ಹುಳಿಯಾರು ಹೋಬಳಿ ವಿರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವರು ವಿಶ್ವಗುರು ಶ್ರೀ ಬಸವೇಶ್ವರರ ಜಯಂತೊತ್ಸವವನ್ನು ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಾಳೆ(ತಾ.27) ಸೋಮವಾರ ಮಧ್ಯಾಹ್ನ ಹಮ್ಮಿಕೊಂಡಿದ್ದಾರೆ.
ಕುಪ್ಪೂರು ಗದ್ದಿಗೆ ಸಂಸ್ಥಾನದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಜಯಂತೋತ್ಸವದ ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ವಹಿಸಲಿದ್ದು, ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್,ಜೆ.ಸಿ.ಮಾಧುಸ್ವಾಮಿ,ವಿರಶೈವ ಸಮಾಜದ ಕಾರ್ಯದರ್ಶಿ ಗಂಗಾಧರಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ಅನುಭಾವ ನೀವೇದನೆ ನಡೆಸಿಕೊಡುವರು. ಜಯಂತೊತ್ಸವದ ಅಂಗವಾಗಿ ಇದೇ ದಿನ ಸಂಜೆ ಬಸವೇಶ್ವರ ಅಷ್ಠಮಂಡಲೋತ್ಸವ ನಡೆಯಲಿದ್ದು,ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದ ಹಾಲಕ್ಕಿ ಕುಣಿತ,ನಾದಸ್ವರ,ಕಡೂರಿನ ಬಸವಶ್ರೀ ಮಹಿಳಾ ತಂಡದವರಿಂದ ವೀರಗಾಸೆ,ಚಿಕ್ಕನಹಳ್ಳಿ ಶ್ರೀ ವಿರಭದ್ರೇಶ್ವರ ಜಾನಪದ ಕಲಾವಿದರ ಸಂಘದಿಂದ ವೀರಭದ್ರನ ಕುಣಿತ,ಕೆಂಕೆರೆ ಬಸವಕೇಂದ್ರ ಹಾಗೂ ಅಕ್ಕಮಹಾದೇವಿ ಮಹಿಳಾ ಸಂಘದಿಂದ ವಚನ ಗಾಯನ ಸೆರಿದಂತೆ ವಿವಿಧ ಜಾನಪದ ಕಲಾತಂಡಗಳಿಂದ ವೆವಿಧ್ಯಮಯ ಕಾರ್ಯಕ್ರಮಗಳು, ಅಮೋಘ ಮದ್ದುಗುಂಡಿನ ಪ್ರದರ್ಶನ ಉತ್ಸವದುದ್ದಕ್ಕೂ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ಜರುಗಲಿದೆ. ಈ ಜಯಂತೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿರಶೈವ ಸಮಾಜದವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ