ಶಂಕರ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಆದಿ ಶಂಕರ ಸುಮಾರು ೮ ನೇ ಶತಮಾನದಲ್ಲಿ ಜೀವನ ನಡೆಸಿದರು ಎಂದು ಹೇಳುತ್ತಾರೆ. ಇವರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದ್ದು ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಸಹ ಇವರು ಮಾಡಿರುವ ಸಾಧನೆ ಅಪಾರ.
.ಆದಿಶಂಕರರು ಭಗವದ್-ಗೀತೆ,ಉಪನಿಶತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಅಚಾರ್ಯರಾದರು.. ಅದ್ವೈತ ಅನುಯಾಯಿಗಳಿಗೆ ಇವರೇ ಆದಿ ಗುರುಗಳು. ಶೈವ,ವೈಷ್ಣವ,ಶಾಕ್ತ,ಗಾಣಪತ್ಯ,ಸೌರ ಹಾಗು ಸ್ಕಾಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಶಂಕರರು ಬಾದರಾಯಣರ "ಬ್ರಹ್ಮಸೂತ್ರ" (ವೇದಾಂತಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಇವರು ರಚಿಸಿದ "ಭಜ ಗೋವಿಂದಮ್" ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು. ಹಲವಾರು ಇತರ ಸ್ತೋತ್ರಗಳನ್ನೂ ಸಹ ಶಂಕರರು ರಚಿಸಿದ್ದಾರೆ.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಶಂಕರಾಚಾರ್ಯರು ಜೀವಿತದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಹಿಂದೂ ಧರ್ಮದ ಪ್ರಚಾರಕ್ಕಾಗಿ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು
ಉತ್ತರದಲ್ಲಿ: ಬದರಿ ಪೀಠ - ಉತ್ತರಾಮ್ನಾಯ ಜ್ಯೋತಿರ್ ಮಠ
ದಕ್ಷಿಣದಲ್ಲಿ: ಶೃಂಗೇರಿ ಪೀಠ - ದಕ್ಷಿಣಾಮ್ನಾಯ ಶಾರದಾ ಮಠ
ಪೂರ್ವದಲ್ಲಿ: ಪುರಿ ಪೀಠ - ಪೂರ್ವಾಮ್ನಾಯ ಗೋವರ್ಧನ ಮಠ
ಪಶ್ಚಿಮದಲ್ಲಿ ದ್ವಾರಕಾ ಪೀಠ - ಪಶ್ಚಿಮಾಮ್ನಾಯ ಮಠ
ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.
ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಶಂಕರಾಚಾರ್ಯರ ಜನ್ಮ ದಿನವನ್ನು ಇಂದು ಎಲ್ಲಡೆ ಆಚರಿಸಾಲಾಗಿದ್ದು ಇವರ ಕುರಿತಂತೆ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಶ್ರೀನಿವಾಸ ಶರ್ಮ ಅವರ ಸಾಂದರ್ಭಿಕ ಲೇಖನ ಪ್ರಕತವಾಗಿದ್ದು ಅದರ ಸಂಕ್ಷಿಪ್ತ ಸಾರ ಇಲ್ಲಿದೆ.
ಅದೇ ರಿತಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸದ್ಗುರು ಅವರ ಕಾಲಂನಲ್ಲಿ ಸಾಂದರ್ಭಿಕ ಲೇಖನ ಪ್ರಕತವಾಗಿದ್ದು ಅದರ ಸಂಕ್ಷಿಪ್ತ ಸಾರ ಇಲ್ಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ