೆರವು ನೀಡುವುದಾಗಿ ಭರವಸೆ ನೀಡಿದರು.         ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ಅರಸ್,ಎಸ್ ಡಿಎಂಸಿ ಅಧ್ಯಕ್ಷರಾದ ಬಸವರಾಜು ,ಸಹ ಶಿಕ್ಷಕರಾದ ಗಿರೀಶ್ ,ಸಿ.ಬಿ.ಎಸ್ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. 

ವಾಸವಿ ವಿದ್ಯಾಶಾಲೆಯಲ್ಲಿ ಸಂಭ್ರಮದ ಹೊಸವರ್ಷಾಚರಣೆ

ಹುಳಿಯಾರು: ಪಟ್ಟಣದ ವಾಸವಿ ವಿದ್ಯಾಶಾಲೆಯಲ್ಲಿ ವಿದ್ಯಾರ್ಥಿಗಳು ಹೊಸವರ್ಷವನ್ನು ಸಂಭ್ರಮದಿಂದ ಆಚರಿಸಿದರು.          ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀಕಾಂತ್ ಶೆಟ್ಟಿ ಬೃಹತ್ ಗಾತ್ರದ ಕೇಕ್ ಕತ್ತರಿಸಿ ಮಕ್ಕಳಿಗೆ ವಿತರಿಸಿ ಮಾತನಾಡಿ ಮಕ್ಕಳ ಸರ್ವೋತ್ತಮುಖ ಅಭಿವೃದ್ಧಿಗಾಗಿ ಸಂಸ್ಥೆ ಶ್ರಮಿಸುತ್ತಿದ್ದು ಮಕ್ಕಳು ಶೈಕ್ಷಣಿಕವಾಗಿ ಮುಂದೆಬರಬೇಕೆಂದರು.          ಸಂಸ್ಥೆಯ ಕಾರ್ಯದರ್ಶಿ ರಾಮನಾಥ್ ಮಕ್ಕಳಿಗೆ ಶುಭಕೋರಿ ಮಾತನಾಡಿ ಹಿಂದಿನ ವರ್ಷದ ಕಹಿಯನ್ನೆಲ್ಲಾ ಮರೆತು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಶಾಲೆಗೆ ಉತ್ತಮ ಫಲಿತಾಂಶ ತನ್ನಿ ಎಂದು ಕರೆ ನೀಡಿದರು.        ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಮಕ್ಕಳಿಗೆ ಹಿತನುಡಿಗಳಾಡಿದರು.ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.         ಬಿ.ವಿ.ಶ್ರೀನಿವಾಸ್,ಅಜಯ್,ಶಿಲ್ಪಾಬಾಲಾಜಿ,ಆಶಾಬದರೀಶ್,ಟಿಆರ್ ಎಸ್ ಆರ್ ಶಾಲೆಯ ಮುಖ್ಯ ಶಿಕ್ಷಕ ರಮೇಶ್,ವಾಸವಿ ಶಾಲೆಯ ಮುಖ್ಯಶಿಕ್ಷಕ ಮಹೇಶ್ ,ಸುಧಾ ಮೊಸಲಾದವರು ಪಾಲ್ಗೊಂಡಿದ್ದರು.