ಭಾರತದಲ್ಲಿನ ಎಲ್ಲಾ ಹಿಂದೂ ಧರ್ಮದವರು ಹಾಗೂ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾದ ಮುಸ್ಲಿಂ ಧರ್ಮದವರು ಸದಾಕಾಲ ಅಣ್ಣತಮ್ಮಂದಿರಂತೆ ಸಹೋದರತ್ವದ ಬಾಂಧ್ಯವ್ಯ ಹೊಂದಿದ್ದಾರೆ ಹೊರತು ಎಂದಿಗೂ ಶತ್ರುಗಳಲ್ಲ,ನಾವೆಲ್ಲಾ ಭಾರತೀಯ ರೆಂ ಬ ವಿಶಾಲ ಮನೋಭಾವ ಹೊಂದಿ ಬಾಳುತ್ತಿದ್ದಾರೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಅಭಿಪ್ರಾಯಪಟ್ಟರು. ಸಿಂಗದಹಳ್ಳಿ ರಾಜ್ ಕುಮಾರ್ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ಮಾಲಿಕೆ ಹಾಕಿ ಗೌರವಿಸಿದರು. ಹುಳಿಯಾರಿನ ಟಿಫ್ಫು ಸುಲ್ತಾನ್ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಪುಣ್ಯತಿಥಿ ಸಮಾರಂಭದಲ್ಲಿ ಅವರು ಮಾತನಾಡಿದರು. ಟಿಪ್ಪು ಅಪ್ರತಿಮ ದೇಶಭಕ್ತನಾಗಿದ್ದು ದೇಶಕ್ಕಾಗಿ ತನ್ನ ಪ್ರಾಣವನ್ನೆ ಅರ್ಪಣೆ ಮಾಡಿದ ಮಹಾನ್ ವ್ಯಕ್ತಿ.ಬ್ರಿಟೀಷರ ಅಧಿಕಾರಶಾಹಿ ಹಟ್ಟಹಾಸದ ವಿರುದ್ದ ಸಿಡಿದೆದ್ದ ಮುಸ್ಲಿಂ ನಾಯಕರಲ್ಲಿ ಪ್ರಮುಖ ಟಿಪ್ಪು. ಸಾಂಸ್ಕೃತಿಕ ನಗರಿ ಮೈಸೂರನ್ನು ಬ್ರಿಟೀಷರ ಅಧೀನಕ್ಕೆ ಕೊಡದೇ ಅವರ ವಿರುದ್ದ ಹಲವು ಯುದ್ದಗಳನ್ನು ಮಾಡಿ,ಆಂಗ್ಲರ ಸಂಚಿಗೆ ಬಲಿಯಾದ ವೀರ. ಮೈಸೂರ್ ಹುಲಿ ಎಂದೇ ದೇಶಾದ್ಯಂತೆ ಪ್ರಚುರವಾಗಿರುವ ಈತ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ ಎಂದರು. ದೇಶಕ್ಕಾಗಿ ಹೋರಾಟ ಮಾಡಿ ಅಳಿದ ದೇಶಭಕ್ತನ ಹೆಸರಲ್ಲಿ ಇಂದ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070