ಹುಳಿಯಾರು: ಹೋಬಳಿಯ ಯಳನಾಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ರೈತರು ಜನವರಿ ೪ ರಂದು ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ರೈತ ಮುಖಂಡ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ಈಗಾಗಲೆ ಹುಳಿಯಾರು ಹೋಬಳಿ ಕಾರೇಹಳ್ಳಿಯಲ್ಲಿ ಗೋಶಾಲೆಯನ್ನ ತೆರೆಯಲಾಗಿದೆ. ಆದರೆ ಸರಿ ಸುಮಾರು ೧೮-೨೦ ಕಿಮೀ ದೂರದ ಆ ಗೋಶಾಲೆಗೆ ಯಳನಾಡು ಗ್ರಾಪಂ ವ್ಯಾಪ್ತಿಯ ರೈತರು ತಮ್ಮ ದನ ಕರುಗಳನ್ನ ವಡೆದುಕೊಂಡು ಹೋಗಲು ಸಾಧ್ಯವಿಲ್ಲವಾಗಿದ್ದು ದನಕರುಗಳಿಗೆ ಮೇವಿಲ್ಲದೆ ಪರದಾಡುವಂತಾಗಿದೆ.
ಬರಗಾಲದ ಕಾರಣ ಮೇವಿನ ಕೊರತೆಯಿದ್ದು ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ತುಂಬ ಕಷ್ಟಕರವಾಗಿದೆ. ಈ ಬಗ್ಗೆ ಶಾಸಕರಿಗೆ ಮತ್ತು ತಾಲ್ಲೂಕು ಆಡಳಿತಕ್ಕೆ ಮೇಲಿಂದ ಮೇಲೆ ಮನವಿ ಮಾಡಿಕೊಂಡಿದ್ದರು ಸಹಾ ಎರಡನೇ ಹಂತದಲ್ಲಿ ತೆರೆಯುತ್ತೇವೆಂದು ಮುಂದೂಡುತ್ತಾ ಬಂದಿದ್ದಾರೆ.ಇವರ ನಿರ್ಲಕ್ಷ್ಯ ಮನೋಭಾವ ಖಂಡಿಸಿ ಈ ಕೂಡಲೇ ಯಳನಾಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ