ಹುಳಿಯಾರು:ಪಟ್ಟಣದ ಶ್ರೀಪ್ರಸನ್ನ ಗಣಪತಿ ದೇವಾಯಲದಲ್ಲಿ ಸಂಕಷ್ಟಹರ ಚತುರ್ಥಿ ವಿಧಿವತ್ತಾಗಿ ನೆರವೇರಿತು .ಪೂಜೆಯ ಅಂಗವಾಗಿ ಗಣಪತಿಗೆ ವಿಶೇಷವಾಗಿ ಅವರೆಕಾಳು ಹಾಗೂ ಅವರೆಕಾಯಿಯ ಅಲಂಕಾರ ಮಾಡಲಾಗಿತ್ತು.
ಗಣಪತಿಗೆ ಮಾಡಲಾಗಿದ್ದ ಅವರೆಕಾಯಿ ಅಲಂಕಾರ |
ಅರ್ಚಕ ರಾಜಣ್ಣ ಹಾಗೂ ಚೇತನ್ ಅವರುಗಳ ೨೩ ಗಂಟೆಗಳ ಕಾಲ ಪರಿಶ್ರಮದಿಂದ ಗಣಪನಿಗೆ ಮಾಡಲಾಗಿದ್ದ ಅಲಂಕಾರ ಎಲ್ಲರ ಗಮನ ಸೆಳೆಯಿತು.ವ್ರತಧಾರಿ ಮಹಿಳೆಯರು ಗಣಪನಿಗೆ ಅರ್ಘ್ಯ ನೀಡಿ ಚಂದ್ರದರ್ಶನ ಪದೆದರು.
ಇಂದಿನ ಪೂಜೆ ಸತ್ಯನಾರಯಣ ಜೋಯಿಸ್,ಅರ್ಚಕ ರಾಜಣ್ಣನಡೆಸಿಕೊಟ್ಟರು.ಆಗಮಿಸಿದ್ದ ಭಕ್ತಾಧಿಗಳಿಗೆ ಮೋದಕ ಪ್ರಸಾದ ಹ್ಜಾಗೂ ಫಲಹಾರ ವಿತರಿಸಲಾಯಿತು.ಅಧ್ಯಕ್ಷ ಮೋಹನ್,ಹೂವಿನ ಬಸವರಾಜ್,ತಾಂಡವಾಚಾರ್,ತಮ್ಮಯ್ಯ,ವೆಂಕಟರಾಯ,ಗೌಡಿ,ದಯಾನಂದ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ