ವಿಷಯಕ್ಕೆ ಹೋಗಿ

ಇಂದು ಬನದ ಹುಣ್ಣಿಮೆ.... ಇದು ಈ ವರ್ಷದ ಪೂರ್ಣಚಂದಿರನ ಮೊದಲ ದಿನ

(ಕನ್ನಡಪ್ರಭದಲ್ಲಿನ ಮಂಡಗದ್ದೆ ಪ್ರಕಾಶಬಾಬು ಅವರ ಲೇಖನ )

ಒಂದು ಸಂವತ್ಸರದಲ್ಲಿ (ವರ್ಷದಲ್ಲಿ)12 ಹುಣ್ಣಿಮೆಗಳು ಬರುತ್ತದೆ. ಒಂದೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆಯಿದೆ. ಅದರಲ್ಲಿ ಪುಷ್ಯ ಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನುವರು. ಸಾಮಾನ್ಯವಾಗಿ ಇದು ಆಂಗ್ಲ ವರ್ಷದ ಜನವರಿಯಲ್ಲಿ ಬರುತ್ತದೆ. ಆದ್ದರಿಂದ ವರ್ಷದ ಮೊದಲ ಹುಣ್ಣಿಮೆ ಎಂದೂ ಹೇಳಬಹುದು.
          ಅಗಸ್ತ್ಯ ಋಷಿಗಳು ಬನಶಂಕರಿ ದೇವಿಯನ್ನು ಬನಸಿರಿದೇವಿ ಎಂದು ಕರೆದಿರುವರು. ಕಾರಣ 'ಬನ' ಎಂದರೆ ಅರಣ್ಯ. 'ಸಿರಿ' ಎಂದರೆ ಸಂಪತ್ತು ಎಂದು.
      ಬನದ ಹುಣ್ಣಿಮೆಯ ನವರಾತ್ರಿಯು ಪ್ರತಿವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನದಿಂದ ಪ್ರಾರಂಭ ಆಗುವುದು. ಆ ದಿನದಂದು ಅಷ್ಟಭುಜಗಳಾದ ಅಷ್ಟ ಸಿದ್ಧಿಯನ್ನು ಕೊಡುವ ಸರ್ವಮಂಗಳಾ ದೇವಿಯನ್ನು ಪೂಜಿಸಬೇಕು.
       ನವಮಿ ದಿನದಂದು ಒಂಬತ್ತು ಕೋಟಿ ಸಖಿಯರಿಂದೊಡಗೂಡಿದ ನವದುರ್ಗೆ ದೇವಿಯನ್ನು ಪೂಜಿಸಬೇಕು.
      ದಶಮಿಯಂದು ದಶ ದಿಕ್ಪಾಲಕ ಕಿರೀಟಗಳಿಂದ ಪೂಜಿತಳಾದ ಪಾದಪದ್ಮಗಳುಳ್ಳ ರಾವಣನನ್ನು ವಧೆ ಮಾಡಲು ವಿಧ್ಯುಕ್ತನಾದ ಶ್ರೀರಾಮನಿಗೆ ಸಂತೋಷ ಕೊಟ್ಟ ದೇವಿಯನ್ನು ಪೂಜಿಸಬೇಕು.
             ಏಕಾದಶಿ ದಿನದಂದು ಏಕಾದಶ ರುದ್ರರಿಂದ ಪೂಜಿತಳಾದ ಪರಮೇಶ್ವರಿಯನ್ನು ಪೂಜಿಸಬೇಕು.       ದ್ವಾದಶಿಯಂದು ಆದಿತ್ಯ ಮಂಡಲ ಸ್ಥಳಾದ ಜಗನ್ಮಾತೆಯನ್ನು ಪೂಜಿಸಬೇಕು. ತ್ರಯೋದಶಿಯಂದು ಲೋಕದ ದುಃಖ ನಿವಾರಣೆ ಮಾಡುವ ಜಗದಂಬೆಯನ್ನು ಪೂಜಿಸಬೇಕು.
      ಚತುರ್ದಶಿ ದಿನದಂದು ಸಿದ್ಧಿ ಕೂಡುವ ಪ್ರಣವ ಸ್ವರೂಪಿಯನ್ನು ಪೂಜಿಸಬೇಕು ಮತ್ತು 108 ತರಕಾರಿಗಳ ಪಲ್ಯವನ್ನು ಮಾಡಿ ಶಾಕಂಬರಿಗೆ ನೈವೇದ್ಯ ಮಾಡಬೇಕು.
       ಕೊನೆಯ ದಿನವೇ ಬನದ ಹುಣ್ಣಿಮೆ ಅಂದು ಪೂರ್ಣಾನಂದ ಪ್ರದಾಯಕಳಾದ ಮತ್ತು ಪೂರ್ಣಾನಂದ ಸ್ವರೂಪಳಾದ ಬನಶಂಕರಿ ದೇವಿಯನ್ನು ಪೂಜಿಸಬೇಕು. ಅಂದು ಬನಶಂಕರಿ ದೇವಿಯ ರಥೋತ್ಸವ ನಡೆಯುವುದು.
      ಅಂದು ಬಾದಾಮಿ ಬನಶಂಕರಿ ದೇವಾಲಯ ಮತ್ತು ಕರ್ನಾಟಕದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಜಾತಿ, ಮತ ಭೇಧವಿಲ್ಲದೆ ಎಲ್ಲಾ ಭಕ್ತರು ಸೇರಿ ಬನಶಂಕರಿ ರಥ ಎಳೆಯುವರು. ಆ ಸಮಯದಲ್ಲಿ ಭಕ್ತರು ಸೇರಿ ಬನಶಂಕರಿ ರಥ ಎಳೆಯುವರು. ನಿನಗೆ ಸರಿಸಾಟಿ ಎಂದೂ ಆಗಲಾರೆ, ನಾನು ನಿನ್ನ ಪಾದದಡಿಯಲ್ಲಿಯೇ ಇರತಕ್ಕವನು ಎಂದು ಘೋಷಣೆ ಕೂಗುತ್ತಾರೆ.


         ಬನಶಂಕರಿ ಹಲವಾರು ರೂಪಗಳಲ್ಲಿ ಅವತರಿಸಿ ನಮ್ಮ ದೇಹದ ನಾನಾ ಭಾಗಗಳನ್ನು ರಕ್ಷಿಸುವಳು ಎಂದು ನಂಬಿಕೆಯಿದೆ. ರಕ್ತದಂತಿಕೆ ದೇವಿಯು ನಮ್ಮ ಕಣ್ಣುಗಳನ್ನು ಕಾಪಾಡುವಳು, ನಂದಜೆದೇವಿಯು ಕಿವಿಗಳನ್ನು, ಪಾರ್ವತಿಯು ನಾಸಿಕವನ್ನೂ, ಮಹಾಕಾಳಿಯು ತುಟಿಗಳನ್ನೂ, ಮಹಾಲಕ್ಷ್ಮಿಯು ಮುಖವನ್ನೂ, ಮಹಾಸರಸ್ವತಿಯು ನಾಲಿಗೆಯನ್ನೂ, ಚಾಮುಂಡಿಯು ಹಲ್ಲುಗಳನ್ನೂ ಭದ್ರಕಾಳಿ ಕೈಗಳನ್ನು, ಕೌಮಾರಿದೇವಿಯು ಹೃದಯವನ್ನೂ, ವೈಷ್ಣವಿದೇವಿಯು ಉದರವನ್ನೂ ಸುಂದರಿದೇವಿಯು ತೊಡೆಗಳನ್ನು, ಶಾಂಭವಿ ಪಾದಗಳನ್ನೂ ರಕ್ಷಿಸುವಳು ಎಂಬ ನಂಬಿಕೆಯಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.