ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಾದ 1)ಬಿ.ಎಸ್.ಚಂದನ್ 2) ಸತೀಶ್ ಕೆ.ಆರ್ 3)ಪ್ರಸನ್ನ 4) ಹರೀಶ್.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ73.5%^ ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಒಟ್ಟು 188 ವಿದ್ಯಾರ್ಥಿಗಳು ಹಾಜರಾಗಿದ್ದು 138 ಮಂದಿ ತೇರ್ಗಡೆಯಾಗಿದ್ದಾರೆ. 4 ಮಂದಿ ಅತ್ಯುತ್ತಮ ಶ್ರೇಣಿ, 75 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ , 36 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 23 ವಿದ್ಯಾರ್ಥಿಗಳು ತೃತೀಯ ಸ್ಥಾನ ಹೊಂದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಚಂದನ್ 554 ಅಂಕ ತೆಗೆಯುವ ಮೂಲಕ 92.33% ಗಳಿಸಿದರೆ, ಕಲಾವಿಭಾಗದಲ್ಲಿ ಸತೀಶ್ ಕೆ.ಆರ್. 533 ಅಂಕದ ಮೂಲಕ ಶೇ 88,83 ಪ್ರಸನ್ನ 528 ಅಂಕದ ಮೂಲಕ ಶೇ.88 ಹಾಗೂ ಹರೀಶ್ 522 ಅಂಕದ ಮೂಲಕ ಶೇ.87 ಗಳಿಸಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ನಟರಾಜು,ಶಿಕ್ಷಕ ವರ್ಗ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ