ಹುಳಿಯಾರು:ಇಲ್ಲಿನ ಬಸ್ ನಿಲ್ದಾಣದಲ್ಲಿ ಬಂದು ಹೋಗುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆಯಿಲ್ಲ,ಇರುವ ಪ್ರಯಾಣಿಕರ ತಂಗುದಾಣವಂತೂ ಗಬ್ಬೆದು ಹೋಗಿದ್ದು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿದ್ದು ನೀರುನಿಡಿಯಿಲ್ಲದಿರುವ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಮಾಲಿ ಸಂಘ ಒತ್ತಾಯಿಸಿದೆ.
ಹುಳಿಯಾರಿನ ಬಸ್ ನಿಲ್ದಾಣದ ಪಕ್ಕದ ಕೆರೆ ದಂಡೆಯ ಮೇಲೆ ಹಮಾಲಿ ಸಂಘ, ಫುಟ್‌ಪಾತ್ ವ್ಯಾಪಾರಿಗಳು, ಬಸ್ ಏಜೆಂಟ್‌ಗಳು ಕಾಡು ಗೋಡಂಬಿ ಸಸಿ ನೆಟ್ಟು ನಿಲ್ದಾಣದಲ್ಲಿನ ಸಮಸ್ಯೆ ಬಗ್ಗೆ ಗಮನಸೆಳೆದರು.
ಹುಳಿಯಾರು ಪಟ್ಟಣ ತಾಲ್ಲೂಕು ಮಟ್ಟಕ್ಕೆ ಬೆಳೆದು ನಿಂತಿದ್ದು ಪ್ರತಿದಿನ ನೂರಾರು ಸರ್ಕಾರಿ ಬಸ್‌ಗಳು ಸೇರಿದಂತೆ ಅಪಾರ ಸಂಖ್ಯೆಯ ಖಾಸಗಿ ವಾಹನಗಳು ಬಸ್ ನಿಲ್ದಾಣಕ್ಕೆ ಬಂದು ಹೋಗಿ ಮಾಡುತ್ತವೆ. ಸಾವಿರಾರು ಪ್ರಯಾಣಿಕರು ಬಂದುಹೋಗಿ ಮಾಡುತ್ತಾರೆ.ಆದರೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಹಾಗೂ ಸೂಕ್ತ ಆಸನದ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಆರೋಪಿಸಿದರು. ಪ್ರಯಾಣ ಬೆಳೆಸಲು ಬರುವ ವಯೋವೃದ್ಧರು, ಗರ್ಭಿಣಿಯರು, ಶಾಲಾ ವಿದ್ಯಾರ್ಥಿಗಳು, ಅಂಗವಿಕಲರು ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆಯಿಲ್ಲದೆ ಗಂಟೆಗಟ್ಟಲೆ ನಿಂತು ನೋವನ್ನನುಭವಿಸುತ್ತಾರೆ. ಕುಡಿಯಲಿಕ್ಕೆ ನೀರು ಸಿಗದೆ ಅಕ್ಕಪಕ್ಕದ ಹೋಟೆಲ್‌ಗಳಿಗೆ ತೆರಳಿ ಕಾಡಿಬೇಡುವ ದೃಶ್ಯ ಸಾಮಾನ್ಯವಾಗಿದೆ ಎಂದರು.
ಅಲ್ಲದೆ ಬಸ್ ನಿಲ್ದಾಣ ತೀರ ಚಿಕ್ಕದಾಗಿದ್ದು ಕೆಲವೊಂದು ಸಂದರ್ಭದಲ್ಲಿ ಬಸ್ ಗಾಗಿ ಪ್ರಯಾಣಿಕರು ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿಯಿರುವುದನ್ನು ಮನಗಂಡು ಇಂದು ಸಸಿ ನೆಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿಗಳನ್ನು ನೆಡುವುದರ ಮೂಲಕ ನೆರಳಿನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಬಸ್‌ಏಜೆಂಟ್ ಉಮೇಶ್, ಟೀಅಂಗಡಿ ರಾಜಣ್ಣ, ಕೆ.ಎಲ್. ರಂಗಯ್ಯ, ಮಲ್ಲಿಕಣ್ಣ, ರೇಣುಕ, ಹಮಾಲಿ ಸಂಘದ ರಂಗಣ್ಣ, ರಾಜಣ್ಣ, ದಾಸಪ್ಪ, ನಾಗರಾಜ್ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ