ಸುಖಾಸುಮ್ಮನೆ ಪ್ರಚಾರದ ಹುಚ್ಚಿನಿಂದ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟಮೊಕದ್ದಮೆ
ಹುಳಿಯಾರು:ಗ್ರಾಮನೈರ್ಮಲ್ಯ ಯೋಜನೆಯ ಕೂಲಿ ಕಾರ್ಮಿಕರ ಹಣವನ್ನು ನೇರವಾಗಿ ಅವರವರ ಹೆಸರಿಗೆ ಚೆಕ್ ಕೊಡುವ ಪರಿಪಾಠವಿದ್ದು, ಸದಸ್ಯೆ ಗಾಯತ್ರಿದೇವಿ ಕೂಲಿಹಣ ನೀಡಲು ನೀಡಿರುವ ದಾಖಲೆಗಳಲ್ಲಿನ ಪೋಟೊಗಳಲ್ಲಿರುವ ಕಾರ್ಮಿಕರೇ ಬೇರೆ ಹಾಗೂ ಹಣ ನೀಡುವಂತೆ ಕೇಳುತ್ತಿರುವ ವ್ಯಕ್ತಿಗಳೇ ಬೇರೆ .ತಮ್ಮ ಅಧಿಕಾರ ದುರುಪಯೋಗಿಸಿಕೊಂಡು ಅನ್ಯ ವ್ಯಕ್ತಿಯ ಹೆಸರಿಗೆ ಚೆಕ್ ಕೊಡಿ ಎಂದು ಹೇಳಿದರೇ ಕೊಡಲು ಹೇಗೆ ಸಾಧ್ಯ ಎಂದು ತಿರುಮಲಾಪುರ ಗ್ರಾಪಂ ಅಧ್ಯಕ್ಷ ದೇವರಾಜ್ ಪ್ರಶ್ನಿಸಿದರು.
ಗ್ರಾಮ ನೈರ್ಮಲ್ಯ ಯೋಜನೆಯ ಕುರಿತಂತೆ ತಿರುಮಲಾಪುರ ಗ್ರಾಮಪಂಚಾಯ್ತಿಯಲ್ಲಿ ಸೋಮವಾರದಂದು ಸುದ್ದಿಗೋಷ್ಟಿ ನಡೆಸಿದ ಅಧ್ಯಕ್ಷ ದೇವರಾಜು.ಗ್ರಾಪಂ ಉಪಾಧ್ಯಕ್ಷ ಮೋಹನ್ ಕುಮಾರ್,ಮಾಜಿ ಅಧ್ಯಕ್ಷ ಹೊಸಹಳ್ಳಿಪಾಳ್ಯ ಕೃಷ್ಣಮೂರ್ತಿ ಮೊದಲಾದವರಿದ್ದಾರೆ.
ಗಾಯತ್ರಿದೇವಿ ಗ್ರಾಪಂ ಸದಸ್ಯೆಯಾಗಿದ್ದು ಅಧಿಕಾರ ಚಲಾಯಿಸದೆ ತಮ್ಮ ಪತಿ ಸುರೇಶ್ ಗೆ ಅವಕಾಶ ನೀಡಿರುವುದು ಸರಿಯೇ. ಈತ ಪ್ರತಿಯೊಂದಕ್ಕೂ ಪಂಚಾಯ್ತಿಗೆ ಆಗಮಿಸಿ ಆ ಬಿಲ್ ,ಈ ಬಿಲ್ ಹಣ ಕೊಡಿ ಎಂದು ಸಿಬ್ಬಂದಿಗಳ ಮೇಲೆ ದರ್ಪ ತೋರುತ್ತಾರೆ.ಇವರ ಮೊನ್ನಿನ ದುಂಡಾವರ್ತನೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಈತನ ಬಾಯಿಂದ ಬರುವ ಅವ್ಯಾಚ ಪದಗಳಿಗೆ ಹೆದರಿ ಈಗಾಗಲೇ ಮೂರು ಮಂದಿ ಕಾರ್ಯದರ್ಶಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ.ಹೀಗಾದರೆ ಗ್ರಾಮದ ಅಭಿವೃದ್ಧಿ ಕಾರ್ಯವನ್ನು ನಡೆಸುವುದು ಹೇಗೆ ಸಾಧ ಎಂದರು. ಕಳೆದ ಮಂಗಳವಾರವಷ್ಟೆ ಗ್ರಾಮ ನೈರ್ಮಲ್ಯ ಯೋಜನೆಯಲ್ಲಿ ಹೊಸಹಳ್ಳಿ ಗ್ರಾಮದಲ್ಲಿ ಈಗಾಗಲೇ ಮಾಡಿಮುಗಿಸಿರುವ ಕಾಮಗಾರಿಗೆ ಹಣಕೊಡಲು ಗ್ರಾಪಂ ಅಧ್ಯಕ್ಷರು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಕೂಲಿಕಾರ್ಮಿಕರ ಹಣದ ಚೆಕ್ ಕೊಡದ ಹೊರತು ತನಕ ಈ ಗ್ರಾಪಂ ಕಚೇರಿಯಿಂದ ತೆರಳುವುದಿಲ್ಲವೆಂದು ಹೊಸಹಳ್ಳಿ ಗ್ರಾಮದ ಗ್ರಾಪಂ ಸದಸ್ಯೆ ಹೆಚ್.ಆರ್.ಗಾಯಿತ್ರಿದೇವಿ ಸುರೇಶ್ ತಿರುಮಲಾಪುರ ಗ್ರಾಪಂ ಕಚೇರಿಯಲ್ಲಿ ಪಟ್ಟು ಹಿಡಿದಿದ್ದ ಘಟನೆಗೆ ಸಂಬಂಧಿಸಿದಂತೆ ತಿರುಮಲಾಪುರ ಗ್ರಾಮಪಂಚಾಯ್ತಿಯಲ್ಲಿ ಸೋಮವಾರದಂದು ಸುದ್ದಿಗೋಷ್ಟಿ ನಡೆಸಿದ ಅಧ್ಯಕ್ಷ ದೇವರಾಜು ಮೇಲ್ಕಂಡಂತೆ ನುಡಿದರು.
ಗಾಯತ್ರಿದೇವಿ ನೀಡಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ಈಕೆ ಕಾಮಗಾರಿ ಮುಗಿಸಿ ಮರುದಿನವೇ ಹಣ ಪಾವತಿಸಿ ಎಂದು ಕಾರ್ಯದರ್ಶಿ ಸಮಕ್ಷಮ ದಾಖಲೆಗಳನ್ನು ಕೊಟ್ಟು ಹೋಗಿದ್ದರು.ಆ ವೇಳೆ ಅಯ್ಯಪ್ಪ ದರ್ಶನಕ್ಕೆ ಯಾತ್ರೆ ಹೊರಟ್ಟಿದ್ದರಿಂದ ಪರಿಶೀಲಿಸಿ ಸಹಿ ಹಾಕಲು ಸಾಧ್ಯವಾಗಿಲ್ಲ.ಅಲ್ಲದೆ ಇದೇ ಯೋಜನೆಯ ಮತ್ತಷ್ಟು ಕೂಲಿ ಕಾರ್ಮಿಕರ ಹಣ ಕೂಡ ಪಾವತಿಸಿಲ್ಲ.ಹಾಗಿದ್ದೂ ಕೂಡ ಈಕೆ ಮಾತ್ರ ಆರೋಪ ಮಾಡಿ ಪಂಚಾಯ್ತಿಯಲ್ಲಿ ಧರಣಿ ಕೂತು ರಂಪಾಟ ಮಾಡಿದ್ದರ ಹಿಂದೆ ದುರುದ್ದೇಶವಿದೆ ಎಂದರು.
ಈಕೆಯ ಪತಿ ಚುನಾವಣೆಯಲ್ಲಿ ಸೋತಿದ್ದರ ಹಿನ್ನಲೆಯಲ್ಲಿ ಪಂಚಾಯ್ತಿಯಲ್ಲಿನ ದಾಖಲೆಗಳನ್ನು ಆರ್ಟಿಐ ಮೂಲಕ ಪಡೆದು ,ಎಲ್ಲರಿಗೂ ತಪ್ಪುಮಾಹಿತಿ ನೀಡುತ್ತಾ ಹಣದುರುಪಯೋಗವಾಗಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಾ ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.
ಸುದ್ದಿ ಗೋಷ್ಟಿಯಲ್ಲಿ ಗ್ರಾಪಂ ಉಪಾಧ್ಯಕ್ಷ ಮೋಹನ್ ಕುಮಾರ್,ಮಾಜಿ ಅಧ್ಯಕ್ಷ ಹೊಸಹಳ್ಳಿಪಾಳ್ಯ ಕೃಷ್ಣಮೂರ್ತಿ,ಸದಸ್ಯರುಗಳಾದ ಶಂಕ್ರಪ್ಪ,ಯಮುನಾ, ಪ್ರಕಾಶ್, ದಯಾನಂದ ಮೂರ್ತಿ,ಬಸವರಾಜ್, ನೀಲಾವತಿ,ಕನಕ,ರತ್ನಮ್ಮ ,ತಾಲ್ಲೂಕ್ ದಲಿತ ಸಹಾಯವಾಣಿಯ ಅಧ್ಯಕ್ಷ ಹನುಮಂತಪ್ಪ,ಸುಂದರೇಶ್, ಗ್ರಾಪಂ ಕಾರ್ಯದರ್ಶಿ ಜ್ಞಾನಮೂರ್ತಿ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ