ಯಳನಾಡುವಿನ್ನಲ್ಲಿ ಗೋಶಾಲೆಗಾಗಿ ಪ್ರತಿಭಟನೆ
ಹುಳಿಯಾರು: ಗೋವುಗಳು ಸಾಯುವ ಮುನ್ನ ಗೋಶಾಲೆ ತೆರೆದು ದನಕರುಗಳ ಜೀವ ಉಳಿಸಿ ಎಂದು ರೈತಮುಖಂಡ ಮಲ್ಲಿಕಾರ್ಜುನಯ್ಯ ಒತ್ತಾಯಿಸಿದರು.
ಹುಳಿಯಾರು ಹೋಬಳಿ ಯಳನಾಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಬುಧವಾರದಂದು ರೈತರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿ ಯಳನಾಡು ಗ್ರಾಮದಲ್ಲಿ ಗೋಶಾಲೆಗಾಗಿ ಬುಧವಾರದಂದು ಗ್ರಾಮದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. |
ಈಗಾಗಲೆ ತಾಲ್ಲೂಕಿನ ಪ್ರತಿ ಹೋಬಳಿಗಳಲ್ಲಿ ಗೋಶಾಲೆಗಳನ್ನು ತೆರೆದಿದ್ದು ಉಳಿದೆಡೆ ಅವಶ್ಯಕತೆಯನುಸಾರವಾಗಿ ೨ನೇ ಹಂತದಲ್ಲಿ ತೆರೆಯಲಾಗುವುದಿದ್ದು ಅ ಸಮಯದಲ್ಲಿ ಯಳನಾಡು ಗ್ರಾಮದಲ್ಲಿ ಕೂಡ ಗೋಶಾಲೆ ತೆರೆಯುವುದಾಗಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು.
ಮೊದಲನೆ ಹಂತದಲ್ಲಿ ಹುಳಿಯಾರು ಹೋಬಳಿಯ ಕಾರೇಹಳ್ಳಿಯಲ್ಲಿ ಗೋಶಾಲೆ ತೆರೆದು ಸಾಕಷ್ಟು ದಿನಗಳೆ ಕಳೆದಿದ್ದರೂ ಸಹ ಇದುವರೆಗೂ ಯಳನಾಡುನಲ್ಲಿ ಗೋಶಾಲೆ ತೆರೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲವೆಂದು ದೂರಿದರು.
ಬರಗಾಲದ ಹೆಸರಲ್ಲಿ ಸರಕಾರದಿಂದ ಜಿಲ್ಲೆಗೆ ಕೊಟ್ಟಿಗಟ್ಟಲೆ ಹಣ ಬರುತ್ತಿದೆ. ಆದರೆ ಹಳ್ಳಿ ಪ್ರದೇಶದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ದನಕರುಗಳಿಗೆ ತಿನ್ನಲು ಮೇವಿಲ್ಲದೆ ಅಲೆದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ನಿಮ್ಮ ಕಷ್ಟಕ್ಕೆ ನಾವು ಬರುತ್ತೆವೆ ಎಂದು ಭರವಸೆ ನೀಡಿ ಅಽಕಾರಕ್ಕೆ ಬಂದ ನಂತರ ಜನರ ಕಷ್ಟಕ್ಕೆ ಸ್ಪಂದಿಸುವ ಮನೋಭಾವವೇ ಇಲ್ಲದಂತೆ ವರ್ತಿಸುತ್ತಾರೆಂದು ಟೀಕಿಸಿದರು.
ಈಗಾಗಲೆ ಕೃಷಿ ನಂಬಿ ಜೀವನ ಸಾಗಿಸುತ್ತಿರುವ ರೈತರ ಬದುಕು ತೀರ ಸಂಕಷ್ಟಕ್ಕೆ ಸಿಲುಕಿದೆ. ದನಕರುಗಳಿಗೆ ಮೇವಿಲ್ಲದೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಸರಕಾರಗಳು ಎಚ್ಚೆತುಕೊಂಡು ಗೋಶಾಲೆಯಗಳನ್ನ ತೆರೆದು ರೈತರ ಜಾನುವಾರುಗಳನ್ನು ಉಳಿಸುವಂತೆ ಮನವಿಮಾಡಿದರು.
ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ ಪ್ರತಿ ಗ್ರಾಮಪಂಚಾಯ್ತಿಗಳಲ್ಲ್ಲೂ ಸಹಾ ಗೋಶಾಲೆಯನ್ನು ತೆರೆಯುವಂತೆ ಈಗಾಗಲೆ ಜಿಲ್ಲಾಪಂಚಾಯತ್ ಸಭೆಯಲ್ಲಿ ರೈತರ ಪರವಾಗಿ ಚರ್ಚಿಸಿದ್ದು ಯಳನಾಡು ಮತ್ತು ಸೀಗೆಬಾಗಿ ಗ್ರಾಮದಲ್ಲಿ ೨ನೇ ಹಂತದಲ್ಲಿ ಗೋಶಾಲೆಯನ್ನ ತೆರೆಯುವುದಾಗಿ ಭರವಸೆ ನೀಡಿದ್ದಾರೆ. ಈಗ ಪುನ: ಈ ಎರಡು ಗ್ರಾಮದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸುವುದಾಗಿ ತಿಳಿಸಿದರು.ಅಲ್ಲದೆ ಗೋಶಾಲೆಗೆ ಅಗತ್ಯವಾಗಿರುವ ನೀರಿನ ಸೌಲಭ್ಯ ಕಲ್ಪಿಸಲು ಕೂಡಲೆ ಕೊಳವೆ ಬಾವಿ ಕೊರೆಸುವುದಾಗಿ ಭರವಸೆ ನೀಡಿದರು.
ಹುಳಿಯಾರು ಹೋಬಳಿ ಯಳನಾಡು ಗ್ರಾಮದಲ್ಲಿ ಗೋಶಾಲೆಯನ್ನು ತೆರೆಯುವಂತೆ ಒತ್ತಾಯಿಸಿ ಬುಧವಾರದಂದು ರೈತರು ಉಪತಹಸೀಲ್ದಾರ್ ಸತ್ಯನಾರಾಯಣ್‌ಗೆ ಮನವಿ ಸಲ್ಲಿಸಿದರು. |
ನಂತರ ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ಸತ್ಯನಾರಾಯಣ್‌ಗೆ ರೈತರು ಮನವಿ ಸಲ್ಲಿಸಿ ಶೀಘ್ರವಾಗಿ ಗೋಶಾಲೆ ತೆರೆಯುವಂತೆ ಆಗ್ರಹಿಸಿದರು.
ಪ್ರತಿಭಟನೆಗೂ ಮುನ್ನ ರೈತರು ತಮ್ಮ ದನಕರುಗಳೊಂದಿಗೆ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಗುರುಪ್ರಸಾದ್, ಕುಮಾರಯ್ಯ, ಗಂಗಾಧರಯ್ಯ, ಕೃಷಿ ಸಹಕಾರ ಸೊಸೈಟಿಯ ಸದಸ್ಯ ಕುಮಾರ್, ರೈತಮುಖಂಡರಾದ ಲೋಕಣ್ಣ, ನಾಗರಾಜು, ಗಂಗಣ್ಣ, ರಂಗಣ್ಣ, ಗ್ರಾಮಸ್ಥರಾದ ದೇವರಾಜು, ಜಯಣ್ಣ, ಮೋಹನ್ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ