ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುಮಕೂರು ಜಿಲ್ಲಾ ಆರ್.ಪಿ.ಚೆಸ್ಟ್ ಕ್ಲಿನಿಕ್ ಅವರ ಸಂಯುಕ್ತಾಶ್ರಯದಲ್ಲಿ ಇಂದು ಭಾನುವಾರ ಬೆಳಿಗ್ಗೆ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಪಲ್ಮನೋಲಾಜಿಸ್ಟ್ ತಜ್ಞ ಡಾ||ರವಿಕುಮಾರ್,ಆಡಳಿತ ವೈದ್ಯಾಧಿಕಾರಿ ಡಾ||ಮಂಜುನಾಥ್, ಡಾ|| ಷಣ್ಮುಗ, ಡಾ||ಸದಾಶಿವಯ್ಯ,ಅರವಳಿಕೆ ವೈದ್ಯೆ ಡಾ||ಚಂದನ ಭಾಗವಹಿಸಲಿದ್ದು,ಉಚಿತವಾಗಿ ಅಸ್ತಮಾ, ಎದೆರೋಗ, ನಿದ್ರಾರೋಗ, ಟಿ.ಬಿ.ನ್ಯೋಮೋನಿಯಾ,ಎದೆಯ ಕ್ಯಾನ್ಸರ್,ಏಡ್ಸ್,ಅಲರ್ಜಿ,ಸೀನು, ಇತರೆ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ಕ್ರಮಗಳನ್ನು ನೀಡಲಿದ್ದು, ಹುಳಿಯಾರು ಹಾಗೂ ಸುತ್ತಮುತ್ತಲಿನ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು ಇದರ ಉಪಯೋಗ ಪಡೆಯುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9449605557,9448342916 ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ