ಚಿ.ನಾ.ಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆ ಭಾನುವಾರ ನಡೆದಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಘರ್ಷಣೆ,ಗದ್ದಲ ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಹುಳಿಯಾರು ಹೋಬಳಿಯಾದ್ಯಂತ ಶಾಂತಿಯುತ ಮತದಾನ ನಡೆದಿದೆ.ಮುಂಜಾನೆ 7 ರಿಂದ ಮತದಾನ ಆರಂಭವಾದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಮಧ್ಯಾಹ್ನದ ಉರಿ ಬಿಸಿಲು ಅರಿತು ಮತದಾರರು ಬೆಳಿಗ್ಗೆ ಮತದಾನ ಕೇಂದ್ರದ ಮುಂದೆ ನೀಂತಿದ್ದು ಕಂಡುಬಂತು ಮಧಾಹ್ನ ಒಂದು ಗಂಟೆ ವೇಳೆಗೆ ಶೇ.50 ರಷ್ಟು ಮತದಾನ ವಾಗಿತ್ತು. ಉಳಿದಂತೆ ನಿರಸ ಮತದಾನ ನಡೆದು ಮತ್ತೆ ಸಂಜೆ ವೇಳೆಗೆ ಮತದಾರರು ಮತಕೇಂದ್ರಕ್ಕೆ ಬರಲಾರಂಭಿಸಿದ್ದು ಪುನ: ಮತದಾನ ಚುರುಕುಗೊಂಡಿತ್ತು. ಮತ ಚಲಾಯಿಸಲು ವಯೋವೃದ್ದರು,ವಿಕಲಚೇತನರು,ಮಹಿಳೆಯರು,ಪುರುಷ ಮತದಾರರು ಬರುತ್ತಿದ್ದರು. ಪಟ್ಟಣದ ಕೆಲ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತು ಜನ ಮತಚಲಾಯಿಸಿದೆ, ಇನ್ನುಳಿದ ಮತಗಟ್ಟೆಗಳಲ್ಲಿ ಜನ ವಿರಳವಾಗಿದ್ದು ಕಂಡುಬಂತು.
|
ಹುಳಿಯಾರಿನ ಮತಕೇಂದ್ರದಲ್ಲಿ ಮತಚಲಾಯಿಸಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು. |
ಹುಳಿಯಾರು ಹೋಬಳಿಯಲ್ಲಿ 11 ಸಾವಿರ ಮತದಾರರಿದ್ದು 13 ಮತಗಟ್ಟೆಗಳನ್ನು ಎಂಪಿಎಸ್ ಶಾಲೆ ಹಾಗೂ ಉರ್ದು ಶಾಲೆ,ಸೋಮಜ್ಜನ ಪಾಳ್ಯ,ಹುಳಿಯಾರು-ಕೆಂಕೆರೆ ಪ್ರೌಢಶಾಲೆಯಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಹೋಬಳಿ ವ್ಯಾಪ್ತಿಯ ಕೆಂಕೆರೆ,ತಿರುಮಲಾಪುರ,ಯಳನಡು,ಗಾಣಧಾಳು,ಬರಕನಹಾಲ್,ಕೋರಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಲ್ಲಿಯೂ ಸಹ ಶಾಂತಿಯುತ ಮತದಾನ ನಡೆದಿದ್ದು. ಆಯೋಗವು ಮತದಾರರ ಗುರುತಿನ ಚೀಟಿಗಳನ್ನು ಮತದಾರರ ಮನೆಗಳಿಗೆ ತಲುಪಿಸಿರುವುದರಿಂದ ಮತದಾರರು ತಮ್ಮ ಮತಗಟ್ಟೆ ಕೇಂದ್ರಗಳನ್ನು ಹುಡುಕುವ ಗೊಂದಲವಿಲ್ಲದೆ ಮತಚಲಾಯಿಸಿದರು. ಬೆಳಿಗ್ಗೆ ಸುಡು ಬಿಸಿಲಿನಲ್ಲಿ ಬಂದು ಜನ ಮತಚಲಾಯಿಸಿದರೆ, ಮಧಾಹ್ನ 2 ಗಂಟೆ ಸುಮಾರಿನಲ್ಲಿ ಸುರಿದ ತುಂತುರು ಮಳೆಯಲ್ಲಿ ಕೊಡೆಯಿಡಿದು ಬಂದು ಮತಚಲಾಯಿಸಲು ಮುಂದಾಗಿದ್ದರು. ನಂತರ ಮತದಾನ ಚುರುಕುಗೊಂಡು ಸಂಜೆ ವರೆವಿಗೂ ಜನ ಬಂದು ಮತಚಲಾಯಿಸಿದರು.
ಬಿಜೆಪಿ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಹುಳಿಯಾರಿನ 35ನೇ ಮತಗಟ್ಟೆಯಲ್ಲಿ ಮತಚಲಾಯಿಸಿದರೆ,ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ ಕೆಂಕೆರೆಯ ಮತಗಟ್ಟೆಯ ಮತ ಕೇಂದ್ರದಲ್ಲಿ ಮತಚಲಾಯಿಸಿದರು.ಕೆಂಕೆರೆ ಮತಗಟ್ಟೆಯಲ್ಲಿ ತಾ.ಪಂ.ಸದಸ್ಯ ನವೀನ್,ಗಂಗಣ್ಣ,ಮಂಜುನಾಥ್ ಮೊದಲು ಮತಚಲಾಯಿಸಿದ್ದಾರೆ.
|
ಅಂಗವಿಕಲೆಯೊಬ್ಬಳು ತನ್ನ ತಾಯಿಯ ಸಹಾಯದೊಂದಿಗೆ ಮತಚಲಾಯಿಸಿ ತೆರಳುತ್ತಿರುವುದು. |
ಮತದಾನ ಕೇಂದ್ರಗಳ ಸಮೀಪ ರಾಜಕೀಯ ಪಕ್ಷದ ಕಾರ್ಯಕರ್ತರು ಮತದಾರರನ್ನು ಓಲೈಸುವ ಕಾರ್ಯಕ್ಕೆ ನಿರ್ಭಂದ ಹೇರಿದ್ದು.ಮತದಾನ ಕೇಂದ್ರದ ಸನಿಹದಲ್ಲಿ ಯಾವುದೇ ಗೊಂದಲ,ಘರ್ಷಣೆಯ ವಾತಾವರಣ ಸೃಷ್ಠಿಯಾಗಲು ಅವಕಾಶಕ್ಕೆ ಎಡೆಯಗಲಿಲ್ಲ. ಚುನಾವಣಾ ಆಯೋಗವು ಪ್ರಸ್ತುತ ಕೈಗೊಂಡಿರುವ ನಿಯಮಗಳು ಹಾಗೂ ಚುನಾವಣಾ ಕ್ರಮಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಮುಂಬರುವ ಚುನಾವಣೆಗಳಲ್ಲಿ ಇದಕ್ಕಿಂತ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ನೆಲೆಯೂರುವಂತಾಗಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಮತದಾನ ಶಾಂತಿಯುತವಾಗಿ ನಡೆಯಲು ಬಿಗಿ ಭದ್ರತೆ ನಿಯೋಜಿಸಿಸಲಾಗಿತ್ತು.ಕಣದಲ್ಲಿರುವ 11 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಿದ್ದು,ಮತದಾರರ ಒಲವು ಯಾರಿಗೆ ವ್ಯಕ್ತವಾಗಿದೆ,ಮತಾಧೀಶನ ನಿಲುವೇನೆಂದು ಅರಿಯಲು,ಫಲಿತಾಂಶಕ್ಕಾಗಿ ಕಾಯಬೇಕಿದ್ದು,ಇನ್ನೂ ಮೂರುದಿನದಲ್ಲಿ ಫಲಿತಾಂಶ ಹೊರಬೀಳಲಿದೆ.
|
ಹುಳಿಯಾರಿನ ಎಂಪಿಎಸ್ ಶಾಲೆಯ ಮತಕೇಂದ್ರವೊಂದರಲ್ಲಿ ತನ್ನ ಮತ ಚಲಾಯಿಸಿ ಹೊರ ಬರುತ್ತಿರುವ ವಯೋವೃದ್ದ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ