ಹುಳಿಯಾರು: ಕಳೆದ ಹಲವಾರು ತಿಂಗಳಿನಿಂದ ಆರುಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ಇದೀಗ 600 ರೂ ದಿಢೀರ್ ಏರಿಕೆ ಕಂಡಿದ್ದು ಬುಧವಾರದಂದು ನಡೆದ ತಿಪಟೂರು ಹರಾಜಿನಲ್ಲಿ 7360 ಧಾರಣೆ ಕಂಡಿದೆ.
ಹುಳಿಯಾರು ಮಾರುಕಟ್ಟೆಯಲ್ಲಿ ಕಳೆದ ವಾರದ ಹರಾಜಿನಲ್ಲಿ 6565 ರೂ ಬೆಲೆಗೆ ಟೆಂಡರ್ ನಿಂತಿದ್ದು ಸೋಮವಾರದ ಬೆಲೆ 6700 ರೂ ಇತ್ತು.ಇದೀಗ ತಿಪಟೂರು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಇಲ್ಲೂ ಕೂಡ 7300 ರೂ ನಂತೆ ಖರೀದಿ ನಡೆಯಲಿದೆ.
ಹುಳಿಯಾರಿನ ಮಾರುಕಟ್ಟೆಯಲ್ಲಿ ಗುರುವಾರ ನಾಲ್ಕು ಗಂಟೆಗೆ ಟೆಂಡರ್ ನಡೆಯಲಿದ್ದು ಬೆಲೆ ಮತ್ತಷ್ಟು ಏರಿಕೆ ಕಾಣಲಿದೆಯೆಂದು ಕೊಬ್ಬರಿ ವರ್ತಕರು ಹಾಗೂ ಎಪಿಎಂಸಿ ಸದಸ್ಯರು ಆದ ಚಿಕ್ಕಬಿದರೆ ಶಾಂತಣ್ಣ ಸುಳಿವು ನೀಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ