ಹುಳಿಯಾರು: ಸಮೀಪದ ಗೌಡಗೆರೆಯಲ್ಲಿ ಶ್ರೀದುರ್ಗಾದೇವಿಯವರ ಮಂಡಲ ಪೂಜ ಕಾರ್ಯಕ್ರಮವನ್ನು ಜ.೧೯ರ ಗುರುವಾರ ಮತ್ತು ಜ.೨೦ ಶುಕ್ರವಾರ ಎರಡು ದಿನಗಳ ಕಾಲ ಜರುಗಲಿದೆ.
ಜ. ೧೯ ರ ಗುರುವಾರ ಸಂಜೆ ಹುಳಿಯಾರಿನ ಗ್ರಾಮದೇವತೆ ಶ್ರೀಹುಳಿಯಾರಮ್ಮನವರ ಆಗಮನ ನಂತರ ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಪಂಚಗವ್ಯ, ಕಳಶಸ್ಥಾಪನೆ ಮಹಾಮಂಗಳಾರತಿ ನಡೆಯಲಿದೆ.
ಜ. ೨೦ ರ ಶುಕ್ರವಾರ ಬೆಳಿಗ್ಗೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಪ್ರಾರ್ಥನೆ, ವೇದಪಾರಾಯಣ, ಕಳಸಪೂಜೆ, ಅಗ್ನಿಪ್ರತಿಷ್ಠಾಪನೆ, ಹೋಮ, ವಿಶೇಷವಾಗಿ ರುದ್ರಹೋಮ ಮತ್ತು ಶ್ರೀಲಲಿತ ಸಹಸ್ರನಾಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಗೌಡಗೆರೆ ಮಜುರೆಯ ಕೆ.ಸಿ.ಪಾಳ್ಯ, ಕುರಿಹಟ್ಟಿ, ಕೋಡಿಪಾಳ್ಯ, ಗೌಡಗೆರೆ, ದಸೂಡಿ, ಬೆನಕನಹಳ್ಳಿ, ಎಲ್ಲಾ ಗ್ರಾಮಗಳಿಗೆ ಸೇರಿದ ಭಕ್ತಾದಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಆಗಮಿಸುವಂತೆ ದೇವಸ್ಥಾನದ ಧರ್ಮದರ್ಶಿ ಕೃಷ್ಣಮೂರ್ತಿ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ