ಹುಳಿಯಾರು:ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಕೊಳ್ಳುತ್ತಿರುವ ನಫೇಡ್ ಸಂಸ್ಥೆ ರೈತರಿಂದ ಖರೀದಿಸಿದ ಕೊಬ್ಬರಿಗೆ ಇನ್ನೂ ಹಣ ಪಾವತಿಸದಿರುವುದು ಬರಗಾಲದಿಂದ ತತ್ತರಿಸುತ್ತಿರುವ ಕೊಬ್ಬರಿ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.
ಹುಳಿಯಾರು ನಫೇಡ್ ಕೇಂದ್ರ |
ಕೇಂದ್ರ ಸರ್ಕಾರದ ಬೆಂಬಲ ಬೆಲೆ 6240ರೂ ಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹಧನವೆಂದು ಒಂದು ಸಾವಿರವನ್ನು ಸೇರಿಸಿ ಕ್ವಿಂಟಾಲ್ ಗೆ ಒಟ್ಟು 7240 ರೂಗಳಂತೆ ಖರೀದಿ ನಡೆಸುತ್ತಿದೆ.ಕಳೆದ ಡಿ.೯ ರಿಂದ ನಾಫೆಡ್ ಕೊಬ್ಬರಿ ಖರೀದಿಸುತ್ತಿದ್ದು ಈಗಾಗಲೇ ೨೫ ದಿನ ಕಳೆದರೂ ರೈತರಿಗೆ ಮಾತ್ರ ಇನ್ನೂ ಹಣ ಪಾವತಿ ಮಾಡದಿರುವುದು ರೈತರಿಗೆ ದುಸ್ತರವಾಗಿ ಪರಿಣಮಿಸಿದೆ.
ಇದುವರೆಗೂ ಹುಳಿಯಾರಿನಲ್ಲಿ ೩೭ ರೈತರಿಂದ ೩೮೭ ಕ್ವಿಂಟಾಲ್ ಖರೀದಿ ಮಾಡಲಾಗಿದ್ದು ಬೆಂಬಲ ಬೆಲೆಯಾಗಿ ೨೪,೧೬,೧೨೮ ರೂ ಹಾಗೂ ಸಹಾಯಧನವಾಗಿ ೩,೮೭,೨೦೦ ಪಾವತಿಮಾಡಬೇಕಿದೆ.
ಹುಳಿಯಾರು ಖರೀದಿ ಕೇಂದ್ರದಲ್ಲಿ ೩೭ ರೈತರಿಗೆ ೨೫ ಲಕ್ಷ ಹಣ ಕೊಡಬೇಕಿದ್ದು ವಾರದೊಳಗೆ ಹಣ ಬರಲಿದೆ.ರೈತರು ಧೃತಿಗೆಡಬೇಕಿಲ್ಲ ಎನ್ನುತ್ತಾರೆ ಖರೀದಿ ಅಧಿಕಾರಿ ದಂಡೇಗೌಡ.
ಸಧ್ಯ ರಾಜ್ಯ ಸರ್ಕಾರ ೨ ಕೋಟಿ ಹಣ ಬಿಡುಗಡೆಯಾಗಿದ್ದು ನಫೇಡ್ ಇನ್ನೂ ಹಣ ಬಿಡುಗಡೆ ಮಾಡಿಲ್ಲ.ಹಣ ಬರುವವರೆಗೂ ರೈತರಿಗೆ ಕೊಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.
ಆದರೆ ನಫೇಡ್ ಆದೇಶದಂತೆ ಖರೀದಿ ನಡೆಸಿದ ಮೂರುದಿನದೊಳಗೆ ಹಣ ಬರಬೇಕಿದ್ದು ತಡವಾಗುತ್ತಿರುವುದರಿಂದ ಉಳಿದ ರೈತರು ಕೊಬ್ಬರಿ ಬಿಡಲು ಹಿಂದೆಮುಂದೆ ನೋಡುತ್ತಿದ್ದಾರೆ.ಕೊಬ್ಬರಿಗೆ ಕೂಡಲೇ ಹಣ ನೀಡುವ ವ್ಯವಸ್ಥೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ