ಹುಳಿಯಾರು: ಪ್ರತಿಯೊಂದು ಮಗುವಿಗೂ ಸಹಾ ಕಡ್ಡಾಯವಾಗಿ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನ ಆಸ್ತಿವಂತರನ್ನಾಗಿ ಮಾಡುವಂತೆ ಸಿ.ಆರ್.ಪಿ.ಪ್ರೇಮಲೀಲಾ ಸಲಹೆ ನೀಡಿದರು.
ಹುಳಿಯಾರಿನ ಎಂ.ಪಿ.ಎಸ್.ಸರ್ಕಾರಿ ಶಾಲೆಯ ವಾರ್ಷಿಕೊತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧ್ಮಾತ್ಮಕ ಯುಗದಲ್ಲಿ ಶಿಕ್ಷಣ ಅತಿ ಮುಖ್ಯವಾಗಿದ್ದು ಪ್ರತಿಯೊಬ್ಬರು ಸಹಾ ಕಡ್ಡಾಯವಾಗಿ ಶಿಕ್ಷಣವನ್ನ ಕಲಿಯುವುದು ಮುಖ್ಯವಾಗಿದೆ ಎಂದರು.
ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸರಕಾರವು ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದು ಉಚಿತ ಸೈಕಲ್, ಸಮವಸ್ತ್ರ, ಪಠ್ಯಪುಸ್ತಕ, ಸೇರಿದಂತೆ ಅನೇಕ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಸಮಪರ್ಕವಾಗಿ ಸದಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗುವಂತೆ ತಿಳಿಸಿದರು.
ಹೆಚ್.ಪಿ.ಜಿ.ಎಸ್.ಶಾಲೆಯ ಮುಖ್ಯಶಿಕ್ಷಕ ನಂದಾವಡಗಿ ಮಾತನಾಡಿ ಈ ಶಾಲೆಯ ಆವರಣದಲ್ಲಿ ಲೈಟ್ ಇಲ್ಲದಿರುವುದರಿಂದ ರಾತ್ರಿಯ ಕತ್ತಲಿನಲ್ಲಿ ಶಾಲೆಯ ಮುಂಭಾಗ ಮತ್ತು ಕೊಠಡಿಗಳ ಕಟ್ಟೆಯ ಮೇಲೆ ಕೆಲವು ಕಿಡಿಗೇಡಿಗಳು ರಾತ್ರಿಯ ವೇಳೆ ಮದ್ಯಪಾನ ಮಾಡಿ ಕಾಲಿಬಾಟಲ್‌ಗಳನ್ನ ಎಸೆದಿರುತ್ತಾರೆ. ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಗೆ ದೂರನ್ನು ಸಹಾ ನೀಡಲಾಗಿದ್ದರೂ ಸಹಾ ಪ್ರಯೋಜನವಾಗಿಲ್ಲಾ. ಈಗಲಾದರೂ ಗ್ರಾಮಪಂಚಾಯ್ತಿಯವರು ಶಾಲೆಯ ಆವರಣಕ್ಕೆ ಎರಡು ದೊಡ್ಡ ವಿದ್ಯುತ್ ಲೈಟ್ ಅಳವಡಿಸುವ ಮೂಲಕ ಇಂತಹ ಕೃತ್ಯಕ್ಕೆ ತಡೆಯೊಡ್ಡಬೇಕೆಂದು ಮನವಿ ಮಾಡಿದರು.
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಗಿರೀಶ್ ಮಾತನಾಡಿ ಮಕ್ಕಳು ಕೇವಲ ಪಠ್ಯಪುಸ್ತಕಗಳಿಗೆ ಸಿಮೀತವಾಗದೆ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಈ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಸದಸ್ಯ ರಂಗನಾಥ್, ಶಾಲೆಯ ಮುಖ್ಯಶಿಕ್ಷಕ ಶಂಕರಪ್ಪ, ಶಿಕ್ಷಕರಾದ ಶಂಕರಮ್ಮ, ಸುಮಿತ್ರಾಬಾಯಿ ಹಾಜರಿದ್ದರು.
ಈ ವೇಳೆ ಶಾಲೆಯಿಂದ ವರ್ಗಾವಣೆಗೊಂಡಿರುವ ಶಿಕ್ಷಕಿ ಶಂಕರಮ್ಮ ಅವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ನಡೆಸಲಾಗಿದ್ದ ವಿವಿಧ ಕ್ರೀಡಾಚಟುವಟಿಕೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ