ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಪುನ: ಗೆಲ್ಲುವುದಿಲ್ಲ ಎಂಬ ಮೌಡ್ಯತೆಯನ್ನು ಹುಸಿಗೊಳಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು 60,759 ಮತಗಳನ್ನು ಪಡೆದು ಸತತ ಎರಡನೇ ಬಾರಿ ವಿಜಯಯ ಮಾಲೆ ಧರಿಸಿ.ಮರು ಆಯ್ಕೆಯಾಗಿ ಕ್ಷೇತ್ರದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಈ ಬಾರಿಯ ಚಿ.ನಾ.ಹಳ್ಳಿ ಕ್ಷೇತ್ರದ ಮತ ಎಣಿಕೆಯಲ್ಲಿ ಕೆಜೆಪಿ,ಜೆಡಿಎಸ್,ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದ್ದು ಮೊದಲ ಹಂತದ ಮತಎಣಿಕೆ ಸಂಧರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಮಾಧುಸ್ವಾಮಿ ಅವರು ಮುಂದಿರುವುದು ಕಂಡು ಬಂದಿದ್ದು, ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳ ತೀವ್ರ ಪೈಪೂಟಿಯ ನಡುವೆಯೂ ನಂತರದ ಸುತ್ತುಗಳಲ್ಲಿ ಜೆಡಿಎಸ್ ಅಂತರವನ್ನು ಕಾಯ್ದುಕೊಂಡು ಕೆಜೆಪಿಯ ಮಾಧುಸ್ವಾಮಿಯವರಿಗಿಂತ 11,139 ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಜಯಶೀಲರಾಗಿದ್ದು ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.
ಕಳೆದ ಬಾರಿ 67046 ಮತಗಳನ್ನು ಪಡೆದು 29044 ಮತಗಳ ಅಂತರದಲ್ಲಿ ಚುನಾಯಿತರಾಗಿದ್ದ ಸಿಬಿಎಸ್, ಈ ಬಾರಿ ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳ ತೀವ್ರ ಪೈಪೂಟಿಯ ನಡುವೆಯೂ 11,139 ಮತಗಳ ಅಂತರದಲ್ಲಿ ಜಯಗಳಿಸಿದ್ದು ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಥಿಸಿದ್ದ ಮಾಧುಸ್ವಾಮಿ ಮೂರನೇ ಸ್ಥಾನ ಪಡೆದಿದ್ದರು.ಆದರೆ ಈ ಬಾರಿ ಜೆಡಿಯು ತೊರೆದು ಯಡಿಯೂರಪ್ಪನವರೊಂದಿಗೆ ಸೇರಿ ನೂತನ ಕೆಜೆಪಿಯಿಂದ ಕಣಕಿಳಿದಿದ್ದು 49,620 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ 38,002 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಕೆ.ಎಸ್.ಕಿರಣ್ ಕುಮಾರ್ ಈ ಬಾರಿ 29,150 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಸಾಸಲು ಸತೀಶ್ 10,344 ಮತಗಳನ್ನು ಪಡೆದು ನಾಲ್ಕನೇ ಸ್ಥಾನವನ್ನು ಹಾಗೂ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ 2086 ಪಡೆದಿದ್ದು,ಇತರೆ ಅಭ್ಯರ್ಥಿಗಳು 8082 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,60,041ರಷ್ಟು ಮತದಾನವಾಗಿದೆ.
ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕರಾಗಿದ್ದ ಸಿ.ಬಿ.ಸುರೇಶ್ ಬಾಬು ಮತ್ತೆ ಮರು ಆಯ್ಕೆ ಬಯಸಿ ಈ ಬಾರಿ ಕಣದಲಿದ್ದರು. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯ ಮಾಡಿಲ್ಲ,ಗೆದ್ದ ಮೇಲೆ ಜನರ ಕೈಗೆ ಸಿಗದಂತೆ ಬೆಂಗಳೂರಲ್ಲಿ ಕುಳಿತು ಆಡಳಿತ ನಡೆಸುತ್ತಾರೆಂಬ ಪ್ರತಿ ಪಕ್ಷಗಳ ಪ್ರತಿರೋಧಗಳ ನಡುವೆ ಈ ಬಾರಿ ಜಯಶೀಲರಾಗಿದ್ದು, ಕಳೆದ ಬಾರಿ 67046 ಮತಗಳನ್ನು ಪಡೆದಿದ್ದ ಇವರು 29044 ಮತಗಳ ಅಂತರದಲ್ಲಿ ಗೆದಿದ್ದರು.ಆದರೆ ಈ ಬಾರಿ 60,759 ಮತಗಳನ್ನು ಪಡೆದು 11,139 ಮತಗಳ ಅಂತರದಲ್ಲಿ ಜಯಗಳಿಸಿದ್ದರೂ ಸಹ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 17,905 ಮತಗಳು ಕಡಿಮೆಯಾಗಿರುವುದು ಸ್ವಲ್ಪ ಹಿನ್ನೆಡೆಯೆ ಎನ್ನಬಹುದಾಗಿದೆ. ಕುರುಬ ಸಮುದಾಯಕ್ಕೆ ಸೇರಿರುವ ಇವರನ್ನು ಈ ಬಾರಿಯೂ ಕ್ಷೇತ್ರದ ಜನ ಬೆಂಬಲಿಸಿದ್ದು ,ತಮ್ಮ ಮತ ಹಾಕುವ ಮೂಲಕ ಅವರನ್ನು ಗೆಲುವಿನ ದಾರಿಯಲ್ಲಿ ಕೊಂಡುಯ್ಯದಿದ್ದು, ಸತತ ಎರಡನೇ ಬಾರಿ ಗೆಲ್ಲುವ ಮುಖೇನ ಜನರ ವಿಶ್ವಾಸಕ್ಕೆ ಅರ್ಹರಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ