ಹುಳಿಯಾರು: ಒಂದೂವರೆ ತಿಂಗಳ ಹಿಂದೆ ಕಾಣೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆಯಾಗಿರುವ ಘಟನೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ತೆಯಾಗಿರುವ ಅಸ್ಥಿಪಂಜರವನ್ನು ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಮದ ಮಲ್ಲಿಕಾರ್ಜುಯ್ಯ (೨೫) ಎಂಬಾತನದಿರಬಹುದೆಂದು ಊಹಿಸಲಾಗಿದೆ. ಈತ ಕಳೆದ ಡಿಸೆಂಬರ್ ಮಾಹೆಯ ೧೦ ನೇ ತಾರೀಖು ಚೀಟಿಗೆ ಹಣ ಕಟ್ಟಲು ಸ್ನೇಹಿತನಿಂದ ಹಣ ಪಡೆದು ಬರುವುದಾಗಿ ಹೇಳಿ ಮನೆಯಿಂದ ಹೋದವನು ಇದುವರೆವಿಗೂ ಹಿಂದಿರುಗಿರುವುದಿಲ್ಲ ಎನ್ನಲಾಗಿದೆ.
ಮಲ್ಲಿಕಾರ್ಜುನಯ್ಯ ಕಾಣೆಯಾಗಿರುವ ಬಗ್ಗೆ ಪೋಷಕರು ಹುಳಿಯಾರು ಪೊಲೀಸ್ ಠಾಣೆಗೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ನೀಡಿದ್ದರು. ಆದರೆ ಇದುವರೆವಿಗೂ ಈತನ ಬಗ್ಗೆ ಯಾವುದೇ ಸುಳಿಹು ಪತ್ತೆಯಾಗಿರಲಿಲ್ಲ. ಭಾನುವಾರ ಸಂಜೆ ಕುರಿಗಾಹಿ ತೊರೆಮನೆಯ ರಾಮಣ್ಣ ಅವರು ಕುರಿ ಮೇಯಿಸಲು ಹುಳಿಯಾರು ಸಮೀಪದ ತಿಮ್ಲಾಪುರ ಕೆರೆಗೆ ಹೋದಾಗ ಅಲ್ಲಿ ಪಂಜೆ, ಶರ್ಟ್, ಬನೀನು, ಚಪ್ಪಲಿ ಹಾಗೂ ತಲೆ ಬುರುಡೆ ಸೇರಿದಂತೆ ಕೆಲ ಮೂಳೆಗಳು ಪತ್ತೆಯಾಗಿದೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದರೆ ತಿಮ್ಲಾಪುರ ಕೆರೆಯ ಬಳ್ಳಾರಿ ಜಾಲಿ ಪೊದೆಯಲ್ಲಿ ಪತ್ತೆಯಾಗಿರುವ ಬಟ್ಟೆಯ ಕುರುಹು ಹಾಗೂ ದೊಡ್ಡ ಬಿದರೆ ಮಲ್ಲಿಕಾರ್ಜುನಯ್ಯ ಅವರ ಪೋಷಕರು ಕೊಟ್ಟ ಮಲ್ಲಿಕಾರ್ಜುನಯ್ಯ ಅವರ ಬಟ್ಟೆಯ ಕುರುಹು ಹೊಂದಾಣಿಕೆಯಾಗಿದ್ದು ಅಸ್ಥಿಪಂಜರ ಮಲ್ಲಿಕಾರ್ಜುನಯ್ಯ ಅವರದೇ ಎಂದು ಊಹಿಸಲಾಗಿದೆ. ಕಾಣೆಯಾದ ದಿನದಂದೆ ಈತನ ಕೊಲೆಯಾಗಿದ್ದು ಮೃತ ದೇಹದ ಮಾಂಸವನ್ನು ನಾಯಿನರಿಗಳು ತಿಂದು ಬುರುಡೆ, ಕೈ ಮೂಳೆ, ದವಡೆ ಹಲ್ಲು ಸೇರಿದಂತೆ ಕೆಲ ಮೂಳೆಗಳನ್ನು ಮಾತ್ರ ಉಳಿಸಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ತಿಪಟೂರು ಡಿ.ವೈ.ಎಸ್.ಪಿ.ವೇಣುಗೋಪಾಲ್, ಚಿ.ನಾ.ಹಳ್ಳಿ ಸಿಪಿಐ ಮಾರಪ್ಪ, ಹುಳಿಯಾರು ಪಿಎಸ್‌ಐ ಪ್ರವೀಣ್ ಹಾಗೂ ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪೊಲೀಸರ ತನಿಖೆಯಿಂದ ಈ ಸಾವಿನ ಸತ್ಯಾಂಶ ತಿಳಿಯಬೇಕಿದೆ.
ಹುಳಿಯಾರು ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.ತಿಮ್ಲಾಪುರ ಗ್ರಾಪಂ ಅಧ್ಯಕ್ಷ ದೇವರಾಜು, ದೊಡ್ಡಬಿದರೆ ಗ್ರಾಪಂ ಸದಸ್ಯ ಕುಮಾರ್ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ