ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,113 ಮಂದಿ ಉತ್ತೀರ್ಣರಾಗಿರುವ ಮೂಲಕ ಶಾಲೆಗೆ 80% ಫಲಿತಾಂಶ ಬಂದಿರುತ್ತದೆ. 3 ಮಂದಿ ಅತ್ಯುನ್ನತ ಶ್ರೇಣಿ, 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ , 29 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 40 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ಆಂಗ್ಲ ಮಾಧ್ಯಮದ ವಿಧ್ಯಾರ್ಥಿನಿ ಕೆಂಕೆರೆ ಸೋನಿಯಾ ಕೆ.ಎಂ. 563 ಅಂಕ ಪಡೆದು 90.08% ಗಳಿಸಿದರೆ,ಮನೋಜ್ ಹೆಚ್.ಜಿ.545 ಅಂಕಗಳಿಸಿ 87.2% ಗಳಿಸಿದ್ದು, ಯಶಸ್ವಿನಿ 540 ಅಂಕಗಳಿಸಿ 86.4% ಪಡೆದಿರುತ್ತಾರೆ.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶೇ.91 ರಷ್ತು ಫಲಿತಾಂಶಬಂದಿದ್ದು,ಒಟ್ಟು 87 ಮಂದಿಯಲ್ಲಿ 76 ಮಂದಿ ಉತ್ತೀರ್ಣರಾಗಿದ್ದು,5 ಮಂದಿ ಅತ್ಯುತ್ತಮ ಶ್ರೇಣಿ,43ಮಂದಿ ಪ್ರಥಮ ಶ್ರೇಣಿ, 16 ಮಂದಿ ದ್ವಿತೀಯ ಸ್ಥಾನ,12 ಮಂದಿ ತೃತೀಯ ಸ್ಥಾನ ಪಡೆದಿದ್ದಾರೆ.ಎಸ್.ಸಿ.ಸೀಮಾ(584/ 93.44%), ಬಿ.ಎಂ.ತನುಶ್ರೀ (580 / 92.8%),ಪಿ.ಸಚಿನ್(564/ 90.24%),ಮಂಜು(553/ 88.48%), ಆರ್.ಸಚಿನ್(543/ 86.88%) ಅಂಕಗಳನ್ನು ಗಳಿಸಿದ್ದು ಶಾಲೆ ಹಾಗೂ ಪೋಶ್ಃಅಕರಿಗೆ ಕೀರ್ತಿ ತಂದಿದ್ದು, ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷರು,ಸಿಬ್ಬಂದಿವರ್ಗದವರು,ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇವರ ಸಾಧನೆಯನ್ನು ಮೆಚ್ಚಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಸೋನಿಯಾ ಕೆ.ಎಂ, ಮನೋಜ್ ಹೆಚ್.ಜಿ.. |
ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಒಟ್ಟು 60 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 42 ಮಂದಿ ಉತ್ತೀರ್ಣರಾಗಿದ್ದು,4 ಮಂದಿ ಪ್ರಥಮ, 15 ಮಂದಿ ದ್ವಿತೀಯ,23 ಮಂದಿ ತೃತೀಯ ಸ್ಥಾನ ಪಡೆದಿದ್ದು ಶೇ.70ರಷ್ಟು ಫಲಿತಾಂಶ ಬಂದಿರುತ್ತದೆ.
ಕನಕದಾಸ ಶಾಲೆಯಲ್ಲಿ ಒಟ್ಟು 57 ಮಂದಿ ಪರೀಕ್ಷೆ ಬರೆದಿದ್ದು 42 ಮಂದಿ ಉತ್ತೀರ್ಣರಾಗಿದ್ದು ಇಬ್ಬರು ಅತ್ಯುನ್ನತ್ತ ಶ್ರೇಣಿಯಲ್ಲಿ ತೇರ್ಗಡೆಯಾದರೆ,7ಮಂದಿ ಪ್ರಥಮ ಶ್ರೇಣಿ, 7ಮಂದಿ ದ್ವಿತೀಯ ಸ್ಥಾನ,26 ಮಂದಿ ತೃತಿಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಮಸ್ತಾನ್(566),ವಿವೇಕ್(561) ಅಂಕ ಪಡೆದ ವಿದ್ಯಾರ್ಥಿಗಳಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ