ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದಲ್ಲಿ ಬನಶಂಕರಿ ಅಮ್ಮನವರ 7ನೇ ವರ್ಷದ ಬನದಹುಣ್ಣಿಮೆ ಕಾರ್ಯಕ್ರಮವನ್ನು ಇಂದು ಜ.11ರ ಬುಧವಾರ ಹಾಗೂ 12ರ ಗುರುವಾರದಂದು ಹಮ್ಮಿಕೊಳ್ಳಲಾಗಿದೆ.
ಇಂದು ಜ.11ರ ಬುಧವಾರ ಸಂಜೆ ಕೆಂಕೆರೆ ಕಾಳಿಕಾಂಭದೇವಿ ಹಾಗೂ ಹುಳಿಯಾರು ಕೆಂಚಮ್ಮದೇವಿಯವರ ಆಗಮನವಾಗಲಿದೆ.
ಜ.12 ರ ಗುರುವಾರ ಬೆಳಿಗ್ಗೆ 4ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಬನಶಂಕರಿ ಅಮ್ಮನವರಿಗೆ ರುದ್ರಾಭಿಷೇಕ,ಅಷ್ಟೋತ್ತರ ಪೂಜೆ ಹಾಗೂ 8 ಗಂಟೆಯಿಂದ ಗಣಪತಿ ಹೋಮ,ವಾಸ್ತುಹೋಮ,ನವಗ್ರಹ ಹೋಮ,ರುದ್ರಹೋಮ,ಮಹಾಲಕ್ಷ್ಮೀ ಹೋಮ ನಡೆದು ಪೂರ್ಣಾಹುತಿ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ.
ರಾತ್ರಿ 8ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಬನಶಂಕರಿ ಕಮಿಟಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ