ಚಿ.ನಾ.ಹಳ್ಳಿ ವಿಧಾನಸಭಾ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆದಿದ್ದು, ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಟ್ಟು ಶೇ.81.16ರಷ್ಟು ಹಾಗೂ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಬಿಂಬಿತವಾಗಿರುವ ಹುಳಿಯಾರಿನಲ್ಲಿ ಒಟ್ಟು ಶೇ.75.36 ರಷ್ಟು ಮತದಾನವಾಗಿದೆ. ಹುಳಿಯಾರು ಪಟ್ಟಣದಲ್ಲಿ ಒಟ್ಟು 13 ಮತಗಟ್ಟೆಗಳನ್ನು ಎಂಪಿಎಸ್ ಶಾಲೆಯಲ್ಲಿ 9 ಮತಕೇಂದ್ರಗಳನ್ನು,ಉರ್ದು ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು,ಸೋಮಜ್ಜನ ಪಾಳ್ಯ ಹಾಗೂ ಹುಳಿಯಾರು-ಕೆಂಕೆರೆ ಪ್ರೌಢಶಾಲೆಯಲ್ಲಿ ತಲಾ ಒಂದೊಂದು ಮತಗಟ್ಟೆಳನ್ನು ಸ್ಥಾಪಿಸಲಾಗಿತ್ತು.
ಬೆಳಗಿನ ತಂಪಿನ ವಾತಾವರಣದಲ್ಲಿ ಚುರುಕಾಗಿದ್ದ ಮತದಾನ ಬಿಸಿಲೇರಿಕೆ ನಂತರ ಸ್ವಲ್ಪ ಕುಗ್ಗಿದರೂ ಸಹ ಮಧಾಹ್ನದ ನಂತರ ಬಂದ ತುಂತುರು ಸೊನೆ ಮಳೆಯ ತಂಪಿನಿಂದಾಗಿ ಮತ್ತೆ ಮತದಾರರು ಮತಗಟ್ಟೆಗಳಿಗೆ ದಾವಿಸಲಾರಂಭಿಸುವ ಮೂಲಕ ಮತ್ತೆ ಚುರುಕುಗೊಂಡ ಮತದಾನ ನಡೆಯಿತು.
ಹುಳಿಯಾರಿನ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ ಪುರುಷ ಹಾಗೂ ಮಹಿಳೆಯರ ವಿವರ:
ಮತಗಟ್ಟೆ 1 : ಪುರುಷರು 185, ಮಳೆಯರು 176 ಒಟ್ಟು 361 ಶೇ.68.76
ಮತಗಟ್ಟೆ 2: ಪುರುಷರು 241, ಮಳೆಯರು 198 ಒಟ್ಟು 439 ಶೇ. 68.27
ಮತಗಟ್ಟೆ 3 :ಪುರುಷರು 264, ಮಳೆಯರು 245 ಒಟ್ಟು 509 ಶೇ. 71.29
ಮತಗಟ್ಟೆ 4 : ಪುರುಷರು 172, ಮಳೆಯರು 190 ಒಟ್ಟು 362 ಶೇ. 75.89
ಮತಗಟ್ಟೆ 5: ಪುರುಷರು 406, ಮಳೆಯರು 408 ಒಟ್ಟು 814 ಶೇ.71.65
ಮತಗಟ್ಟೆ 6: ಪುರುಷರು 226, ಮಳೆಯರು 236 ಒಟ್ಟು 462 ಶೇ.69.79
ಮತಗಟ್ಟೆ 7: ಪುರುಷರು 266, ಮಳೆಯರು 270 ಒಟ್ಟು 536 ಶೇ.82.21
ಮತಗಟ್ಟೆ 8: ಪುರುಷರು 310, ಮಳೆಯರು 332ಒಟ್ಟು 642 ಶೇ.73.62
ಮತಗಟ್ಟೆ 9: ಪುರುಷರು 437, ಮಳೆಯರು 402 ಒಟ್ಟು 839 ಶೇ. 75.93
ಮತಗಟ್ಟೆ 10: ಪುರುಷರು 271, ಮಳೆಯರು 286 ಒಟ್ಟು 557 ಶೇ.73.87
ಮತಗಟ್ಟೆ 11 : ಪುರುಷರು 233, ಮಳೆಯರು 269 ಒಟ್ಟು 502 ಶೇ. 78.68
ಮತಗಟ್ಟೆ 12: ಪುರುಷರು 344, ಮಳೆಯರು 311 ಒಟ್ಟು 655 ಶೇ.88.16
ಮತಗಟ್ಟೆ 13: ಪುರುಷರು 498, ಮಳೆಯರು 451 ಒಟ್ಟು 949 ಶೇ.81.67
ಹೋಬಳಿ ವ್ಯಾಪ್ತಿಯ ಹುಳಿಯಾರು,ಕೆಂಕೆರೆ,ಯಳನಡು, ಕೋರಗೆರೆ,ತಿರುಮಲಾಪುರ,ದೊಡ್ಡಬಿದರೆ, ಬರಕನಹಾಲ್,ದಸೂಡಿ,ಹೊಯ್ಸಲಕಟ್ಟೆ,ಗಾಣಧಾಳು ಗ್ರಾ.ಪಂ.ಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಕೆಂಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಶೇ.82.22ರಷ್ಟು ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಹುಳಿಯಾರಿನ 35ನೇ ಮತಗಟ್ಟೆಯಲ್ಲಿ ಮತಚಲಾಯಿಸಿದರೆ,ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ ಕೆಂಕೆರೆಯ ಮತಗಟ್ಟೆಯ ಮತ ಕೇಂದ್ರದಲ್ಲಿ ಮತಚಲಾಯಿಸಿದರು.ಕೆಂಕೆರೆ ಮತಗಟ್ಟೆಯಲ್ಲಿ ತಾ.ಪಂ.ಸದಸ್ಯ ನವೀನ್,ಗಂಗಣ್ಣ,ಮಂಜುನಾಥ್ ಮೊದಲು ಮತಚಲಾಯಿಸಿದ್ದಾರೆ. ಅಭ್ಯರ್ಥಿಗಳ ಬೆಂಬಲಿಗರ ಪ್ರಚಾರ ಕಾವು ಸಂಜೆವರೆಗೂ ಮುಂದುವದಿತ್ತು.ಕಣದಲ್ಲಿರುವ 11 ಅಭ್ಯರ್ಥಿಗಳ ಹಣೆಬರಹ ಭಾನುವಾರ ನಿರ್ಧಾರವಾಗಿದ್ದು, ಮತದಾರರ ಒಲವು ಯಾರಿಗೆ ವ್ಯಕ್ತವಾಗಿದೆ,ಮತಾಧೀಶನ ನಿಲುವೇನೆಂದು ಅರಿಯಲು,ಫಲಿತಾಂಶಕ್ಕಾಗಿ ಕಾಯಬೇಕಿದ್ದು,ಇನ್ನೆರಡು ದಿನದಲ್ಲಿ ಫಲಿತಾಂಶ ಹೊರಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ