ಹುಳಿಯಾರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಜ.೯ ರ ಬೆಳಿಗ್ಗೆ 10ಗಂಟೆಗೆ 'ಲಂಚ ಮುಕ್ತ ಚಿಕ್ಕನಾಯಕನಹಳ್ಳಿ'ಯ ಮುಂದುವರೆದ ಭಾಗವಾಗಿ 'ಲಂಚಮುಕ್ತ ಹುಳಿಯಾರು" ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ನಿಮಿತ್ತ ಪ್ರತಿಯೊಂದು ಸರ್ಕಾರಿ ಕಛೇರಿಗಳಲ್ಲೂ ಸಾಮಾಜಿಕ ಪರಿವೀಕ್ಷಣೆಯನ್ನು ಮಾಡಲಾಗುವುದು. ಹುಳಿಯಾರಿನ ನಾಡ ಕಛೇರಿಯಿಂದ ಆರಂಭವಾಗಿ ರೈತ ಸಂಪರ್ಕ ಕೇಂದ್ರ,ಪೋಲೀಸ್ ಠಾಣೆ,ಸರ್ಕಾರಿ ಆಸ್ಪತ್ರೆ ಹಾಗೂ ಹುಳಿಯಾರು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಸಾಮಾಜಿಕ ಪರಿವೀಕ್ಷಣೆ ನಡೆಸಲಾಗುವುದು.
ಇದೇ ಸಂದರ್ಭದಲ್ಲಿ ಸದರಿ ಕಛೇರಿಗಳಲ್ಲಿ ಲಂಚದ ಸಮಸ್ಯೆ ಎದುರಿಸುತ್ತಿರುವವರು ಸೂಕ್ತ ದಾಖಲೆಗಳೊಂದಿಗೆ ವೇದಿಕೆಯ ಸದಸ್ಯರನ್ನು ಸಂಪರ್ಕಿಸಿದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಬಹುದಿದ್ದು ಎಲ್ಲಾ ನಾಗರೀಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭ್ರಷ್ಟರ ಕಿವಿ ಹಿಂಡುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವೇದಿಕೆಯ ತಾಲ್ಲೂಕ್ ಸಂಚಾಲಕ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ