ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ 12 ಮಂದಿಯನ್ನು ಬಂಧಿಸಿ,ಪಣಕಿಟ್ಟಿದ್ದ 9110ರೂ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ಸಮೀಪದ ಲಿಂಗಪ್ಪನಪಾಳ್ಯದಲ್ಲಿನ ಅಂಗನವಾಡಿ ಕಟ್ಟಡದ ಹಿಂಭಾಗದ ಅರಳಿಮರದ ಕಟ್ಟೆಯ ಮೇಲೆ ಜೂಜಾಟದಲ್ಲಿ ತೊಡಗಿದ್ದವರನ್ನು ಖಚಿತ ಮಾಹಿತಿ ಮೇರೆಗೆ ಪಿಎಸೈ ಅಂಜನಪ್ಪ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದುರ್ಗಮ್ಮನ ಕಳಸ:ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ಕಳಸ ಸ್ಥಾಪನೆ ಕಾರ್ಯಕ್ರಮ ಹುಳಿಯಾರಮ್ಮ,ಕೆಂಚಮ್ಮ, ಗೌಡಗೆರೆ ದುರ್ಗಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ,ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ,ಹೊಸಹಳ್ಳಿಯ ಅಂತರಘಟ್ಟಮ್ಮ ದೇವಿಯವರ ಸಮ್ಮುಖದಲ್ಲಿ ಗುರುವಾರ ಬೆಳಗಿನ ಜಾವ ಹಮ್ಮಿಕೊಳ್ಳಲಾಗಿದೆ.ರಾತ್ರಿ 8ಘಂಟೆಗೆ ದೇವಾಲಯದ ಆವರಣದಲ್ಲಿ ಉಯ್ಯಾಲೋತ್ಸವ, 9ಘಂಟೆಗೆ ಗಾನವಿಶಾರದ ಆರ್ಕೇಸ್ಟ್ರ ದವರಿಂದ ರಸಮಂಜರಿ ಕಾರ್ಯಕ್ರಮ ಇದ್ದು ಭಕ್ತಾಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ