ಮಾನಸಿಕ ಅಸ್ವಸ್ಥರುಗಳು ಮನೆಮಂದಿಯಿಂದ ದೂರವಾಗಿ ಬೀದಿಯಲ್ಲಿ ಅಲೆದಾಡ್ತಾಯಿರ್ತಾರೆ.ಅವರ ಬಗ್ಗೆ ಸಮಾಜ ನಿಕೃಷ್ಟವಾಗಿ ನೋಡುತ್ತೆ.ಅವರ ಜೀವನದ ಕಥೆ ಏನು,ಹೊಟ್ಟೆಪಾಡೇನು ಅಂತ ಚಿಂತಿಸುವ ಮಂದಿ ಇಲ್ಲವಾಗಿದ್ದಾರೆ.ಅವರನ್ನು ಗೇಲಿ ಮಾಡುತ್ತಾ ಕಲ್ಲು ಎಸೆಯುವರೇ ಹೆಚ್ಚಿನ ಮಂದಿ ಇದ್ದಾರೆ.ಇಂತಹ ಸಮಾಜದಲ್ಲಿ ಸ್ನಾನವಿಲ್ಲದೆ ಕೊಳಕು ಬಟ್ಟೆಯೊಂದಿಗೆ ತಿರುಗಾಡ್ತಾಯಿದ್ದ ಯುವಕನೊಬ್ಬನನ್ನು ಶಿರ್ವ ಶಂಕರಪುರದ 'ವಿಶ್ವಾಸದ ಮನೆಯ' ಕಾರ್ಯಕರ್ತರು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.
ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ! | ಪ್ರಜಾವಾಣಿ
ದಾರಿಯಲ್ಲಿ ಸಿಕ್ಕಿದ್ದನ್ನು ತಿನ್ನುತ್ತಾ ಅಲೆದಾಡುತ್ತಿದ್ದ ಸುಮಾರು 35ರ ವಯಸ್ಸಿನ ಮಾನಸಿಕ ಅಸ್ವಸ್ಥನನ್ನು ಶಂಕರಪುರ ವಿಶ್ವಾಸದ ಮನೆಯ ಕಾರ್ಯಕರ್ತರು ಬಲು ಸಾಹಸಪಟ್ಟು ಹಿಡಿದು ಪುನರ್ವಸತಿ ಕಲ್ಪಿಸಿದ್ದಾರೆ. ಆತನನ್ನು ಶುಚಿಗೊಳಿಸಿ ಶುಭ್ರ ಬಟ್ಟೆ ತೊಡಿಸಿ ಆಹಾರ ನೀಡಿ ಮಾನಸಿಕ ಚಿಕಿತ್ಸೆಗೆ ಒಳಪಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಓದಿ..
ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ! | ಪ್ರಜಾವಾಣಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ