"ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೋ.ನಟರಾಜ್ ಬೂದಾಳ್
ಹುಳಿಯಾರು:ಕಾವ್ಯ ಅನ್ನುವುದು ನಿತ್ಯ ಬದುಕಿನ ಭಾಗವಾಗಿದ್ದು ಕಾವ್ಯ ಕಲೆ ಅಂತಿಮವಾಗಿ ರಸದೂಟವನ್ನು ಉಣಬಡಿಸುತ್ತದೆ.ಆರೋಗ್ಯಕ್ಕೆ ಒಳ್ಳೆಯ ಉಟ ಹೇಗೆ ಅಗತ್ಯವೋ ಉತ್ತಮ ಕಾವ್ಯ ರಚನೆಗೆ ನಮ್ಮ ಮನಸ್ಸು,ಚಿಂತನೆ ಆರೋಗ್ಯಕರವಾಗಿರಬೇಕು,ಸಾಹಿತ್ಯದ ಅನುಸಂಧಾನವಿರಬೇಕು,ಒಳ್ಳೆಯ ಅಡುಗೆ ಮಾಡುವುದು ಕೂಡ ಕಾವ್ಯವೇ ಎಂದು ಪ್ರೋ.ನಟರಾಜ್ ಬೂದಾಳ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಬುಧವಾರದಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿತ "ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆಗೊಳಿಸಲಾಯಿತು.
|
ಹುಳಿಯಾರು-ಕೆಂಕೆರೆ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿಕನ್ನಡ ಸಾಹಿತ್ಯ ಪರಿಷತ್ತು ಹುಳಿಯಾರು ಘಟಕದಿಂದ ಬುಧವಾರದಂದು ಆಯೋಜಿಸಲಾಗಿದ್ದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿತ "ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾವ್ಯ ಪ್ರಸ್ತಾವನೆ ಮಾಡಿ ಮಾತನಾಡಿದ ಅವರು ಕಾವ್ಯ ಅಂದರೆ ಪ್ರಾಸಬದ್ಧವಾಗಿ ನಾಲ್ಕು ಸಾಲಿನಲ್ಲಿ ಗೀಚುವ ಕವಿತೆಯಲ್ಲ ,ಇದೊಂದು ಜೀವನ ಕ್ರಮವಾಗಿದೆ ಎಂದರು.
ಈ ಕ್ಷಣದಲ್ಲೂ ಕೂಡ ಕವಿ ದಾರ್ಶನಿಕರು ನಮ್ಮಿಂದ ಹೊರಗಿದ್ದಾರೆ.ಜ್ಯೋತಿಷಿಗಳ ಮಾತು ನೂರಕ್ಕೆನೂರು ಕೇಳುವ ರಾಜಕಾರಣಿಗಳು ಕವಿ,ದಾರ್ಶನಿಕರ ಮಾತು ಕೇಳದಿರುವುದು ದುರಾದೃಷ್ಟಕರ ಎಂದರು
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಕೆ.ವೈ.ನಾರಾಯಣಸ್ವಾಮಿ ನಾವಿಂದು ಓದುತ್ತಿರುವ ಪಾಠಕ್ಕೂ ನಾವು ನಡೆಸುತ್ತಿರುವ ಜೀವನಕ್ಕೂ ನಯಾಪೈಸದ ಸಂಬಂಧವಿಲ್ಲ.ಅರಿವಿಲ್ಲದೆ ಅನ್ಯಾಯಗಳನ್ನು ನಾವೇ ಶೋಷಿಸುತ್ತಾ ಮತ್ತೊಂದೆಡೆ ಅದರ ಬಗ್ಗೆ ವಿಶ್ಲೇಷಣೆಮಾಡುತ್ತಾ ಬದುಕುತ್ತಿದ್ದೇವೆ.ಉತ್ತಮ ಸಮಾಜ ನಿರ್ಮಾಣಗೊಳ್ಳಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯು ಸಹಾ ತನ್ನಲ್ಲಿರುವ ತಪ್ಪುಗಳನ್ನು ತಿದ್ದಿಕೊಂಡು ನಡೆದಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಇಂದು ಬಿಡುಗಡೆಗೊಂಡಿರುವ ಈ ಪುಸ್ತಕದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರು ನಡೆದು ಕೊಳ್ಳುತ್ತಿರುವುದನ್ನು ಅವಲೋಕಿಸಲಾಗಿದೆ ಎಂದರು.
ಪುಸ್ತಕ ಕುರಿತು ಮಾತನಾಡಿದ ಡಾ.ಡಾಮಾನಿಕ್ ಸಾಹಿತ್ಯ ಎನ್ನುವುದು ಕನ್ನಡದ ಪೀಳಿಗೆಗೆ,ಬದುಕಿಗೆ ಬದಲಾವಣೆ ಏನನ್ನು ಕೊಟಿಲ್ಲ. ೧೬ನೇ ಶತಮಾನದಲ್ಲಿ ಜನರಲ್ಲಿನ ಮೌಡ್ಯತೆಯನ್ನ ತೊಡೆದು ಹಾಕಲು ಅನೇಕ ಮಹನೀಯರು ಸಾಕಷ್ಟು ವಚನಗಳ,ತತ್ವಪದಗಳ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ನೀಡುತ್ತಿದ್ದರು. ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಚಲವಿತ್ತು. ಆದರಿಂದು ಆಧುನಿಕತೆ ಯುಗದಲ್ಲೂ ಜನರಲ್ಲಿ ಆತ್ಮಸ್ಥೈರ್ಯವಿಲ್ಲವಾಗಿ ದುಡಿದು ತಿನ್ನುವವರ ಸಂಖ್ಯೆ ಕಡಿಮೆಯಾಗಿ ನಮ್ಮನ್ನ ನಾವುಗಳೇ ಕತ್ತಲೆಡೆಗೆ ದೂಡಿಕೊಳ್ಳುವಂತಾಗಿದೆ ಎಂದರು.
ಡಾ.ಆರ್.ಶಿವಪ್ಪ ಮಾತನಾಡಿ ಲೋಕದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಪ್ರಶ್ನಿಸುವುದನ್ನು ರೂಢಿಸಿಕೊಳ್ಲಬೇಕೆಂದರು.ಇದರಿಂದ ಸಹಜ ಕುತೂಹಲ ತಣಿದು ಅರಿವು ಮೂಡಲು ಸಹಕಾರಿಯಾಗುತ್ತದೆ.ನಮ್ಮಲ್ಲಿನ ಅರಿವು,ಜ್ಞಾನವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದನ್ನು ಕಲಿತಲ್ಲಿ ಬದುಕು ಸುಂದರವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕ್ ಕ.ಸಾ.ಪ ಅಧ್ಯಕ್ಷೆ ಪ್ರೋ.ಇಂದಿರಮ್ಮ ಮಕ್ಕಳು ಮಾರುಕಟ್ಟೆಯ ಗಿರಾಕಿಗಳಾಗುತ್ತಿದ್ದು ಕಳೆದು ಹೋದ ಬಾಲ್ಯ ಮತ್ತೆಸಿಗುವುದಿಲ್ಲ ಎಂದು ಅರಿಯುತ್ತಿಲ್ಲ.ತಂತ್ರಜ್ಞಾನದ ಗುಲಾಮರಾಗಿರುವ ಯುವಶಕ್ತಿ ತಮ್ಮ ಮನಸ್ಸನ್ನು ಇತರೆಡೆಗೆ ಹೊರಳುಸುತ್ತಿಲ್ಲ ಎಂದರು. ಕವಿತೆ ಕವನಗಳನ್ನು ರಚಿಸುವುದು ಮುಖ್ಯವಲ್ಲ.ರಚಿಸಿದ ಕವಿತೆ ಕವನಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಸುವುದು ಅತಿ ಮುಖ್ಯ ಈ ನಿಟ್ಟಿನಲ್ಲಿ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿಸಿರುವ ಪ್ರತಿಯೊಂದು ಕವನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದ್ದಾರೆಂದು.
ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸಾಹಿತ್ಯ ರಚನೆಯ ಬಗ್ಗೆ ತಿಳಿಸಿದರು.ಪ್ರೋ.ಬಿ.ಅಶೋಕ್ ಸ್ವಾಗತಿಸಿದರು.ಡಾ.ಬಾಳಪ್ಪ ಪ್ರಾಸ್ತಾವಿಕ ನುಡಿಗಳಾಡಿದರು.ಸಮಾರಂಭದಲ್ಲಿ ಪ್ರೋ.ಬಾಳೆಕಾಯಿ ಶಿವನಂಜಪ್ಪ,ಸಾಹಿತಿ ಎಂ.ವಿ.ನಾಗರಾಜ್ ರಾವ್,ಬೆಳಗುಲಿ ಶಶಿಭೂಷಣ್, ತಿಪಟೂರು ಕಸಾಪ ಮಾಜಿ ಅಧ್ಯಕ್ಷ ಉಜ್ಜಜ್ಜಿರಾಜಣ್ಣ,ಹುಳಿಯಾರು ಕಸಾಪ ಅಧ್ಯಕ್ಷ ಯಲ್ಲಪ್ಪ, ಹೆಚ್.ಕೆ.ರಾಮಯ್ಯ, ವೈದ್ಯ ಡಾ:ಸಿದ್ದರಾಮಯ್ಯ, ರೈತ ಸಂಘದ ಸತೀಶ್, ನಾಗಣ್ಣ,ರಾಜಪ್ಪ, ಸಜ್ಜಾದ್, ಹೊಸಹಳ್ಳಿ ಚಂದ್ರಣ್ಣ, ಪಂಡಿತ್ ಬಸವರಾಜು ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ