ಸಮಾರಂಭದ ಉದ್ಘಾಟನೆಯಲ್ಲಿ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿ,ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ,ಕೆಂಕೆರೆ ಬಸವಕೇಂದ್ರದ ಗಂಗಾಧರಯ್ಯ,ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ,ಕಾರ್ಯದರ್ಶಿ ಗಂಗಾಧರಯ್ಯ |
ಹುಳಿಯಾರು ಹೋಬಳಿ ವಿರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವತಿಯಿಂದ ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವಿಶ್ವಗುರು ಶ್ರೀ ಬಸವೇಶ್ವರರ ಜಯಂತ್ಯೋತ್ಸವದ ಸಾನಿಧ್ಯದವಹಿಸಿದ್ದ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಜೀ ಆಶೀರ್ವಚನ ನೀಡಿದರು. |
12ನೇ ಶತಮಾದಲ್ಲಿ ಹಿಂದೂ ಧರ್ಮದಲ್ಲಿ ಹೊಸ ಧರ್ಮಕ್ರಾಂತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ವಚನಗಳ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು ಸಮಾಜದ ಬದಲಾವಣೆಗೆ ಅಗತ್ಯವಾಗಿವೆ. ಬ್ರಾಹ್ಮಣ ಕುಲದಿಂದ ಬಂದ ಬಸವಣ್ಣ ವೀರಶೈವ ಕುಲದ ಆಚಾರವಿಚಾರಗಳನ್ನು ಒಪ್ಪಿ ಅದೇ ದಾರಿಯಲ್ಲಿ ಮುನ್ನೆಡೆಯುತ್ತಾ ನೂರಾರು ಶಿವಶರಣರನ್ನು ಒಗ್ಗೂಡಿಸಿದ್ದಲ್ಲದೆ ಕಾಯಕದ ಮಹತ್ವ ವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟ ಮಹಾನ್ ವ್ಯಕ್ತಿ ಎಂದರು. ವಿರಶೈವ ಎಂದರೆ ಹುಟ್ಟಿನಿಂದಲೇ ವೀರತ್ವವನ್ನು ಹೊಂದಿ ಜನ್ಮತಾಳಿದವನು.ಇಂತಹ ಕುಲದಲ್ಲಿ ಜನಿಸಿದ ನಾವೆಲ್ಲರೂ ಸಂಘಟಿತರಾಗುವ ಮೂಲಕ ಸಮಾಜದಲ್ಲಿ ಏಳ್ಗೆಯನ್ನು ಹೊಂದಬೇಕು ಎಂದರು.ಅಂಗಲಿಂಗ ಶುದ್ದಿಯಿಂದಿದ್ದರೆ ಜೀವನದಲ್ಲಿ ಯಶಸ್ಸುಲಭಿಸುತ್ತದೆ.ಅ ನಿಟ್ಟಿನಲ್ಲಿ ಸದಾಕಾಲ ಕೂಡಲಸಂಗಮನ ನೆನೆಯುವಂತೆ ತಿಳಿಸಿದರು.
ಸಂಜೆ ಅಷ್ಠಮಂಡಲ ಮಂಟಪದಲ್ಲಿ ಬಸವೇಶ್ವರರ ಭಾವಚಿತ್ರದೊಂದಿಗೆ ಪ್ರಾರಂಭವಾದ ಮೆರವಣಿಗೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದಿಂದ ಹಾಲಕ್ಕಿ ಕುಣಿತ, ನಾದಸ್ವರ,ಕಡೂರಿನ ಬಸವಶ್ರೀ ಮಹಿಳಾ ತಂಡದವರಿಂದ ವೀರಗಾಸೆ,ಚಿಕ್ಕನಹಳ್ಳಿ ಶ್ರೀ ವಿರಭದ್ರೇಶ್ವರ ಜಾನಪದ ಕಲಾವಿದರ ಸಂಘದಿಂದ ವೀರಭದ್ರನ ಕುಣಿತ, ಕೆಂಕೆರೆ ಬಸವಕೇಂದ್ರ ಹಾಗೂ ಅಕ್ಕಮಹಾದೇವಿ ಮಹಿಳಾ ಸಂಘದಿಂದ ವಚನ ಗಾಯನ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳಿಂದ ವೈವಿಧ್ಯಮಯ ಪ್ರದರ್ಶನ ಹಾಗೂ ಮದ್ದುಗುಂಡಿನ ಪ್ರದರ್ಶನ ಉತ್ಸವದುದ್ದಕ್ಕೂ ನಡೆದು ನಂತರ ಅನ್ನಸಂತರ್ಪಣೆ ಜರುಗಿತು.
ಮಹಿಳಾ ವೀರಗಾಸೆ ತಂಡ |
ಜಯಂತ್ಯೋತ್ಸವನ್ನು ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ಉದ್ಘಾಟಿಸಿದರು.ಕೆಂಕೆರೆ ಬಸವಕೇಂದ್ರದ ಗಂಗಾಧರಯ್ಯ ಪ್ರಾಸ್ತಾವಿಕ ನುಡಿ ನುಡಿದರು. ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ಅಧ್ಯಕ್ಷತೆವಹಿಸಿದ್ದು, ಕಾರ್ಯದರ್ಶಿ ಗಂಗಾಧರಯ್ಯ,ಜಿಲ್ಲಾ ಎಪಿಎಂಸಿ ಉಪಾಧ್ಯಕ್ಷ ಶಿವಕುಮಾರ್,ಪತ್ರಿಕಾ ಸಂಪಾದಕ ಸತೀಶ್ ಉಪಸ್ಥಿತರಿದ್ದ ಧಾರ್ಮಿಕ ಸಮಾರಂಭವನ್ನು ಡಿ.ರಮೇಶ್ ನಿರೂಪಿಸಿ, ಉಮೇಶ್ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ