ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕ ಶಂಕರಭಗವತ್ಪಾದರ ಜಯಂತಿಯನ್ನು ಹುಳಿಯಾರಿನ ವಿಪ್ರಸಮಾಜದಿಂದ ಬುಧವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಂಕರರ ಭಾವಚಿತ್ರಕ್ಕೆ ಅಭಿಷೇಕ ಸಮೇತ ವಿಶೇಷ ಪೂಜೆ ಸಲ್ಲಿಸಲಾಯಿತು.ವಿಪ್ರಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ,ಆನಂದಸಿಂಧು,ರಾಮ ಭುಜಂಘಾಪ್ರಯಾತ,ಹರಿಸ್ತುತಿ ಹಾಗೂ ಶಿವಾನಂದಲಹರಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು.ಶಂಕರಭಜನೆ,ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಸೀತಾರಾಮ ಪ್ರತಿಷ್ಠಾನದ ಅಧ್ಯಕ್ಷ ನರೇಂದ್ರಬಾಬು.ಉಪಾಧ್ಯಕ್ಷ ಎಮ್.ಎ.ಲೋಕೇಶಣ್ಣ,ಕಾರ್ಯದರ್ಶಿ ವಿಶ್ವನಾಥ್,ರಂಗನಾಥ್ ಪ್ರಸಾದ್,ಅರ್ಚಕರಾದ ಗುಂಡಣ್ಣ, ಸತ್ಯನಾರಾಯಣ,ನಾಗರಾಜ್ ಮಾಸ್ಟರ್ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ