ಚಿಕ್ಕನಾಯಕನಹಳ್ಳಿ ಭಾಗಕ್ಕೆ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸುವ ದೃಷ್ಠಿಯಿಂದ ಈ ಭಾಗಕ್ಕೆ 102ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಿ,ಶಂಕುಸ್ಥಾಪನೆಯನ್ನು ನೆರವೇರಿಸಿ,ಕಾಮಗಾರಿಗೆ ಚಾಲನೆಗೊಂಡಿರುವುದು ಬಿಜೆಪಿ ಸರ್ಕಾರದ ಸಾಧನೆಯೇ ಹೊರತು,ತಾನು ಹೇಮಾವತಿ ಹರಿಕಾರ,ಅದು ತನ್ನಿಂದಾಯಿತೆಂದು ಯಡೆಯೂರಪ್ಪನವರು ಹೇಳಿಕೊಳ್ಳುತ್ತಿರುವುದು ತಪ್ಪು ಎಂದು ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹರಿಹಾಯ್ದರು.
ಹುಳಿಯಾರಿನ ಎಪಿಎಂಸಿ ಸಮೀಪದ ಮೈದಾನದಲ್ಲಿ ಮಂಗಳವಾರದಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾಗವಹಿಸಿದ್ದ ಬಿಜೆಪಿ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಚಿ.ನಾ.ಹಳ್ಳಿ ಭಾಗಕ್ಕೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ನನ್ನಿ ಇಚ್ಚಾಶಕ್ತಿ ಹಾಘು ಅವಿರತ ಪ್ರಯತ್ನದ ಫಲವಾಗಿ ಮೊದಲು ಕೆ.ಎಸ್.ಈಶ್ವರಪ್ಪ ಸರ್ವೆಕಾರ್ಯಕ್ಕೆ ಹಣ ಬಿಡುಗಡೆ ಮಾಡಿಸಿದರೆ ನಂತರ ಬಸವರಾಜ ಬೊಮ್ಮಾಯಿಯವರು ಸರ್ವೆ ಹಾಗೂ ತಾಂತ್ರಿಕ ಕಾರ್ಯಗಳನ್ನು ಕೈಗೊಂಡು ತಾಲ್ಲೂಕಿನ 26 ಕೆರೆಗಳಿಗೆ ಹೇಮೆ ನೀರು ಹರಿಸಬಹುದಾಗಿದೆ ಎಂದು 102 ಕೋಟಿ ರೂಗಳ ಕಾರ್ಯಕ್ಕೆ ಒಪ್ಪಿಗೆ ಸೂಚಿಸುತ್ತಿದ್ದಂತೆ ಹಣ ಬಿಡುಗಡೆ ಮಾಡಿದ್ದಲ್ಲದೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ಬೃಹತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದು ಈಗಾಗಲೆ ಕಾಮಗಾರಿ ಚಾಲನೆಗೊಂಡಿದೆ.ಇದನ್ನು ಕಂಡ ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಾನು ಹೇಮಾವತಿ ನೀರು ಹರಿಸುವ ಯೋಜನೆ ಮಂಜೂರು ಮಾಡಿಸಿದ್ದು ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಅಪಪ್ರಚಾರ: ಕಿರಣ್ ಕುಮಾರ್ ಬಿಜೆಪಿಯನ್ನು ತೊರೆದು ಕೆಜೆಪಿ ಸೇರಿ ಗುಬ್ಬಿ ತಾಲ್ಲೂಕಿನಿಂದ ಸ್ಪರ್ಧಿಸುತ್ತಾರೆಂದು ತಮ್ಮ ಮೇಲೆ ಅನೇಕ ಸುಳ್ಳುವದಂತಿಗಳನ್ನು ಸೃಷ್ಠಿಸುವ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಠಿಸುತ್ತಾ, ಮತದಾರರ ಮನವೊಲಿಸಲು ಕೆಜೆಪಿ ಪಕ್ಷದ ಮುಖಂಡರು ಮುಂದಾಗಿದ್ದರು.ಇದಕ್ಕೆಲ್ಲಾ ಪ್ರತ್ಯುತ್ತರವಾಗಿ ತಾವು ಬೆಜೆಪಿಯಿಂದಲ್ಲೇ ಸ್ಪರ್ಧಿಸಿದ್ದು ತಮ್ಮೊಂದಿಗೆ ಕ್ಷೇತ್ರದ ಮತದಾರರಿದ್ದಾರೆಂದರು.
ಚಿ.ನಾ.ಹಳ್ಳಿ ಕ್ಷೇತ್ರದ ಹಾಲಿ ಶಾಸಕರು ತಾವು ನಡೆಸಬೇಕಿದ್ದ ಬಗರ್ ಹುಕುಂ,ಕೆಜಿಡಿ ಸಭೆಯನ್ನಾಗಲಿ ಸಮರ್ಪಕವಾಗಿ ನಡೆಸದೆ,ಜನತೆಯ ಸಮಸ್ಯೆಗಳನ್ನು ಆಲಿಸದೆ ಕ್ಷೇತ್ರದ ಅಭಿವೃದ್ದಿಯನ್ನು ಬದಿಗೊತ್ತಿ ಸದಾಕಾಲ ಬೆಂಗಳೂರಿಗೆ ಪ್ರಯಾಣ ಬೆಳೆಸಿ,ಅಲ್ಲಿಂದಲ್ಲೆ ಕ್ಷೇತ್ರದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಾ ತಾಲೂಕಿಗೆ ರಾಜ್ಯದ ಬಿಜೆಪಿ ಸರ್ಕಾರ ಯಾವುದೇ ಅನುದಾನಗಳನ್ನು ನೀಡಿಲ್ಲ ಎಂದು ಪೊಳ್ಳು ಮಾತುಗಳನ್ನಾಡುತ್ತಿದ್ದಾರೆ.ಆದರೆ ಕ್ಷೇತ್ರದ ಅಭಿವೃದ್ದಿಗಾಗಿ 300 ಕೋಟಿಯಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು,ಬಿಜೆಪಿ ಸರ್ಕಾರ ಯಾವುದೇ ರೀತಿಯ ತಾರತಮ್ಯತೆಯನ್ನು ತೊರಿಲ್ಲವೆಂಬುದನ್ನು ಶಾಸಕರು ಮರೆಯುವಂತಿಲ್ಲ ಎಂದು ತಿಳಿಸಿದರು.
ಹುಳಿಯಾರಿನಲ್ಲಿ ನಡೆದ ಬಿಜೆಪಿ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿದರು. |
ಕ್ಷೇತ್ರದ ಮತ್ತೊಬ್ಬ ಮಾಜಿ ಶಾಸಕ ತಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ,ಚಿ.ನಾ.ಹಳ್ಳಿ ತಾಲ್ಲೂಕಿಗೆ ಹೆಮಾವತಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದವರು,ಇಂದು ಈ ಭಾಗಕ್ಕೆ ಹೇವಾವತಿ ನೀರು ಹರಿಯುವ ಕಾರ್ಯಕ್ಕೆ ಚಾಲನೆಗೊಂಡಿರುವುದನ್ನು ಕಂಡು ಈ ಕಾರ್ಯವನ್ನು ಸ್ಥಗಿತಗೊಳಿಸಲು ಕೆಲ ವಾಮ ಮಾರ್ಗಗಳ ಅನುಸರಿಸಿ ಚಾಲನೆಗೊಂಡಿರುವ ಕಾಮಗಾರಿ ಕೆಲಸವನ್ನು ಸ್ಥಗಿತಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ,ಇವರುಗಳ ಪೊಳ್ಳು ಬೆದರಿಕೆಗೆ ತಾವು ಮಣಿಯುವುದಿಲ್ಲ ಎಂದು ಗುಡುಗಿದರು.
ಒಟ್ಟಾರೆ ಕೆಜೆಪಿಯ ಅಪಪ್ರಚಾರ,ಜೆಡಿಎಸ್ ನ ಆಸೆ ಅಮಿಷಗಳಿಗೆ ಮತದಾರರು ಬಲಿಯಾಗದೆ ತತ್ವಸಿದ್ದಾಂತಕ್ಕೆ ಬದ್ಧವಾಗಿರುವ ಬಿಜೆಪಿ ಬೆಂಬಲಿಸುವಂತೆ ಕೋರಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ