ಹುಳಿಯಾರು: ತೀರ ಹಿಂದುಳಿದಿರುವ ಮಡಿವಾಳ ಸಮುದಾಯದವರು ಸಂಘಟಿತರಾಗುವ ಮೂಲಕ ಮುಖ್ಯವಾಹಿನಿಗೆ ಬರುವಂತೆ ಹುಳಿಯಾರು ಹೋಬಳಿ ಮಡಿವಾಳ ಸಂಘದ ಅಧ್ಯಕ್ಷ ಹೆಚ್.ಡಿ.ಪರಮೇಶ್ ತಿಳಿಸಿದರು.
ಹುಳಿಯಾರು ಪರಿವೀಕ್ಷಣಾಮಂದಿರದಲ್ಲಿ ಹೋಬಳಿ ಮಡಿವಾಳ ಸಮುದಾಯದವರು ನಡೆಸಿದ ಪದಾಧಿಕಾರಿಗಳ ಆಯ್ಕೆ ಸಭೆಯ ನಂತರ ಮಾತನಾಡಿದ ಅವರು ನಮ್ಮ ಮಡಿವಾಳ ಜನಾಂಗದ ಪ್ರತಿಯೊಬ್ಬರು ಸಹಾ ಕುಲಕಸುಬನ್ನು ಮುಂದುವರಿಸುತ್ತಾ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ಶತಮಾನಗಳಿಂದಲೂ ಸಹಾ ಆಭಿವೃದ್ಧಿ ಕಾಣದೆ ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ.ಈಗಲಾದರೂ ನಾವೆಲ್ಲಾ ಎಚ್ಚೆತ್ತುಕೊಂಡು ಸಂಘಟಿತರಾಗುವ ಅಗತ್ಯವಿದೆ ಎಂದರು.
ಸಂಘಟನಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ ಮಾರ್ಚ್.೧೦ ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರಮಟ್ಟದ ಮಡಿವಾಳ ಜನಾಂಗದ ಬೃಹತ್ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದ್ದು ಇದರಲ್ಲಿ ಪಾಲ್ಗೊಳ್ಳಬಯಸುವವರು ಹೋಬಳಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕರಾದ ಬಿ.ಹೆಚ್.ರಂಗಸ್ವಾಮಿ ಮಾತನಾಡಿ ಮಡಿವಾಳ ಜನಾಂಗದ ಪ್ರತಿಯೊಬ್ಬರು ಸಹಾ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಹಾಗೂ ಸಮಾಜದ ಸಂಘಟನೆಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹುಳಿಯಾರು ಹೋಬಳಿ ಮಡಿವಾಳ ಮಾಚಿದೇವ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ನಾಗಣ್ಣ, ಅಧ್ಯಕ್ಷರಾಗಿ ಹೆಚ್.ಡಿ.ಪರಮೇಶ್, ಉಪಾಧ್ಯಕ್ಷರಾಗಿ ಶ್ಯಾಮಣ್ಣ, ಖಜಾಂಚಿಯಾಗಿ ರಮೇಶ್, ಕಾರ್ಯದರ್ಶಿಯಾಗಿ ಮೋಹನ್ ಕುಮಾರ್ ಮತ್ತು ರಂಗಸ್ವಾಮಿ, ಸಹಕಾರ್ಯದರ್ಶಿಯಾಗಿ ನಟರಾಜು ಮತ್ತು ಶರಾವತಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಸನ್ನಕುಮಾರ್, ಮೋಹನ್ ಕುಮಾರ್ ರೈ, ಮೈಲಾರಪ್ಪ,ಬೆಳವಾಡಿ ಕುಮಾರ್ ಅವರನ್ನು ಹಾಗೂ ಸದಸ್ಯರುಗಳನ್ನಾಗಿ ೧೮ ಮಂದಿಯನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಶ್ರೀಮಡಿವಾಳ ಮಾಚಿದೇವ ಸಂಘದಿಂದ ವೀಕ್ಷಕರಾಗಿ ನಾಗರಾಜು, ರಂಗಸ್ವಾಮಿ ಆಗಮಿಸಿ ಕಾರ್ಯನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ