ಹುಳಿಯಾರು: ಸಮೀಪದ ಬೋರನಕನಕಣಿವೆ ಜಲಾಶಯದ ಕ್ರಸ್ಟ್ ಗೇಟ್ ಒಡೆದು ನಾಲೆಯ ನೀರು ಹಾಯಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬರಗಾಲದಿಂದ ತತ್ತರಿಸುತ್ತಿರುವ ಈ ಭಾಗದಲ್ಲಿ ಬೋರನಕಣೆವೆ ಜಲಾಶಯದ ನೀರೇ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರಿಗೆ ಅಧಾರವಾಗಿದ್ದು ಸಧ್ಯ ಜಲಾಶಯದಲ್ಲಿ ೯ ಅಡಿ ನೀರಿದ್ದೂ ಬೆಳೆಗಾಗಿ ಬಳಸದೆ ಹುಳಿಯಾರಿಗೆ ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿರುವ ಈ ಜಲಾಶಯ ತುಂಬಿ ಏಳೆಂಟು ವರ್ಷಗಳಾಗಿದ್ದು ನಾಲೆಗಳಿಗೆ ನೀರು ಬಿಟ್ಟು ಎರಡ್ಮೂರು ವರ್ಷಗಳೆ ಕಳೆದಿವೆ.
ಮಂಗಳವಾರ ಮುಂಜಾನೆ ಗೇಟ್ ನಿಂದ ನೀರು ಹರಿಯುತ್ತಿದ್ದು ನಂತರ ಪರಿಶೀಲಿಸಲಾಗಿ ತೂಬಿನ ರಾಡ್ ಮುರಿದಿದ್ದು ನಾಲೆಗಳಿಗೆ ನೀರು ಹರಿಯುವಂತೆ ಮಾಡಲು ಕಿಡೀಗೇಡಿಗಳು ಮಾಡಿರಬಹುದಾದ ಕೃತ್ಯ ಇದು ಎನ್ನಲಾಗುತ್ತಿದೆ. ರಾತ್ರಿಯಿಡೀ ನೀರು ಹರಿದಿದ್ದು ಬೆಳಿಗ್ಗೆ ವಿಷಯ ತಿಳಿದ ತಾಲ್ಲೂಕು ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು ನಂತರ ಲಕವಳ್ಳಿ ಜಲಾಶಯದ ಸಿಬ್ಬಂದಿಗಳನ್ನು ಕರೆಸಿ ತೂಬು ಸರಿಪಡಿಸುವ ವ್ಯವಸ್ಥೆ ಮಾಡಿದರು.ಸಣ ನೀರಾವರಿ ಇಲಾಖೆ ಅಧಿಕಾರಿ ಚಿತ್ತಯ್ಯ ಹಾಗೂ ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ ಸ್ಥಳದಲ್ಲಿದ್ದು ಕಡೆಗೂ ಗೇಟ್ ಮುಚ್ಚುವಲ್ಲಿ ಯಶಸ್ವಿಯಾದರು.
ಈ ಭಾಗದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯಿಂದಾಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ರೈತರು ತೋಟತುಡಿಕೆಗಳನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದ್ದು ತೋಟ ಉಳಿಸಿಕೊಳ್ಳಲು ಒಂದೆರಡು ದಿನ ಜಲಾಶಯದ ನೀರು ಬಿಡುವಂತೆ ಕೆಲ ರೈತರು ಉಪವಿಭಾಗಾಧಿಕಾರಿಗಳ ಬಳಿ ತೆರಳಿ ಮನವಿ ಮಾಡಿದ್ದರಾದರೂ ನಂತರದ ಬೆಳವಣಿಗೆಯಲ್ಲಿ ಜಿಲ್ಲಾಡಳಿತ ಒಪ್ಪಿಗೆ ನೀಡಿರಲ್ಲಿಲ್ಲ.ಈ ಹಿನ್ನಲೆಯಲ್ಲಿ ಇಂದು ನಾಲೆಯಿಂದ ಹರಿದಿರುವ ನೀರು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ