ಪ್ರಸ್ತುತ ಸಮಾಜದಲ್ಲಿ ಎಲ್ಲಾ ಸಮುದಾಯದವರು ಸಂಘಟಿತರಾಗುವ ಮೂಲಕ ತಮ್ಮ ತಮ್ಮ ಸಮುದಾಯಗಳನ್ನು ಅಭಿವೃದ್ದಿಯತ್ತ ಕೊಂಡುಯ್ಯುತ್ತಿರುವ ಹಿನ್ನಲೆಯಲ್ಲಿ ವೀರಶೈವ ಸಮುದಾಯದ ನಾವುಗಳು ಮನೆಯಲ್ಲಿ ಕೂರದೆ ಸಂಘಟನೆಯಲ್ಲಿ ತೊಡಗಿ, ಸಮಾಜದ ಮುಖ್ಯವಾಹಿನಿಯಲ್ಲಿ ನಮ್ಮದೇ ಆದ ಹೆಚ್ಚಿನ ಛಾಪು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಕೆಂಕೆರೆ ಬಸವಕೇಂದ್ರದ ಕೆ.ಎಂ.ಗಂಗಾಧರಯ್ಯ ಕರೆ ನೀಡಿದರು.
ಹುಳಿಯಾರು ಹೋಬಳಿ ವಿರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವತಿಯಿಂದ ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವಿಶ್ವಗುರು ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಕೆಂಕೆರೆ ಬಸವಕೇಂದ್ರದ ಕೆ.ಎಂ.ಗಂಗಾಧರಯ್ಯನವರಿಂದ ವಿಶೇಷ ಉಪನ್ಯಾಸ |
ವೀರಶೈವ ಸಮುದಾಯದ ಜನ ಇಂದಿನ ಆಧುನಿಕ ಸಮಾಜದಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹೆಚ್ಚಾಗಿ ಪಾಲ್ಗೊಳ್ಳದೇ ಹಿಂದೇಟಾಕುತ್ತಾ, ಇತರರಿಗೆ ವೀರಶೈವರಲ್ಲಿ ಒಗ್ಗಟ್ಟಿಲ್ಲವೇನೂ ಎನ್ನುವಂತೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದರು. ಸಂಘಟಿತ ಮನೋಭಾವದ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಾಕಷ್ಟು ಜನರನ್ನು ಸಂಘಟಿಸಿ ಪ್ರಬುದ್ದಮಾನವಾಗಿ ಬೆಳೆದ ಮಹಾನ್ ವ್ಯಕ್ತಿ, ನಮ್ಮೆಲ್ಲರ ನಾಯಕನಾಗಿರುವಾಗಿ ಅವರ ಚಿಂತನೆ,ವಚನಗಳ ಸಾರವನ್ನು ಅರಿತು ಸಂಘಟಿತರಾಗಿ ಬಾಳಬೇಕಿದೆ ಎಂದರು.
ಲಿಂಗಧಾರಣೆ ಸಮಯದಲ್ಲಿ ಲಿಂಗದೀಕ್ಷೆ ಪಡೆದ ನಾವು ಬೆಳೆಯುತ್ತಾ ಇಷ್ಟಲಿಂಗವನ್ನೆ ತ್ಯಜಿಸಿ, ನಮ್ಮ ಸಮುದಾಯಕ್ಕೆ ಆಗೌರವ ಸೂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಸವಣ್ಣ ಹಣ,ಐಶ್ವರ್ಯವನ್ನು ಕೇಳಿದವವನಲ್ಲ, ಆತ ಕೇಳುವುದು ಒಂದೇ ಅದು ಕಾಯಕ ಮಾಡುತ್ತಾ ಕೂಡಲಸಂಗಮ ದೇವನನ್ನು ಕಾಣವುದು. ಹನ್ನೆರಡನೇ ಶತಮಾನದಲ್ಲಿ ತಾಂಡವಾಡುತ್ತಿದ್ದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಮೂಢನಂಬಿಕೆಗಳನ್ನು ಸಮಾಜದಿಂದ ಕಿತ್ತೊಗೆಯುವ ಕೃಷಿ ಮಾಡುತ್ತಾ, ಎಲ್ಲಾ ಕುಲದವರು ಸಮಾನರು ಸಮಾಜದಲ್ಲಿ ಇರುವುದು ಎರಡೇ ಜಾತಿ ಅದು ಹೆಣ್ಣು-ಗಂಡು ಎಂದು ತಿಳಿಸಿದ ಬಸವಣ್ಣ ಸರ್ವಧರ್ಮ ಸಹಿಷ್ಣುವಾಗಿ,ಶಿವಶರಣರನ್ನೊ ಒಗ್ಗೂಡಿಸಿ ಅನುಭವ ಮಂಟಪದ ಸ್ಥಾಪನೆ ಮಾಡಿ ಜ್ಞಾನ ದಾಸೋಹ ಮಾಡುತ್ತಾ,ಕಾಯಕದ ಮೂಲಕ ಕೈಲಾಸವನ್ನು ಕಾಣುವ ಮಾರ್ಗವನ್ನು ತೋರಿಸಿದ ಕಾಯಕಯೋಗಿಯ ಸಂದೇಶಗಳು ಇಂದಿನ ಸಮಾಜದಲ್ಲಿ ಅಚ್ಚಳಿಯದೇ ಉಳಿದಿರುವುದು ವೀರಶೈವ ಕುಲದ ಹೆಮ್ಮೆಯೇ ಆಗಿದೆ ಎಂದರು.
ಕುಪ್ಪೂರು ಗದ್ದಿಗೆ ಸಂಸ್ಥಾನದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಜೀಯವರ ಸಾನಿಧ್ಯದಲ್ಲಿ ನಡೆದ ಶ್ರೀ ಬಸವೇಶ್ವರರ ಜಯಂತ್ಯೋತ್ಸವದ ಉದ್ಘಾಟನೆಯನ್ನು ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ನೆರವೇರಿಸಿದರು.ಜಿಲ್ಲಾ ಎಪಿಎಂಸಿ ಉಪಾಧ್ಯಕ್ಷ ಶಿವಕುಮಾರ್,ಪತ್ರಿಕಾ ಸಂಪಾದಕ ಸತೀಶ್, ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ, ಕಾರ್ಯದರ್ಶಿ ಗಂಗಾಧರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಯವರಿಗೆ ಸನ್ಮಾನ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ