ಹುಳಿಯಾರು:ಗ್ರಾಮದೇವತೆ ಶ್ರಿ ಹುಳಿಯಾರಮ್ಮನವರ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಅಮ್ಮನವರಿಗೆ ಮಡಲಕ್ಕಿ ಸೇವೆ ಸಲ್ಲಿಸುವ ಮೂಲಕ ಶನಿವಾರದಂದು ಚಾಲನೆ ನೀಡಲಾಯಿತು.ನಂತರ ಊರಿನ ಗೌಡರು,ಭಕ್ತರ ಮನೆಗೆ ತೆರಳಿ ಮಡಿಲಕ್ಕಿ ಶಾಸ್ತ್ರ ಮುಗಿಸಿ ಗ್ರಾಮದೇವತೆ ದುರ್ಗಮ್ಮನೊಂದಿಗೆ ಕೋಡೀಪಾಳ್ಯಕ್ಕೆ ತೆರಳಿತು.
ದೇವಾಲಯದ ಅಧ್ಯಕ್ಷ ನರೇಂದ್ರಬಾಬು,ದುರ್ಗಾಪರಮೇಶ್ವರಿ ದೇವಾಲಯದ ಕನ್ವೀನರ್ ಹು.ಕೃ.ವಿಶ್ವನಾಥ್,ಗುಂಚಿಗೌಡರುಗಳಾದ ಪಾಳ್ಯ ದುರ್ಗಪ್ಪ,ದುರ್ಗರಾಜು,ಟೈಲರ್ ಹನುಮಂತ ರಾವ್, ಟೈಲರ್ ಗೋಪಿ,ಏಜೆಂಟ್ ಗಂಗಣ್ಣ,ರಂಗನಾಥ್ ಪ್ರಸಾದ್ ಮುಂತಾದವರಿದ್ದರು.
ಜಾತ್ರಾ ಮಹೋತ್ಸವ ಫೆ.5 ರವರೆಗೆ ನಡೆಯಲಿದೆ.
ಕಾರ್ಯಕ್ರಮ:29 ರಂದು ಕಾಮಶೆಟ್ಟಿಪಾಳ್ಯ ,ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ
ಜ.30 ರಂದು ಧ್ವಜಾರೋಹಣ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನಡೆಯಲಿದೆ.
ಜ.31 ರಂದು ಆರತಿ ಬಾನ ಹಾಗೂ ಎಡೆ ಸೇವೆ
ಫೆ.1ರಂದು ಗ್ರಾಮದೇವತೆ ದುರ್ಗಮ್ಮ ಕೆಂಚಮ್ಮದೇವಿ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ
ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ.
ಫೆ.2 ರ ಗುರುವಾರದಂದು ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ ,
ಫೆ 3 ರ ಶುಕ್ರವಾರದಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ ನಡೆದು ಶನಿವಾರ ಕಂಕಣವಿಸರ್ಜನೆ ,ಓಕಳಿ ಮತ್ತು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲು ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ