ಹುಳಿಯಾರು ಹೋಬಳಿಯ ಬೆಳವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಿ.ಬಿ.ಎಸ್ ಮಾರುತಿ ಯುವಕ ಸಂಘದ ವತಿಯಿಂದ ಹೊಸವರ್ಷವನ್ನು ಆದ್ದೂರಿಯಾಗಿ ಆಚರಿಸಲಾಯಿತು.
ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಸಿ.ಬಿ.ಎಸ್ ಸಂಘದ ಅಧ್ಯಕ್ಷರಾದ ಕುಮಾರಸ್ವಾಮಿ ಮಕ್ಕಳು ಶೈಕ್ಷಣಿಕವಾಗಿ ಮುಂದೆಬರಬೇಕೆಂದರಲ್ಲದೆ ಮಕ್ಕಳ ಬಿಸಿಯೂಟ ಯೊಜನೆಗೆ ಸಂಘದವತಿಯಿಂದ ಹಾಗೂ ದಾನಿಗಳ ಮೂಲಕ ತಟ್ಟೆಲೋಟದ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ಅರಸ್,ಎಸ್ ಡಿಎಂಸಿ ಅಧ್ಯಕ್ಷರಾದ ಬಸವರಾಜು ,ಸಹ ಶಿಕ್ಷಕರಾದ ಗಿರೀಶ್ ,ಸಿ.ಬಿ.ಎಸ್ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ