ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿವಲಿಂಗಮ್ಮ ಹುಳಿಯಾರು ಗ್ರಾ.ಪಂ ಹಿರಿಯಕ್ಕ

(ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ಐದನೇ ಬಾರಿ ಜಯಗಳಿಸಿರುವ ಶಿವಲಿಂಗಮ್ಮ, ಹ್ಯಾಟ್ರಿಕ್ ಗೆಲುವು ಪಡೆದಿರುವ ಅಶೋಕ್ ಬಾಬು, ಎಚ್.ಆರ್.ರಂಗನಾಥ್, ಜಹೀರ್ ಸಾಬ್)

ವಿಶ್ವ ಬ್ಯಾಂಕ್ ನೆರವಿನಿಂದ ಜಿಲ್ಲೆಯಲ್ಲಿ 357 ಕೆರೆಗಳ ನಿರ್ವಹಣೆ : ಸೋಮಶೇಖರಪ್ಪ

ವಿಶ್ವ ಬ್ಯಾಂಕಿನ ಆಥಿ೯ಕ ನೆರವಿನಲ್ಲಿ ರಾಜ್ಯದಲ್ಲಿ 1336 ಕೆರೆಗಳಲ್ಲಿ ನೀರಿನ ಸಂಗ್ರಹಣೆ ಅಂತರ್ಜಲ ಅಭಿವೃದ್ಧಿಗೆಂದು ಮೊದಲನೇ ಹಂತವಾಗಿ 600 ಕೋಟಿ ವಿನಿಯೋಗಿಸಿದ್ದು ಎರಡನೇ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಕೊರಟಗೆರೆ, ಮಧುಗಿರಿ ಹಾಗೂ ಚಿ.ನಾ.ಹಳ್ಳಿ ತಾಲೂಕುಗಳ 357 ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೆರೆ ನಿರ್ವಹಣೆ ಯೋಜನೆಯಲ್ಲಿ ನೀರು ನಿರ್ವಹಣೆ ಪ್ರಾತ್ಸಕ್ಷಿಕೆಯಲ್ಲಿ ಹೊಸ ತಳಿ ಬೆಳೆಗಳನ್ನು ಬೆಳೆಯಲಾಗುವ ಮೂಲಕ ನೀರಿನ ಸದ್ಭಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ಜಲ ಸಂವರ್ಧನೆ ಯೋಜನಾ ಸಂಘದ ಜಿಲ್ಲಾ ಸಂಯೋಜಕ ಸೋಮಶೇಖರಪ್ಪ ಅವರು ಎಂದು ತಿಳಿಸಿದರು. ಹುಳಿಯಾರು ಸಮೀಪದ ಸೀಗೆಬಾಗಿಯಲ್ಲಿ ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವವಿದ್ಯಾಲಯ, ಶ್ರೀ ವರದರಾಜಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಕನಾ೯ಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ್ಲಿ ತೆಗೆದುಕೊಳ್ಳಲಾದ ನೀರು ನಿರ್ವಹಣೆ ಪ್ರಾತ್ಸೆಕ್ಷಿಕೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು. ಈ ಯೋಜನೆಯಲ್ಲಿ ರೈತರ ಬೆಳೆಗಳ ಇಳುವರಿ ಸುದಾರಣೆ ಮಾಡಿ ಆಥಿ೯ಕ ಮಟ್ಟ ಉತ್ತಮಗೊಳಿಸುವ ಸಲುವಾಗಿ ನೊಂದಾಯಿತ ರೈತರಿಗೆ ನೀರು ನಿರ್ವಹಣೆ, ಆಹಾರ ಬೆಳೆ, ತೋಟಗಾರಿಕೆ ಬೆಳೆ, ಮೇವಿನ ಬೆಳೆಗಳ ಬಗ್ಗೆ ಪ್ರಾತ್ಸಕ್ಷಿಕೆ ನೀಡುವುದಲ್ಲದೆ ಸಮಗ್ರ ಕೃಷಿ ಪದ್ಧ

ಬೆಳ್ಳಾರದ ಬಳಿ 15 ಬೈಕ್ ಸೇರಿ ಜೂಜಾಡುತ್ತಿದ್ದ 13 ಮಂದಿ ಬಂಧನ

ಸಿಪಿಐ ನೇತೃತ್ವದಲ್ಲಿ ಇಬ್ಬರು ಪಿಎಸ್ಐ ಹಾಗೂ ಸಿಬ್ಬಂದಿಗಳು ಮಫ್ತಿ ಕಾಯಾ೯ಚರಣೆ ನಡಸಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 13 ಮಂದಿ ಹಾಗೂ ಸ್ಥಳದಲ್ಲಿದ್ದ 15 ಬೈಕ್ ಗಳನ್ನು ವಶಪಡಿಸಿಕೊಂಡ ಘಟನೆ ಹುಳಿಯಾರು ಸಮೀಪದ ಬೆಳ್ಳಾರದಲ್ಲಿ ಗುರುವಾರ ಮದ್ಯಾಹ್ನ ಜರುಗಿದೆ. ಬೆಳ್ಳಾರ, ಅಂಬಾರಪುರ ರಸ್ತೆಯ ಜಮೀನಿನ ಮರದಕೆಳಗೆ ಅಂದರ್ ಬಾಹರ್ ಆಡುತಿದ್ದಾರೆಂದು ವ್ಯಕ್ತಿಯೊಬ್ಬರು ನೀಡಿದ ಖಚಿತ ಮಾಹಿತಿ ಮೇರೆಗೆ ಸಿಪಿಐ ಪಿ.ರವಿಪ್ರಸಾದ್ ನೇತೃತ್ವದಲ್ಲಿ ಚಿ.ನಾ.ಹಳ್ಳಿ ಪಿಎಸ್ಐ ಶಿವಕುಮಾರ್, ಹುಳಿಯಾರು ಪಿಎಸ್ಐ ಪಾರ್ವತಮ್ಮ ಯಾದವ್ ಹಾಗೂ ಸಿಬ್ಬಂದಿವರ್ಗದವರು ಮಫ್ತಿಯಲ್ಲಿ ಜೂಜಾಟದ ಸ್ಥಳದ ಸಮೀಪ ತೆರಳಿ ಮೊದಲು ತಮ್ಮ ಸಿಬ್ಬಂದಿಯೊಬ್ಬರನ್ನು ಸ್ಥಳಕ್ಕೆ ಕಳಿಸಿ ಜೂಜಾಟದ ಸಂಗತಿ ಖಚಿತಪಡಿಸಿಕೊಂಡು ನಂತರ ಈ ಕಾರ್ಯಾಚರಣೆ ನಡೆಸಿ ಜೂಜಾಡುತ್ತಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಇಪ್ಪತ್ತಿಪ್ಪತೈದು ಮಂದಿ ಜೂಜಾಟದಲ್ಲಿ ತೊಡಗಿದ್ದಿರಬಹುದೆಂದು ದಾಳಿ ನಡೆದಾಗ 13 ಮಂದಿ ಮಾತ್ರ ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ. ಜೂಜಾಡುವ ಸ್ಥಳದಲ್ಲಿದ್ದ 15 ದ್ವಿಚಕ್ರ ವಾಹನ ಹಾಗೂ ಪಣಕ್ಕಿಟ್ಟಿದ್ದ 7970 ರು. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪದವಿ ಪರೀಕ್ಷೆ: ಇಬ್ಬರು ಡಿಬಾರ್

ಪದವಿ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ವಿದ್ಯಾಥಿ೯ಗಳು ಕಾಪಿ ಮಾಡುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಜಾಗೃತದಳಕ್ಕೆ ಸಿಕ್ಕಿಬಿದ್ದು ಡಿಬಾರ್ ಆದ ಘಟನೆ ಹುಳಿಯಾರಿನಲ್ಲಿ ಗುರುವಾರ ಜರುಗಿದೆ. ಪ್ರಥಮ ಎಚ್ಇಪಿ 2 ನೇ ಸೆಮಿಸ್ಟರ್ ಬರೆಯುತ್ತಿದ್ದ ದುರ್ಗರಾಜು ಹಾಗೂ ಬಿಬಿಎಂ 3 ನೇ ಸೆಮಿಸ್ಟರ್ನಲ್ಲಿ ಹಿಂದೆ ಅನುತೀರ್ಣರಾಗಿ ಈಗ ಮರು ಪರೀಕ್ಷೆ ಬರೆಯುತ್ತಿದ್ದ ದಯಾನಂದ್ ಅವರುಗಳೇ ಕಾಪಿ ಮಾಡುವಾಗ ಸಿಕ್ಕಿಬಿದ್ದ ವಿದ್ಯಾಥಿ೯ಗಳಾಗಿದ್ದರೆ. ದುರ್ಗರಾಜ್ ಅವರು ಚಪ್ಪಲಿ ಒಳಗೆ ಕಾಪಿಚೀಟಿ ಹಾಗೂ ದಯಾನಂದ್ ಅವರು ಉತ್ತರವುಳ್ಳ ಐದಾರು ಕಂಪ್ಯೂಟರ್ ಶೀಟ್ ಗಳನ್ನು ತಂದು ಕಾಪಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತುಮಕೂರು ವಿಶ್ವವಿದ್ಯಾನಿಲಯದ ಜಾಗೃತದಳದ ಅಧಿಕಾರಿ ಪ್ರಸನ್ನ ಅವರು ಬೆಳಿಗ್ಗೆ ತಪಾಸಣೆಗೆ ಬಂದಿದ್ದಾಗ ಕಾಪಿ ಮಾಡುತ್ತಿದ್ದ ದುರ್ಗರಾಜು ಹಾಗೂ ಮಧ್ಯಾಹ್ನದ ಸಮಯದಲ್ಲಿ ತಪಾಸಣೆಗೆ ಬಂದಾಗ ಕಾಪಿ ಮಾಡುತ್ತಿದ್ದ ದಯಾನಂದ್ ನೇರವಾಗಿ ಸಿಕ್ಕಿಬಿದ್ದು ಡಿಬಾರ್ ಆಗಿ ಪರೀಕ್ಷೆ ಕೇಂದ್ರದಿಂದ ಹೊರಬಿದ್ದಿದ್ದಾರೆ.

ಹುಳಿಯಾರು ಎಪಿಎಂಸಿಯಲ್ಲಿ ಅಪಘಾತ ವಿಮೆ ವಿತರಣೆ

ಕನಾ೯ಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿಯ ಫಲಾನುಭವಿಗೆ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪರಿಹಾರ ಚೆಕ್ ವಿತರಿಸಲಾಯಿತು. ಹಂದನಕೆರೆ ಹೋಬಳಿ ಎಳ್ಳೇನಹಳ್ಳಿ ಗ್ರಾಮದ ಸಿದ್ದರಾಮಯ್ಯ ತಮ್ಮ ತೋಟದಲ್ಲಿ ಎತ್ತಿನಗಾಡಿಯಿಂದ ಬಿದ್ದು ತೆಂಗಿನಮರದ ಬುಡಕ್ಕೆ ಬಡಿದು ಸಾವನಪ್ಪಿದ್ದರು. ಸದರಿ ವ್ಯಕ್ತಿಯ ಕುಟುಂಬದವರು ಪರಿಹಾರಕ್ಕಾಗಿ ಈ ಹಿಂದೆ ಮನವಿ ಸಲ್ಲಿಸಿದ್ದರು. ಇವರಿಗೆ ರೈತ ಸಂಜೀವಿನ ಅಪಘಾತ ವಿಮಾ ಯೋಜನೆಯಲ್ಲಿ ಮಂಜೂರಾದ 50 ಸಾವಿರ ರು. ಪರಿಹಾರ ಚೆಕ್ಕನ್ನು ತಂದೆ ಜಯಣ್ಣ ಅವರಿಗೆ ಎಪಿಎಂಸಿ ಅಧ್ಯಕ್ಷ ಸಿ.ಬಸವರಾಜು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯದಶಿ೯ ಎಂ.ಆರ್.ಜಯರಾಮ್, ಉಪಾಧ್ಯಕ್ಷ ಎಸ್.ಶಿವರಾಮಯ್ಯ, ಮಾಜಿ ಅಧ್ಯಕ್ಷ ಕೆ.ಎಸ್.ಶಿವರಾಮಯ್ಯ, ನಿದೇ೯ಶಕರುಗಳಾದ ಎಲ್.ಆರ್.ಬಾಲಾಜಿ, ಎಸ್.ಆರ್.ರಾಜ್ ಕುಮಾರ್, ರಾಮಾನಾಯ್ಕ, ಪ್ರಭುಸ್ವಾಮಿ ಇತರರು ಇದ್ದಾರೆ.

ವಿಶ್ವಕರ್ಮದವರಿಗೆ 2A ನಲ್ಲಿ ಶೇ. 3 ಒಳಮೀಸಲಾತಿ ಅಗತ್ಯ: ಏಕದಂಡಿಗಿಶ್ರೀ

ಸಕಾ೯ರ ಹಿಂದುಳಿದ ವರ್ಗ ಎ ನಲ್ಲಿ 108 ಜಾತಿಗಳನ್ನು ಒಟ್ಟಿಗೆ ಸೇರಿಸಿ ಶೇ.15 ಮೀಸಲಾತಿ ನಿಗದಿ ಮಾಡಿದ್ದು ಈ ಸೌಲಭ್ಯವನ್ನು ಕೆಲ ಪ್ರಭಲ ಜಾತಿಗಳು ಕಬಳಿಸುತ್ತಿದ್ದಾರೆ. ಇದರಿಂದ ಅತ್ಯಂತ ಹಿಂದುಳಿದ ಜನಾಂಗ ವಿಶ್ವಕರ್ಮದವರಿಗೆ ಅನ್ಯಾಯವಾಗುತ್ತಿದ್ದು ಸಕಾ೯ರ 2 A ನಲ್ಲಿ ಶೇ.3 ಒಳಮೀಸಲಾತಿ ಜಾರಿಗೆ ತರುವ ಅಗತ್ಯವಿದೆ ಎಂದು ಗುಲ್ಬರ್ಗ ಜಿಲ್ಲೆ, ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಅನೇಗುಂದಿ ಸಂಸ್ಥಾನ ಸರಸ್ವತೀ ಪೀಠಾಧೀಶರಾದ ಶ್ರೀ ಗುರುನಾಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಚಿಕ್ಕನಾಯಕನಹಳ್ಳಿಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಶ್ರೀಕಾಳಿಕಾಂಬ, ಶ್ರೀ ಶಿವಲಿಂಗ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಯಾದಗಿರಿ ಮಠಕ್ಕೆ ಹಿಂದಿರುಗುವಾಗ ಮಾರ್ಗಮಧ್ಯೆ ಹುಳಿಯಾರಿನ ಕಾಗಿ೯ಲ್ ಸತೀಶ್ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ 2 A ನಲ್ಲಿ ವಿಶ್ವಕರ್ಮದವರಿಗೆ ಶೇ.3 ಮೀಸಲಾತಿ ಸಿಕ್ಕರೆ ಶೈಕ್ಷಣಿಕ, ಉದ್ಯೋಗ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದರು. ಪೊಲೀಸ್ ದಬ್ಬಾಳಿಕೆ ತಪ್ಪಿಸಿ : ಚಿನ್ನಬೆಳ್ಳಿ ಕೆಲಸ ಮಾಡುವವರ, ಬಂಗಾರದ ಅಂಗಡಿ ಇಟ್ಟಿರುವವ ಮೇಲೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದು ಪಟ್ಟಣದಲ್ಲಿ ಕಳ್ಳತನ ಪ್ರಕರಣ ಜರುಗಿದರೂ ಸಾಕು ಅಲ್ಲಿನ ಅಂಗಡಿಗಳಿಗೆ ಏಕಾಏಕಿ ಬಂದು ತಪಾಸಣೆ ನಡೆಸಿ ಅವಮಾನಕರ, ದೌರ್ಜನ್ಯದ ಮಾತುಗಳನ್ನಾಡಿ ಮಾನಸಿಕವಾಗಿ ಘಾಸಿಗೊಳಿಸುವುದನ್ನು ಮೊ

ಭಗೀರಥ ಸಂಘದಿಂದ ಪ್ರತಿಭಾ ಪುರಸ್ಕಾರ

(ಫೋಟೊ ವಿವರ:ಹುಳಿಯಾರಿನಲ್ಲಿ ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘವು ಉಪ್ಪಾರ ವಿದ್ಯಾಥಿ೯ಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಕೆರೆಸೂರಗೊಂಡನಹಳ್ಳಿಯ ಓಂಕಾರಮೂತಿ೯ ಅವರು ಬಹುಮಾನ ಸ್ವೀಕರಿಸಿದರು. ಆರ್.ರಾಮಣ್ಣ, ಜಿ.ಎಸ್.ಕೃಷ್ಣಮೂತಿ೯, ಶಾರದಾ ಸೀತರಾಮಯ್ಯ, ಡಿ.ಸಿದ್ದಬಸವಯ್ಯ, ಕಲ್ಲಹಳ್ಳಿ ರೇಣುಕಯ್ಯ ಇದ್ದಾರೆ. ) ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘವು ಭಗೀರಥ ಜಯಂತಿ ಅಂಗವಾಗಿ ತಾಲೂಕಿನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಉಪ್ಪಾರ ವಿದ್ಯಾಥಿ೯ಗಳಿಗೆ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿತು. ಎಸ್ಎಸ್ಎಲ್ಸಿಯಲ್ಲಿ ಹೆಣ್ಣು ಮಕ್ಕಳ ವಿಭಾಗದಿಂದ ನಡುವನಹಳ್ಳಿಯ ಎನ್.ಡಿ.ಪಲ್ಲವಿ(535 ಅಂಕಗಳು), ಕಲ್ಲಳ್ಳಿಯ ಕೆ.ಆರ್.ಯಮುನ(524 ಅಂಕಗಳು), ಸಂಗೇನಹಳ್ಳಿಯ ಎಸ್.ಎಚ್.ಪವಿತ್ರ(490 ಅಂಗಗಳು)ಹಾಗೂ ಗಂಡು ಮಕ್ಕಳ ವಿಭಾಗದಿಂದ ಕೆರೆಸೂರಗೊಂಡನಹಳ್ಳಿಯ ಓಂಕಾರಮೂತಿ೯(480 ಅಂಕಗಳು), ಹುಳಿಯಾರಿನ ಅನಿಲ್(461 ಅಂಕಗಳು) ಗೂಬೆಹಳ್ಳಿಯ ದೊರೇಶ್(461 ಅಂಕಗಳು) ದೊಡ್ಡಬಿದರೆಯ ಬಸವರಾಜು(429 ಅಂಕಗಳು) ಇವರುಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು. ಪಿಯುಸಿಯಲ್ಲಿ ಕಲಾ ವಿಭಾಗದಿಂದ ತೊರೆಮನೆ ಟಿ.ಎಸ್.ಲಕ್ಷ್ಮೀದೇವಿ(494 ಅಂಕಗಳು), ನಂದಿಹಳ್ಳಿ ಎನ್.ಜಿ.ಪವಿತ್ರ(474 ಅಂಕಗಳು), ವಿಜ್ಞಾನ ವಿಭಾಗದಿಂ

ಸಮುದಾಯದ ಏಳಿಗೆಗೆ ದುಡಿಯುವವರಿಗೆ ಪ್ರೋತ್ಸಾಹಿಸಿ: ಡಿ.ಸಿದ್ದಬಸವಯ್ಯ

ಸಮುದಾಯದ ಅಭಿವೃದ್ಧಿಗಾಗಿ ದುಡಿಯ ಹೊರಟಿರುವವರ ಬಗ್ಗೆ ಟೀಕೆ ಮಾಡುವುದ ಬಿಟ್ಟು ಪ್ರೋತ್ಸಾಹ ನೀಡಿ ಸಹಕರಿಸಿ ಎಂದು ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ದಿ ಸಂಘದ ಗೌರವ ಸಲಹೆಗಾರ ಹಾಗೂ ನಿವೃತ್ತ ಉಪನ್ಯಾಸಕ ಡಿ.ಸಿದ್ದಬಸವಯ್ಯ ಅವರು ಕಿವಿ ಮಾತು ಹೇಳಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಭಗೀರಥ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಲೂಕು ಉಪ್ಪಾರ ಜನಾಂಗದ ಮಾತೃ ಸಂಸ್ಥೆಯಲ್ಲಿ ಬಹುಪಾಲು ರೈತರು, ಹಿಂದುಳಿದವರು ಇರುವ ಕಾರಣ ಇಲ್ಲಿಯವರವಿಗೆ ಸಮಾಜದ ಏಳಿಗೆ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಉಪ್ಪಾರ ಸಕಾ೯ರಿ ನೌಕರರು ಪ್ರತ್ಯೇಕ ಸಂಘವನ್ನು ಸ್ಥಾಪಿಸಿ ಸಮಾಜದ ಸಂಘಟನೆ ಮಾಡಿಕೊಂಡು ವಿವಿಧ ಯೋಜನೆಯ ಮೂಲಕ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಉಪ್ಪಾರ ಸಮಾಜದ ಸರ್ವರೂ ಇವರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಉಪ್ಪಾರ ಜನಾಂಗವು ಆಥಿ೯ಕವಾಗಿ, ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದರೂ ಕೂಡ ಮೂಡನಂಬಿಕೆಯನ್ನೇ ಹಾಸಿ, ಹೊದ್ದು, ಮಲಗಿಕೊಂಡಿರುವ ಪರಿಣಾಮ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ವರ್ಗವಾಗಿದೆ ಎಂದ ಅವರು ಮೂಡನಂಬಿಕೆಯಿಂದ ಹೊರ ಬಂದು ದೇವರಲ್ಲಿನ ತಪ್ಪು ಕಲ್ಪನೆಯನ್ನು ಬಿಟ್ಟು ಬಸವ

ಹುಳಿಯಾರಿನಲ್ಲಿ ವೈಭವದ ವಾಸವಿ ಜಯಂತಿ

(ಫೋಟೊ ವಿವರ:ಹುಳಿಯಾರಿನಲ್ಲಿ ಶ್ರೀ ವಾಸವಿ ಜಯಂತಿ ಅಂಗವಾಗಿ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ನಾಣ್ಯದ ತುಲಾಭಾರ ಮಾಡಲಾಯಿತು. ಟಿ.ಆರ್.ಶ್ರೀನಿವಾಸಶ್ರೇಷ್ಠಿ, ಟಿ.ಆರ್.ರಂಗನಾಥ್, ಎಲ್.ಆರ್.ಚಂದ್ರಶೇಖರ್, ಟಿ.ಎಸ್.ರಾಮನಾಥ್, ಬಿ.ವಿ.ಶ್ರೀನಿವಾಸ್, ರಾಮಚಂದ್ರಭಟ್ಟರು, ನಾಗರಾಜಗುಪ್ತ ಮತ್ತಿತರರು ಇದ್ದಾರೆ.) ಹುಳಿಯಾರಿನಲ್ಲಿ ವೈಭವದ ವಾಸವಿ ಜಯಂತಿ --------------------------------------- ಆರ್ಯವೈಶ್ಯ ಸಮುದಾಯದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಭಾನುವಾರದಂದು ಹುಳಿಯಾರಿನಲ್ಲಿ ಶ್ರದ್ಧಾ ಭಕ್ತಿ ಹಾಗೂ ವೈಭವದಿಂದ ಆಚರಿಸಲಾಯಿತು. ರಾಮಚಂದ್ರಭಟ್ಟರು ಹಾಗೂ ನಾಗರಾಜಗುಪ್ತ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು,ಹವನ ಹೋಮಾಧಿಗಳು ನಡೆದವು. ಟಿ.ಎಸ್.ದುರ್ಗರಾಜಗುಪ್ತ ಮತ್ತು ಕುಟುಂಬದವರಿಂದ ಹಾಲಿನ ಪಂಚಾಮೃತ ಅಭಿಷೇಕದಿಂದ ಆರಂಭವಾಗಿ ಗಣಪತಿ ಹೋಮ, ನವಗ್ರಹ ಹೋಮ, ವಾಸವಿ ಹೋಮ, ದುಗಾ೯ಹೋಮ, ಮೃತ್ಯುಂಜಯ ಹೋಮ ಆಚರಿಸಿ ಪೂರ್ಣಾಹುತಿ ಸಲ್ಲಿಸಲಾಯಿತು. ನಂತರ ಸುಮಂಗಲಿಯರಿಂದ ಆರತಿ ಸೇವೆ, ಸಮಸ್ತ ಆರ್ಯವೈಶ್ಯ ಕುಲಭಾಂಧವರಿಂದ ಶ್ರೀ ಅಮ್ಮನವಿಗೆ ನಾಣ್ಯಗಳಿಂದ ತುಲಾಭಾರ, ಕನ್ಯಕಾ ಬಾಲನಾಗರು ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಅಷ್ಟಾವಧಾನ ಮುಂತಾದ ವಿವಿಧ ಧಾಮಿ೯ಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಆರ್ಯವೈಶ್ಯ ಮಹಿಳಾ ಸಂಘದಿಂದ ತಂಬಿಟ್ಟಿನ ಆರತಿ ಸ್ಪಧೆ೯, ವಾಸವಿ ವೇಷಭೂಷಣ ಸ್ಪಧೆ೯,

ಉತ್ತಮ ಆರೋಗ್ಯಕ್ಕೆ ಬಳಸಿ ಕರಿಬೇವು

ಗ್ಯಾಸ್ ಟ್ರಬಲ್ ಇದ್ದರೆ ಕರಿಬೇವು ಪುಡಿ ಉಪಯೋಗಿಸಿ,ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ ಎಂದು ಮನಸ್ವಿನಿ,ನಾರಾವಿ ಎಂಬುವವರು ದಟ್ಸ್ ಕನ್ನಡದ ಅಡುಗೆ ಮನೆ ವಿಭಾಗದಲ್ಲಿ ಬರೆದಿರುವ ಲೇಖನವಿದು.ಇದನ್ನು ಓದಿದ ನಂತರ ಎಲ್ಲರಿಗೂ ಇದು ಉಪಯೋಗವಾಗಬಹುದೆಂದು ಈ ಬ್ಲಾಗಿಗೆ ಹಾಕಲಾಗಿದೆ.ನೀವು ಇದನ್ನು ಓದಿ ಆರೋಗ್ಯ ಕಾಪಾಡಿಕೊಳ್ಳಿ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು. ಉಪಯೋಗಗಳು :* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು. ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ. * ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸ

ಸಾಮೂಹಿಕ ವಿವಾಹ ಕಾರ್ಯಕ್ರಮದ ಪೋಟೊ

ಹುಳಿಯಾರು ಸಮೀಪದ ಹರೇನಹಳ್ಳಿ ಗೇಟ್ ಶ್ರೀ ದುಗಾ೯ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ನಿರುವಗಲ್ ಮಜುರೆ ಹುಲಿಕಲ್ ಬೆಟ್ಟದ ಶ್ರೀ ದುಗಾ೯ಬ ದೇವಿ ಪುಣ್ಯಕ್ಷೇತ್ರದಲ್ಲಿ ೨೧.೦೫.೨೦೧೦ ಶನಿವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೋಟೊ ಹುಳಿಯಾರು ಸಮೀಪದ ಹುಲಿಕಲ್ ಬೆಟ್ಟದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರವಿಪ್ರಸಾದ್ ಅವರನ್ನು ಶ್ರೀ ದುಗಾ೯ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು. ಹುಲಿಕಲ್ ಬೆಟ್ಟದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಖ್ಯಾತ ಹೃದಯ ರೋಗ ತಜ್ಞ ಡಾ.ಪರಮೇಶ್ವರಪ್ಪ ಅವರನ್ನು ಶ್ರೀ ದುಗಾ೯ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು.

ಮುಖ್ಯಮಂತ್ರಿ ಬಳಿಗೆ ಮಠಾಧೀಶರ ನೇತೃತ್ವದಲ್ಲಿ ನೀರಾವರಿನಿಯೋಗ

(ಫೋಟೊ ವಿವರ:ಹುಳಿಯಾರು ಪ್ರವಾಸಿ ಮಂದಿರದ ಬಳಿ ಚಿ.ನಾ.ಹಳ್ಳಿ ತಾಲೂಕಿಗೆ ಹೇಮೆ ಹರಿಸಲು ಒತ್ತಾಯಿಸಿ ಕರೆಯಲಾಗಿದ್ದ ಸಭೆಯಲ್ಲಿ ಕುಪ್ಪೂರಿನ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿ ಖ್ಯಾತ ಹೃದಯರೋಗ ತಜ್ಞ ಡಾ.ಪರಮೇಶ್ವರಪ್ಪ, ರೈತ ಸಂಘದ ಕೆಂಕೆರೆ ಸತೀಶ್ ಮತ್ತಿತರರು ಭಾಗವಹಿಸಿದ್ದರು.) ಮಾತು ತಪ್ಪಿದ ಸಕಾ೯ರ:ಕಡೆಯ ಪ್ರಯತ್ನವಾಗಿ ಮುಖ್ಯಮಂತ್ರಿ ಬಳಿಗೆ ಮಠಾಧೀಶರ ನೇತೃತ್ವದಲ್ಲಿ ನಿಯೋಗ ------------------------------------------------------------------------- ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಿಸುತ್ತಿರುವ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನದಿ ನೀರು ಹರಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಬಗ್ಗೆ ಸಕಾ೯ರ ತನ್ನ ನಿಲುವು ಪ್ರಕಟಿಸದಿರುವದರ ಬಗ್ಗೆ ಕಡೆಯ ಪ್ರಯತ್ನವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಗೆ ಶೀಘ್ರದಲ್ಲಿಯೇ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಿಯೋಗವೊಂದನ್ನು ಕರೆದೊಯ್ಯಲು ರೈತ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಿರ್ಧರಿಸಿವೆ. ಕುಪ್ಪೂರಿನ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೃದ್ರೋಗ ತಜ್ಞ ಡಾ.ಪರಮೇಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ತಾಲ್ಲೂಕ್ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಈ ನಿಧಾ೯ರ ಕೈಗೊಳ್ಳಲಾಯಿತು.ಹೋರ

ಸರಳ ವಿವಾಹ ಪಾಲಿಸಲು ಮುಂದಾಗಿ : ಶಾಸಕ ಸಿಬಿಎಸ್

ಸರಳ ವಿವಾಹವನ್ನು ಪ್ರೋತ್ಸಾಹಿಸುವುದು ಹಾಗೂ ಆಚರಿಸುವುದನ್ನು ಕೇವಲ ಭಾಷಣಗಳಲ್ಲಿ ಮಾತ್ರ ಸೀಮಿತವಾಗಿರಿಸದೆ ಇತರ ಬಡ ಕುಟುಂಬದ ಜೋಡಿಗಳೊಂದಿಗೆ ತನ್ನ ಮಕ್ಕಳಿಗೂ ಸಹ ಸರಳ ವಿವಾಹ ಮಾಡುವ ಮೂಲಕ ಪಾಲಿಸಲು ಮುಂದಾಗುವುದಾಗಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಘೋಷಿಸಿದರು. ಹುಳಿಯಾರು ಸಮೀಪದ ಹರೇನಹಳ್ಳಿ ಗೇಟ್ ಶ್ರೀ ದುಗಾ೯ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ನಿರುವಗಲ್ ಮಜುರೆ ಹುಲಿಕಲ್ ಬೆಟ್ಟದ ಶ್ರೀ ದುಗಾ೯ಬ ದೇವಿ ಪುಣ್ಯಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಹಲವು ಸಂಘ-ಸಂಸ್ಥೆಗಳು ದಾನಿಗಳ ಸಹಾಯ ಪಡೆದು ಪ್ರತಿವರ್ಷ ಹತ್ತಾರು ಸಾಮೂಹಿಕ ವಿವಾಹ ಮಹೋತ್ಸವವನ್ನು ಏರ್ಪಡಿಸಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಮುಂದಿನ ವರ್ಷ ಇಂತಹ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ತಾಲೂಕು ಕೇಂದ್ರದಲ್ಲಿ ಒಂದೇ ದಿನ ನೂರಾರು ಜೋಡಿಗಳ ಸಾಮೂಹಿಕ ವಿವಾಹ ಮಾಡಲು ಮುಂದಾಗುವುದಾಗಿ ತಿಳಿಸಿದರು. ಸತಿ ಪತಿಗಳು ಕಷ್ಟ-ಸುಖ ಹಾಗೂ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಸಂಸಾರ ನಡೆಸಿದಾಗ ಮಾತ್ರ ಯಶಸ್ವಿ ಹಾಗೂ ಸುಖ ಜೀವನ ನಡೆಸಬಹುದಾಗಿದೆ ಎಂದು ಕಿವಿ ಮಾತು ಹೇಳಿದ ಶಾಸಕರು ಸರಳ ವಿವಾಹವಾದ ಪ್ರತಿಯೊಬ್ಬರೂ ಇತರರನ್ನು ಸರಳ ವಿವಾಹದೆಡೆ ಒಲವು ತೋರುವಂತೆ ಮನಸ್ಸು ಪರ

ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು

(ಫೋಟೊ ವಿವರ:ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ರಕ್ತ ಸಂಬಂಧಿಕರ ಸ್ಫಧೆ೯ಯಲ್ಲಿ ಜಯಗಳಿಸಿರುವ ದ್ರಾಕ್ಷಾಯಿಣಮ್ಮ, ಸಿದ್ಧಗಂಗಮ್ಮ, ಪುಟ್ಟರಾಜು) ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು ---------------------------------------------- ಈ ಬಾರಿಯ ಹುಳಿಯಾರು ಗ್ರಾಪಂ ಚುನಾವಣಾ ಫಲಿತಾಂಶದಲ್ಲಿ ಅನೇಕ ಸ್ವಾರಸ್ಯಗಳಿದ್ದು ಗ್ರಾ.ಪಂ.ಚುನಾವಣೆಯ ಕಣಕ್ಕೆ ಐದು ಕುಟುಂಬದಿಂದ ಇಬ್ಬಿಬ್ಬರು ರಕ್ತ ಸಂಬಂಧಿಗಳಂತೆ ಒಟ್ಟು 10ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಅವರಲ್ಲಿ ಮೂರು ಮಂದಿಗೆ ಮಾತ್ರ ಗ್ರಾ.ಪಂ.ಸದಸ್ಯರಾಗುವ ಅದೃಷ್ಟ ಒಲಿದಿರುವುದು ವಿಶೇಷವಾಗಿದೆ. ಇದುವರೆಗೂ ಗ್ರಾ.ಪಂ.ಅಧ್ಯಕ್ಷರಾಗಿದ್ದ ಶ್ರೀಮತಿ ಮಂಜಮ್ಮ ಅವರು ಈ ಬಾರಿ 8 ನೇ ಬ್ಲಾಕ್ ನಿಂದ ಚುನಾವಣೆಗೆ ಸ್ಪಧಿ೯ಸಿದ್ದರಲ್ಲದೆ ತಮ್ಮ ಪತಿ ರಾಜಣ್ಣ ಅವರನ್ನು ಸಹ 7 ನೇ ಬ್ಲಾಕ್ ನಿಂದ ಚುನಾವಣೆಗೆ ನಿಲ್ಲಿಸಿ ಮತ್ತೊಂದು ಅವಧಿಗಾಗಿ ಅದೃಷ್ಠ ಪರಿಕ್ಷೆಗಿಳಿದಿದ್ದರು. ಮತದಾರರ ಅವಕೃಪೆಯಿಂದಾಗಿ ಠೇವಣಿ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ. ಕಳೆದ ಸಾಲಿನ ಸದಸ್ಯ ಮೀಸೆ ರಂಗಪ್ಪ ಅವರು ತಮ್ಮ ಹಳೆಯ ಕ್ಷೇತ್ರ 6 ಬ್ಲಾಕಿನಲ್ಲಿ ಸ್ಪಧಿ೯ಸುವ ಜೊತೆಗೆ ತಮ್ಮ ಪತ್ನಿ ಕಮಲಮ್ಮ ಅವರನ್ನು 9 ಬ್ಲಾಕಿನಿಂದ ಸ್ಪಧೆ೯ಗೆ ಇಳಿಸಿ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟರಾದರೂ ಮತದಾರ ಮಾತ್ರ ರಂಗಪ್ಪನಿಗೆ ಹೆಚ್ಚಿನ ಅಂತರ ಹಾಗೂ ಆತನ ಪತ್ನಿಗೆ ತೀರಾ ಕಡಿಮೆ ಅಂತರದಿಂದ

ಹುಳಿಯಾರಿನಲ್ಲಿ ಸಂಭ್ರಮದ ಶಂಕರ ಜಯಂತಿ

ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕ ಶಂಕರಭಗವತ್ಪಾದರ ಜಯಂತಿಯನ್ನು ಹುಳಿಯಾರಿನ ಬ್ರಾಹ್ಮಣ ಸಮಾಜದಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇದರಂಗವಾಗಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಅಭಿಷೇಕ ಸಮೇತ ವಿಶೇಷ ಪೂಜೆ ಸಲ್ಲಿಸಲಾಯಿತು.ವಿಪ್ರಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ ಹಾಗೂ ಶಿವಾನಂದಲಹರಿ ಪಠಿಸಲಾಯಿತು.ಭಜನೆ,ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಸೀತಾರಾಮ ಪ್ರತಿಷ್ಠಾನದ ಗೌರವಾಧ್ಯಕ್ಷ ಹೆಚ್.ಕೆ.ಅನಂತರಾಮಯ್ಯ,ಕಾರ್ಯದರ್ಶಿ ವಿಶ್ವನಾಥ್ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.

ಶಿವಲಿಂಗಮ್ಮ ಹುಳಿಯಾರು ಗ್ರಾ.ಪಂ ಹಿರಿಯಕ್ಕ,3 ಮಂದಿಯ ಹ್ಯಾಟ್ರಿಕ್ ದಾಖಲೆ

(ಫೋಟೊ ವಿವರ:ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ಐದನೇ ಬಾರಿ ಜಯಗಳಿಸಿರುವ ಶಿವಲಿಂಗಮ್ಮ, ಹ್ಯಾಟ್ರಿಕ್ ಗೆಲುವು ಪಡೆದಿರುವ ಅಶೋಕ್ ಬಾಬು, ಎಚ್.ಆರ್.ರಂಗನಾಥ್, ಜಹೀರ್ ಸಾಬ್) ಶಿವಲಿಂಗಮ್ಮ ಹುಳಿಯಾರು ಗ್ರಾ.ಪಂ ಹಿರಿಯಕ್ಕ 3 ಮಂದಿಯ ಹ್ಯಾಟ್ರಿಕ್ ದಾಖಲೆ --------------------------------- ಸ್ಪರ್ಧಿಸಿರುವ ಎಲ್ಲಾ ಚುನಾವಣೆಗಳಲ್ಲೂ ಸೋಲೆಂಬುದನ್ನು ಕಾಣದೆ ಗೆಲುವಿನ ಸೋಪಾನವೇರುತ್ತ ಬಂದಿರುವ ಮಾರುತಿನಗರದ ಶಿವಲಿಂಗಮ್ಮನಿಗೆ ಈ ಚುನಾವಣೆಯಲ್ಲೂ ಮತದಾರರು ಕೈ ಹಿಡಿಯುವದರೊಂದಿಗೆ 5 ನೇ ಬಾರಿಗೆ ದಾಖಲೆಯೊಂದಿಗೆ ಆಯ್ಕೆಯಾಗುವ ಮೂಲಕ ಹುಳಿಯಾರು ಗ್ರಾ.ಪಂಚಾಯ್ತಿಗೆ ಹಿರಿಯಕ್ಕನಾಗುವ ಸೌಭಾಗ್ಯ ಒದಗಿಬಂದಿದೆ.ಈ ಚುನಾವಣೆಯಲ್ಲಿ ಈಕೆಗೆ ಐದನೇ ಭಾರಿ ಜಯ ಒಲಿದರೆ ಇನ್ನಿತರ ಮೂರು ಮಂದಿಗೆ ಹ್ಯಾಟ್ರಿಕ್ ಹಾಗೂ ಆರು ಮಂದಿಗೆ ಎರಡನೇ ಬಾರಿಯ ಜಯದ ಬಾಗಿಲು ತೆರೆದು ದಾಖಲೆಯಾಗಿದೆ. 5 ನೇ ಬಾರಿ ಸದಸ್ಯೆ : ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಕೆಲವೆ ಮಂದಿಯನ್ನು ಹೊರತು ಪಡಿಸಿ ಮತ್ತಿನ್ಯಾರೂ ಎರಡನೇ ಬಾರಿ ಗೆಲುವು ಕಂಡಿಲ್ಲ.ಅಂತಹದರಲ್ಲಿ 5 ನೇ ಬಾರಿಯೂ ಗೆಲುವೂ ಸಾಧಿಸುವ ಮುಖಾಂತರ ಗ್ರಾಪಂ ಖಾಯಂ ಸದಸ್ಯೆಯಾಗಿರುವ ಶಿವಲಿಂಗಮ್ಮ ಈ ಬಾರಿಯ ಪಂಚಾಯ್ತಿಯಲ್ಲಿ ಅತ್ಯಂತ ಹಿರಿಯ ಸದಸ್ಯೆ. 84-85 ನೇ ಸಾಲಿನಲ್ಲಿ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ 2 ನೇ ಬ್ಲಾಕಿನಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಪ್ರವೇಶಿಸಿದ ಎಚ್.ಎಂ.ಶಿವಲಿಂಗಮ್ಮ ನಂತರ 90-91 ರಲ್ಲಿ ನಡೆದ ಚ

ಹುಳಿಯಾರು ಗ್ರಾಮಪಂಚಾಯಿತಿ:ವಿಜೇತ ಸದಸ್ಯರು

ಹುಳಿಯಾರು ಗ್ರಾಮಪಂಚಾಯಿತಿಯ 33 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಏಣಿಕೆ ಕಾರ್ಯ ಇಂದು ನಡೆದಿದ್ದು ಒಟ್ಟು 13 ಬ್ಲಾಕ್ ಗಳಿಂದ ವಿಜೇತರಾದ ಸದಸ್ಯರ ಪಟ್ಟಿ ಹೀಗಿದೆ. 1 ನೇ ಬ್ಲಾಕ್:ಇ.ದ್ರಾಕ್ಷಾಯಣಮ್ಮ,ಸಿದ್ದಗಂಗಮ್ಮ. 2 ನೇ ಬ್ಲಾಕ್:ಸೈಯದ್ ಅನ್ಸರ್ ಅಲಿ,ಹಬೀಬ್ ಉನ್ನಿಸ 3 ನೇ ಬ್ಲಾಕ್:ಹೆಚ್.ಬಿ.ಬೈರೇಶ್,ಶ್ರೀನಿವಾಸ್ 4 ನೇ ಬ್ಲಾಕ್:ಧನುಶ್ ರಂಗನಾಥ್,ಫರ್ಹಾನ 5 ನೇ ಬ್ಲಾಕ್:ಸೈಯದ್ ಜಹೀರ್ ಸಾಬ್,ಅಶೋಕ್ ಬಾಬು,ಶಿವಲಿಂಗಮ್ಮ,ಕಾಳಮ್ಮ 6 ನೇ ಬ್ಲಾಕ್:ರಾಘವೇಂದ್ರ,ವೆಂಕಟಮ್ಮ 7 ನೇ ಬ್ಲಾಕ್:ಶಿವಕುಮಾರ್,ಹೇಮಂತ್ 8 ನೇ ಬ್ಲಾಕ್:ಪುಟ್ಟರಾಜು,ಪುಟ್ಟಿಬಾಯಿ,ಕೆ.ಗಂಗಾಧರ್ ರಾವ್ 9ನೇ ಬ್ಲಾಕ್:ಹಸೀನ(ನವಾಬ್ ಬೇಗ್),ಹಸೀನಭಾನು,ಶಫಿಉಲ್ಲಾ 10 ನೇ ಬ್ಲಾಕ್:ಅಹ್ಮದ್ ಖಾನ್,ಸುವರ್ಣಮ್ಮ,ರೇವಣ್ಣ 11 ನೇ ಬ್ಲಾಕ್:ಚಂದ್ರಕಲಾ,ಬಾಲರಾಜು 12 ನೇ ಬ್ಲಾಕ್:ಶಿವಣ್ಣ,ಸಿ.ಆರ್.ಮಂಜುಳ ಹುಳಿಯಾರು ಗ್ರಾಮ ಪಂಚಾಯ್ತಿಗೆ 8 ನೇ ಬ್ಲಾಕ್ ನಿಂದ ಆಯ್ಕೆಯಾದ ಏಜೆಂಟ್ ಗಂಗಣ್ಣ ಅವರಿಗೆ ಚುನಾವಣಾಧಿಕಾರಿ ಹೊನ್ನೇಶ್ ಅವರು ಪ್ರಮಾಣಪತ್ರ ನೀಡಿದರು. ಹುಳಿಯಾರು ಗ್ರಾ.ಪಂ.ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಪುಟ್ಟಮ್ಮ, ಕಾಳಮ್ಮ ಅವರು ಚುನಾವಣಾಧಿಕಾರಿ ಹೊನ್ನಪ್ಪ ಅವರಿಂದ ಸದಸ್ಯತ್ವದ ಪ್ರಮಾಣ ಪತ್ರವನ್ನು ಪಡೆದರು. ಸಹಾಯಕ ಚುನಾವಣಾಧಿಕಾರಿ ಚಂದ್ರಪ್ಪ ಇದ್ದಾರೆ. ಹುಳಿಯಾರು ಗ್ರಾ.ಪಂ.ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಪುಟ್ಟರಾಜು, ಬಾಲರಾಜು, ಡಿಶ್ ಬಾಬು ಅವರು ಚುನಾವಣಾಧಿಕಾರಿ ಹೊನ್ನಪ

ಹುಳಿಯಾರು ಎಎಸೈ ಈರಮರಿಯಪ್ಪ ನಿಧನ

ಕರ್ತವ್ಯನಿರತರಾಗಿದ್ದ ಹುಳಿಯಾರು ಎಎಸೈ ಈರಮರಿಯಪ್ಪ ತೀವ್ರ ಹೃದಯಾಘಾತಕೊಳಗಾಗಿ ಚಿಕ್ಕನಾಯಕನಹಳ್ಳಿ ಸಕಾ೯ರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.ಮೃತರಿಗೆ 56 ವರ್ಷ ವಯಸ್ಸಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಠಾಣೆಯಲ್ಲಿ ಎಎಸೈ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಶನಿವಾರ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ ಭಾನುವಾರ ಚಿಕ್ಕನಾಯಕನಹಳ್ಳಿ ಸಕಾ೯ರಿ ಪದವಿ ಪೂರ್ವ ಕಾಲೇಜಿನಲ್ಲಿ ಇರಿಸಲಾಗಿದ್ದ ಮತಪೆಟ್ಟಿಗೆಗಳ ಕಾವಲಿಗೆ ತೆರಳಿದ್ದರು.ಅಲ್ಲಿಯೇ ತೀವ್ರ ಹೃದಯಾಘಾತಕೊಳಗಾಗಿ ಸಕಾ೯ರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದರು.ಮೃತರು ಪತ್ನಿ,ಮೂರು ಮಂದಿ ಮಕ್ಕಳನ್ನು ಅಗಲಿದ್ದಾರೆ. ಹೃದಯಾಘಾತದಿಂದ ಸಾವನಪ್ಪಿದ ಹುಳಿಯಾರು ಎಎಸೈ ಈರಮರಿಯಪ್ಪ ಮೃತದೇಹವನ್ನು ಹುಳಿಯಾರು ಪೋಲಿಸ್ ಠಾಣೆ ಮುಂದೆ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು.ತಹಸಿಲ್ದಾರ್ ಕಾಂತರಾಜು,ಸಿಪಿಐ ರವಿಪ್ರಸಾದ್,ಹುಳಿಯಾರು ಪಿಎಸೈ ಪಾರ್ವತಿಯಾದವ್,ಹಂದನಕೆರೆ ಪಿಎಸೈ ಲಕ್ಷೀಪತಿ, ಸಹೋದ್ಯೋಗಿಗಳು ಸೇರಿದಂತೆ ರೈತಸಂಘದ ಕೆಂಕೆರೆಸತೀಶ್,ಕೆ.ಪಿ.ಮಲ್ಲೇಶ್,ಬಿಜೆಪಿ ಮುಖಂಡರಾದ ದಬ್ಬಗುಂಟೆ ರವಿಕುಮಾರ್,ತಾಪಂ ಸದಸ್ಯ ಶಿವನಂಜಪ್ಪ,ಜೆಡಿಎಸ್ ಮುಖಂಡ ನಂದಿಹಳ್ಳಿ ಶಿವಣ್ಣ,ಸೈಯದ್ ಜಲಾಲ್ ಸಾಬ್,ವಕೀಲ ಸದಾಶಿವು, ವಕೀಲ ವಿಶ್ವನಾಥ್,ಬಸ್ ಏಜೆಂಟ್ ಸಂಘದ ಕಾರ್ಯದಶಿ೯ ವಿಶ್ವನಾಥ್ ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಮೃತರ ಅಂತಿಮ ದರ್ಶ

ಹುಳಿಯಾರು : ಮತದಾನ ಶಾಂತಿಯುತ

(ಹುಳಿಯಾರಿನಲ್ಲಿ ಇಂದು ನಡೆದ ಗ್ರಾಮಪಂಚಾಯ್ತಿ ಚುನಾವಣೆಯ ನೋಟ ) ಹುಳಿಯಾರು ಗ್ರಾಮಪಂಚಾಯ್ತಿಯ 33 ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಅಲ್ಲಲ್ಲಿ ನಡೆದ ಕೆಲ ಸಣ್ಣಪುಟ್ಟ ಘಟನೆಗಳ ಹೊರತುಪಡಿಸಿದಲ್ಲಿ ಬಹುತೇಕ ಶಾಂತಿಯುತವಾಗಿತ್ತು.ರಾತ್ರಿ 8 ಗಂಟೆಯವರೆಗೂ ವಾಡು೯ವಾರು ವಿವರ ಲಭ್ಯವಾಗದಿದ್ದು ಒಟ್ಟಾರೆ ಶೇ 70% ಮತದಾನ ನಡೆದಿದೆ ಎನ್ನಲಾಗಿದೆ. ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ್ದ ಮತದಾನ 9 ರಿಂದ 1 ಗಂಟೆಯವರೆಗೂ ಚುರುಕಾಗಿತ್ತು. ಮತದಾನ ಕೇಂದ್ರದ ಹೊರಭಾಗದಲ್ಲಿ ಅಭ್ಯಥಿ೯ಗಳ ಪರ ಅವರ ಬೆಂಬಲಿಗರು,ಕುಟುಂಬ ವರ್ಗದವರು ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಮದ್ಯಾಹ್ನನದ ನಂತರ ಮತದಾನ ಮಾಡದೆ ಮನೆಯಲಿಳುದಿದ್ದ ಆಯಾ ಬ್ಲಾಕಿನ ಮತದಾರರನ್ನು ಓಲೈಸಿ ಆಯಾ ಬ್ಲಾಕಿನ ಅಭ್ಯಥಿ೯ಗಳು ಮತಘಟ್ಟೆಗೆ ಕರೆತಂದು ಮತಹಾಕಿಸುವ ಪ್ರಯತ್ನ ನಡೆಸುತ್ತಿದ್ದರು. ಕೆಂಕೆರೆ,ಹುಳಿಯಾರು 5,9 ನೇ ಬ್ಲಾಕ್ ನಲ್ಲಿ ಬೆಂಬಲಿಗರ ನಡುವೆ ಮಾತಿನ ಚಕಮುಖಿ ಘರ್ಷಣೆ ನಡೆದು ಪೋಲಿಸರ ಸಕಾಲಿಕ ಆಗಮನದಿಂದ ಅಹಿತಕರ ಘಟನೆ ಸಂಭವ ತಪ್ಪಿದೆ.ಎಲ್ಲಡೆ ಬಿಗಿ ಪೋಲಿಸ್ ಬಂದೋಬಸ್ತ್ ನಿಂದಾಗಿ ಶಾಂತಿಯುತ ಮತದಾನ ಸಾಗಿತ್ತು.ಒಟ್ಟಾರೆ ಇಂದು ನಡೆದ ಚುನಾವಣೆಯಲ್ಲಿ ಹುಳಿಯಾರು ಗ್ರಾ.ಪಂನ 33 ಸ್ಥಾನಕ್ಕೆ ಒಟ್ಟು 13 ಬ್ಲಾಕುಗಳಿಂದ 131 ಅಭ್ಯಥರ್ಿಗಳ ಭವಿಷ್ಯವನ್ನು ಮತದಾರ ಬ

ಓವರ್ ಲೋಡ್

ಓವರ್ ಲೋಡ್:ಹುಳಿಯಾರು ಪೋಲಿಸ್ ಠಾಣೆಯ ಮುಂದೆಯೆ ಟಾಪ್ ಮೇಲೂ ಜನರನ್ನು ತುಂಬಿಸಿಕೊಂಡು ಬಂದಿರುವ ಬಸ್ಸಿಗೆ ಇನ್ನಷ್ಟು ಜನರು ಹತ್ತುತ್ತಿರುವುದು. ಬಸ್ಸಿನವ್ರಿಗೆ ಇದೆಂತ ದೈರ್ಯ ಅಂತೀನಿ.ಅಥವಾ ಪೋಲಿಸ್ರೆ ಇದನ್ನು ಕಂಡು ಕಾಣ್ದಂತೆ ಸುಮ್ಮನಿರ್ತರಾ?

ಹುಳಿಯಾರಿನಲ್ಲಿ ಎಸ್ಎಸ್ಎಲ್ಸಿ ಅನುತೀರ್ಣದಿಂದ ವಿದ್ಯಾಥಿ೯ ಸಾವು

ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಅನುತೀರ್ಣವಾಗಿರುವುದನ್ನು ಕಂಡು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ವಿದ್ಯಾಥಿ೯ಯೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಳಿಯಾರು-ಕೆಂಕೆರೆ ಸಕಾ೯ರಿ ಪ್ರೌಢಶಾಲೆಯ ಇಂಗ್ಲೀಷ್ ಮೀಡಿಯಂ ವಿದ್ಯಾಥಿ೯ ರೇಣುಕಾ ಪ್ರಸಾದ್ ಎಂಬುವವರೇ ಗುರುವಾರ ವೆಬ್ ಸೈಟ್ ನಲ್ಲಿ ಪ್ರಕಟವಾದ ಫಲಿತಾಂಶದಿಂದ ಘಾಸಿಯಾಗಿ ಸಾವನ್ನಪ್ಪಿದವನಾಗಿದ್ದಾನೆ. ಈತ ಇಲ್ಲಿನ ಪೇಟೆ ಬೀದಿಯಲ್ಲಿನ ಗ್ರಾಮ ಪಂಚಾಯ್ತಿ ಪಕ್ಕದಲ್ಲಿ ಗುಡಿಸಲು ಹೋಟೆಲ್ ನೆಡೆಸುತ್ತಿದ್ದ ಗಾಡಿರಾಜಪ್ಪ ಹಾಗೂ ಪುಟ್ಟಕ್ಕ ಎಂಬುವವರ ಮಗನಾಗಿರುವ ಈತ ಎಲ್ಲಾ ವಿದ್ಯಾಥಿ೯ಗಳಂತೆ ಇಂದು ಮದ್ಯಾನ್ಹ ಇವನೂ ಸಹ ಕುತುಹಲದಿಂದ ಇಂಟರ್ ನೆಟ್ ನಲ್ಲಿ ಫಲಿತಾಂಶ ನೋಡಿ ಬಂದಿದ್ದಾನೆ. ಆದರೆ ಈತ ಪರೀಕ್ಷೆಯಲ್ಲಿ 2 ವಿಷಯಗಳಲ್ಲಿ ಅನುತೀರ್ಣವಾಗಿರುವುದನ್ನು ಕಂಡು ಮನನೊಂದು ಸಂಜೆಯ ಸಮಯ ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಪ್ರಯತ್ನಿಸಿದ್ದಾನೆ. ಕುಟುಂಬದವರೆಲ್ಲ ಹೋಟೆಲ್ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಿದಾಗ ಮಗ ಮನೆಯ ತೀರಿನಲ್ಲಿ ನೇತಾಡುತ್ತಿದ್ದುದನ್ನು ಕಂಡು ಗಾಭರಿಯಿಂದ ಕಿರುಚಿದಾಗ ಅಕ್ಕ-ಪಕ್ಕದ ಮನೆಯವರು ಧಾವಿಸಿ ಬಂದು ಆಸ್ಪತ್ರಗೆ ಸಾಗಿಸಿ ಬದುಕಿಸಲು ಪ್ರಯತ್ನಿಸಿದರಾದರೂ ರಕ್ತ ಸಂಚಲನ ತೀವ್ರವಾಗಿ ತೊಡಕಾದ ಕಾರಣ ಮಾರ್ಗಮಧ್ಯೆ ಈತ ಕೊನೆಯುಸಿರೆಳೆದನೆಂದು ಪ್ರತ್ಯಕ್ಷದಶಿ೯ಗಳು ಪತ್ರಿಕೆಗೆ ತಿಳಿಸಿದ್ದಾರೆ.

ಎಂತಹ ಸದಸ್ಯರು ಬೇಕು? ಕರಪತ್ರದ ಮೂಲಕ ಅರಿವು

ನಮ್ಮ ಪಂಚಾಯ್ತಿಗೆ ಅಭಿವೃದ್ಧಿ ಚಿಂತಕರು ಬೇಕು ಎಂದಿರುವ ಹುಳಿಯಾರಿನ ಟಿಪ್ಪೂ ಸುಲ್ತಾನ್ ಯುವಕ ಸಂಘದ ಪದಾಧಿಕಾರಿಗಳು ಪ್ರಸಕ್ತ ಸಾಲಿನ ಗ್ರಾ.ಪಂ.ಚುನಾವಣೆಗೆ ಎಂತಹ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಮತದಾನದ ಮಹತ್ವವನ್ನು ಕರಪತ್ರದ ಮೂಲಕ ಮತದಾರರನ್ನು ಎಚ್ಚರಗೊಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.ಮತದಾರರು ಜನಪ್ರತಿನಿಧಿಗಳಿಂದ ಏನ್ನನ್ನು ನಿರೀಕ್ಷಿಸಬೇಕು ಹಾಗೂ ಮತದಾರರ ಬೇಡಿಕೆ ಏನೆಂಬುದರ ಬಗ್ಗೆ ಕರಪತ್ರದ ಮೂಲಕ ಪ್ರಚಾರ ಪಡಿಸಿದ್ದಾರೆ. ಗ್ರಾಮ ಪಂಚಾಯ್ತಿ ಎಂದರೆ ರಾಜ್ಯಕ್ಕೆ ವಿಧಾನಸೌಧ ಇರುವ ಹಾಗೆ ನಮ್ಮ ಗ್ರಾಮಕ್ಕೆ ಈ ಗ್ರಾಮ ಪಂಚಾಯ್ತಿ. ನಮ್ಮ ಗ್ರಾಮದ ಅಗತ್ಯ ಕೆಲಸಗಳನ್ನು ನಾವೇ ನಿರ್ಧರಿಸಿ ಮಾಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಇದರಲ್ಲಿದೆ ಎನ್ನುವ ಮಹತ್ವ ಅರಿವು ಮೂಡಿಸುವ ಜೊತೆಗೆ ಈ ಭಾಗದ ಸಮಸ್ಯೆಗಳ ಅರಿವಿರುವ ಹಾಗೂ ಗ್ರಾಮವನ್ನು ಅಭಿವೃದ್ಧಿ ದಾರಿಯಲ್ಲಿ ಕೊಂಡೊಯ್ಯುವ ಸಚಾರಿತ್ಯ ಉಳ್ಳ ಸಮರ್ಥ ಅಭ್ಯಥಿ೯ಯನ್ನು ನಿರ್ಧರಿಸಿ ಜಾತಿ,ಮತ,ಭೇದ-ಭಾವವಿಲ್ಲದೆ ಆಯ್ಕೆ ಮಾಡುವ ಜವಾಬ್ದಾರಿ ಪಾಠವನ್ನು ಈ ಕರಪತ್ರದಲ್ಲಿ ಹೇಳಲಾಗಿದೆ. ಹಣ, ಹೆಂಡ, ಸೀರೆಗಳ ಆಮೀಷಕ್ಕೆ ಒಳಗಾಗಿ ಅಸಮರ್ಥರನ್ನು ಆಯ್ಕೆ ಮಾಡಿದಲ್ಲಿ ಮುಂದಿನ ಐದು ವರ್ಷ ಸಮಸ್ಯೆಗಳೊಂದಿಗೆ ಕಾಲ ಕಳೆಯ ಅನಿವಾರ್ಯತೆಯನ್ನು ನಾವೇ ಆಹ್ವಾನಿಸಿದಂತಾಗುತ್ತದೆ. ಹಾಗಾಗಿ ಮತದಾನದ ವೇಳೆ ಜಾಗೃತರಾಗಿ ಮತ ಚಲಾಯಿಸಿ ಎಂಬ ಎಚ್ಚರಿಕೆ ಇದೆ. ಮತದಾರರ ಬೇಡಿಕೆ : ಸಮರ್ಪಕ ಶುದ್ಧ ಕುಡಿಯುವ ನೀರ

ಹುಳಿಯಾರು ಗ್ರಾ.ಪಂ.ದಂಡಿ ದುಡ್ಡು ಹರಿದು ಬಂದರೂ ಅಭಿವೃದ್ಧಿ ಮಾತ್ರ ಶೂನ್ಯ

(ಹುಳಿಯಾರು ಗ್ರಾಮ ಪಂಚಾಯ್ತಿ ) ಲೇಖನ: ಡಿ.ಆರ್.ನರೇಂದ್ರಬಾಬು ಹುಳಿಯಾರು ಹಳ್ಳಿಗಳ ವಿಧಾನ ಸೌಧವಾಗಿರುವ ಗ್ರಾಮ ಪಂಚಾಯ್ತಿಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತಕ್ಕೆ ನೂತನ ಸದಸ್ಯರನ್ನು ಆಯ್ಕೆಮಾಡುವ ಚುನಾವಣೆ ಸಜ್ಜುಗೊಂಡಿದ್ದು ಶನಿವಾರದಂದು ಮುಹೂರ್ತ ನಿಗಧಿಯಾಗಿದೆ. ಜಯಚಂದ್ರರವರು ತಮ್ಮ ವಿಧಾನಸಭಾ ಕ್ಷೇತ್ರವನ್ನು ಬದಲಿಸಿದ ದಿನದಿಂದ ನೆಲಕಚ್ಚಿರುವ ಕಾಂಗ್ರೆಸ್ ಈ ಚುನಾವಣೆಯನ್ನು ಎದುರಿಸುವಲ್ಲಿ ವಿಫಲವಾದಂತೆ ಕಂಡು ಬಂದಿದ್ದು ಹಾಲಿ ಶಾಸಕ ಸಿ.ಬಿ.ಸುರೇಶ್ಬಾಬು ಬೆಂಬಲಿತ ಜೆಡಿಎಸ್ ಅಭ್ಯಥಿ೯ಗಳು ಹಾಗೂ ಸ್ಥಳೀಯರೂ ಆದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಬೆಂಬಲಿತ ಬಿಜೆಪಿ ಅಭ್ಯಥಿ೯ಗಳೊಂದಿಗೆ ಅಂತಿಮ ಹಣಾಹಣಿ ನಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಈ ಮಧ್ಯೆ ಕೆಲವೆಡೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬೆಂಬಲಿತ ಜೆಡಿಯು ಅಭ್ಯಥಿ೯ಗಳು ಸೇರಿದಂತೆ ಪಕ್ಷೇತರ ಅಭ್ಯಥಿ೯ಗಳೂ ಸಹ ಮತದಾರರನ್ನು ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಒಟ್ಟಾರೆ ಅಭ್ಯಥಿ೯ಗಳ ಪ್ರಚಾರದ ಭರಾಟೆ ಗಮನಿಸಿದರೆ ಪಂಚಾಯ್ತಿಯಲ್ಲಿ ವರ್ಷನೂ ಗಟ್ಟಲೆಯಿಂದ ಕಾಡುತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆಯಾಗಲಿ, ಮುಂದೆ ತಾವು ಮಾಡುವ ಅಭಿವೃದ್ಧಿ ಕೆಲಸಗಳ ಬಗ್ಗೆಯಾಗಲಿ ಪ್ರಚಾರದಲ್ಲಿ ಬೆಳಕು ಚೆಲ್ಲದಿರುವುದು ದುರಂತದ ಸಂಗತಿಯಾಗಿದೆ. @ ಪಂಚಾಯ್ತಿಯ ಹಿನ್ನೋಟ: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯ್

ಕಾಮಾನಬಿಲ್ಲು

ಹುಳಿಯಾರು ಪಟ್ಟಣದಲ್ಲಿ ಮಂಗಳವಾರ ಸಂಜೆ ಮಳೆ ಬಂದ ತರುವಾಯ ನೀಲಾಕಾಶದಲ್ಲಿ ಮೂಡಿದ ಕಾಮಾನಬಿಲ್ಲು ಜನರಲ್ಲಿ ಸಂತಸ ಮೂಡಿಸಿತ್ತು. ಈ ಅಪರೂಪದ ದೃಶ್ಯವನ್ನು ಸ್ಟುಡಿಯೋ ಯತೀಶ್ ಅವರು ಸೆರೆಹಿಡಿದಿದ್ದಾರೆ.

ಪಡಿತರ ತಕರಾರು: ತಹಸೀಲ್ದಾರ್ ದಿಢೀರ್ ಭೇಟಿ

ಪಡಿತರ ವಿತರಣೆಯ ತಕರಾರು ಸಂಬಂಧ ಹುಳಿಯಾರು ಹೋಬಳಿ ದಸೂಡಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸೊಸೈಟಿಗೆ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಡಿತರಚೀಟಿದಾರರು ಸಕಾ೯ರ ನಿಗಧಿ ಪಡಿಸಿದಂತೆ ಪಡಿತರ ವಿತರಿಸುತ್ತಿಲ್ಲ ಹಾಗೂ ಹೆಚ್ಚಿನ ದರಕ್ಕೆ ಬೇರೆಯವರಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಇಲ್ಲಿನ ವಿಎಸ್ಎಸ್ಎನ್ ಗೆ ಭೇಟಿ ನೀಡಿದ ತಹಸೀಲ್ದಾರ್ ಪಡಿತರದಾರರ ದೂರಿನ ಬಗ್ಗೆ ಕಾರ್ಯದಶಿ೯ ಈಶ್ವರಪ್ಪ ಅವರಿಂದ ಸ್ಪಸ್ಟನೆ ಪಡೆದರು. ಕಾಡ್೯ ಲ್ಯಾಪ್ಸ್ ಆಗಿರುವವರಿಗೂ ಪಡಿತರ ನೀಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಕಾರ್ಯದಶಿ೯ ಸಮಜಾಯಿಷಿ ನೀಡಿದರಾದರೂ ಪೋಟೊ ತೆಗೆಸದ ಕಾರಣ ಕಾಡ್೯ಗಳು ಲ್ಯಾಪ್ಸ್ ಆಗಿದ್ದು ಅವರು ತಾಲೂಕು ಕಛೇರಿಗೆ ಬಂದು ಪೋಟೊ ತೆಗೆಯಿಸಿ ಕೊಳ್ಳುವಂತೆ ತಿಳಿಹೇಳಿ ಹಾಗೂ ಅವರಿಗಾಗಿ ಇತರ ಕಾಡ್೯ದಾರರ ಪಡಿತರ ಕಡಿತಕೊಳಿಸದೆ ಸಕಾ೯ರ ನಿಗಧಿ ಪಡಿಸಿರುವಂತೆ ಯುನಿಟ್ ಸಿಸ್ಟಮ್ ಪ್ರಕಾರ ವಿತರಿಸಲು ಸೂಚಿಸಿದರು. ಅಕ್ಕಿ ಸಕ್ಕರೆಯನ್ನು ಹೆಚ್ಚಿನ ಬೆಲೆಗೆ ಕಾಡ್೯ದಾರರಲ್ಲದವರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಕಾರ್ಯದಶಿ೯ಯನ್ನು ತೀರ್ವ ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ಕಾಡ್೯ದಾರರಿಗೆ ಸಿಗಬೇಕಾದ ಪಡಿತರವನ್ನು ಬೇರೆಯವರಿಗೆ ಮಾರಾಟ ಮಾಡಿದಲ್ಲಿ ಅಮಾನತ್ ಮಾಡುವುದಾಗಿ ಎಚ್ಚರಿಕೆ ನೀಡಿ ಲೋಪವಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕಾಡ್೯ದಾರರಿಗೆ ಹೇಳ

ಸ್ವಾತಂತ್ರ್ಯ ಹೋರಾಟಗಾರ ಮರಿರಂಗಪ್ಪ ನಿಧನ

( ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಮರಿರಂಗಪ್ಪ ಅವರ ಅಂತಿಮ ದರ್ಶನವನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಪಡೆದು ಅಂತ್ಯ ಸಂಸ್ಕಾರಕ್ಕೆ ಹಣ ನೀಡಿದರು. ಒಳಚಿತ್ರದಲ್ಲಿ ಮೃತ ಮರಿರಂಗಪ್ಪ ) ಹುಲಿಯಾರು ಹೋಬಳಿ ದಸೂಡಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಮರಿರಂಗಪ್ಪ(90) ಅವರು ಮಂಗಳವಾರ ಮುಂಜಾನೆ ವಿಧಿವಶರಾದರು. ವೃಧಾಪ್ಯದಿಂದ ನಿಧನರಾದ ಸ್ವಾತಂತ್ರ್ಯ ಹೋರಾಟಗಾರರನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಅಂತಿಮ ದರ್ಶನ ಪಡೆದು ಸಕಾ೯ರದ ಪರವಾಗಿ ಗೌರವ ಸಮಪಿ೯ಸಿದರು. ಮೃತರು ಶಿರಾ ತಾಲೂಕು ಬೆಂಜೆ ಗ್ರಾಮದ ಮೂಲದವರಾಗಿದ್ದು ಸುಮಾರು 60 ವರ್ಷಗಳಿಂದ ಹೋಬಳಿಯ ದಸೂಡಿ ಗ್ರಾಮದಲ್ಲಿ ವಾಸವಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 1939 ರಲ್ಲಿ 3 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು. ಇವರು ಪತ್ನಿ ಗಂಗಮ್ಮ, 3 ಮಂದಿ ಗಂಡು ಮಕ್ಕಳು, 12 ಮಮ್ಮೊಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಕಾ೯ರದ ಪರವಾಗಿ ತಹಸೀಲ್ದಾರ್ ಟಿ.ಸಿ.ಕಾಂತರಾಜು ಸೇರಿದಂತೆ ಕಂದಾಯ ತನಿಖಾಧಿಕಾರಿ ಬಸವರಾಜು, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ಗಂಗರಾಜು ಅಲ್ಲದೆ ಗ್ರಾಮದ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು. ಸಂಜೆ ಮೃತರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಹುಳಿಯಾರು ಹೋಬಳಿಯಲ್ಲಿ 616 ಅಭ್ಯರ್ಥಿಗಳು ಕಣದಲ್ಲಿ

ಹುಳಿಯಾರು ಹೋಬಳಿಯ 10 ಗ್ರಾಮ ಪಂಚಾಯ್ತಿಗಳಿಂದ 192 ಸ್ಥಾನಗಳ ಪೈಕಿ 3 ಗ್ರಾ.ಪಂ.ಗಳಲ್ಲಿ 5 ಸ್ಥಾನಗಳು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು ಉಳಿದ 187 ಸ್ಥಾನಗಳ ಚುನಾವಣೆಗೆ ಒಟ್ಟು 616 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹುಳಿಯಾರು ಗ್ರಾ.ಪಂನ 33 ಸ್ಥಾನಕ್ಕೆ 131, ಕೆಂಕೆರೆ ಗ್ರಾ.ಪಂ.ನ 18 ಸ್ಥಾನಕ್ಕೆ 54, ಯಳನಡು ಗ್ರಾ.ಪಂ.ನ 17 ಸ್ಥಾನಕ್ಕೆ 62, ತಿಮ್ಲಾಪುರ ಗ್ರಾ.ಪಂ.ನ 18 ಸ್ಥಾನಕ್ಕೆ 66, ದೊಡ್ಡಬಿದರೆ ಗ್ರಾ.ಪಂ.ನ 18 ಸ್ಥಾನಕ್ಕೆ 55, ಬರಕನಹಾಲ್ ಗ್ರಾ.ಪಂ.ನ 16 ಸ್ಥಾನಕ್ಕೆ 52, ಗಾಣಧಾಳು ಗ್ರಾ.ಪಂ.ನ 18 ಸ್ಥಾನಕ್ಕೆ 60, ದಸೂಡಿ ಗ್ರಾ.ಪಂ.ನ 18 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 16 ಸ್ಥಾನಕ್ಕೆ 48, ಹೊಯ್ಸಲಕಟ್ಟೆ ಗ್ರಾ.ಪಂ.ನ 20 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 18 ಸ್ಥಾನಕ್ಕೆ 49, ಕೋರಗೆರೆ ಗ್ರಾ.ಪಂ.ನ 15 ಸ್ಥಾನಗಳ ಪೈಕಿ 1 ಅವಿರೋಧ ಆಯ್ಕೆ ನಡೆದಿದ್ದು ಉಳಿದ 14 ಸ್ಥಾನಕ್ಕೆ 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಸೂಡಿ ಗ್ರಾ.ಪಂಯಲ್ಲಿನ ಉಮ್ಲಾನಾಯ್ಕನತಾಂಡ್ಯದ ಪರಿಶಿಷ್ಠ ಜಾತಿ ಮಹಿಳಾ ಮೀಸಲು ಸ್ಥಾನಕ್ಕೆ ಮಂಜಿಬಾಯಿ, ಹಾಗೂ ಎಮ್ಮೆಕರನಟ್ಟಿಯ ಬಿಸಿಎಂ(ಎ) ಮಹಿಳಾ ಮೀಸಲು ಸ್ಥಾನಕ್ಕೆ ಕರಿಯಮ್ಮ, ಹೊಯ್ಸಲಕಟ್ಟೆ ಗ್ರಾ.ಪಂ.ಯಲ್ಲಿನ ನುಲೇನೂರು ಬ್ಲಾಕಿಗೆ ಈರಣ್ಣ, ಕಲ್ಲೇನಹಳ್ಳಿ ಬ್ಲಾಕಿಗೆ ಮಂಜುನಾಥ್ ಮತ್ತು ಕೋರಗೆರೆ ಗ್ರಾ.ಪಂ.ನ ಮರಾಠಿಪಾಳ್ಯದ ಪರಿಶಿಷ್ಠಜಾತಿ

ಹುಳಿಯಾರಿಗೆ ಕೀರ್ತಿ ತಂದ ಕು.ಐಶ್ವರ್ಯ

(ಹುಳಿಯಾರಿನ ಕು.ಐಶ್ವರ್ಯ ಅವರು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಂದ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿ ಪಡೆಯುತ್ತಿರುವುದು) ಅಂತರರಾಷ್ಟ್ರೀಯ ಜೀವ ವೈವಿಧ್ಯ ವರ್ಷಚರಣೆ ಅಂಗವಾಗಿ ತುಮಕೂರು ವಿಜ್ಞಾನ ಕೇಂದ್ರ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ನೀಡಿದ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕು.ಐಶ್ವರ್ಯ ಅವರು ಹುಳಿಯಾರು ಹೋಬಳಿಗೆ ಕೀರ್ತಿತಂದಿದ್ದಾರೆ. ಪ್ರತಿಭಾ ಕಾರಂಜಿಯ ಜಿಲ್ಲಾ ಮಟ್ಟದ ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಪ್ರಥಮ ಸ್ಥಾನ, ಕೆ.ಆರ್.ವಿ.ಪಿಯ ಜಿಲ್ಲಾ ಮಟ್ಟದ ವಿಜ್ಞಾನ ಕ್ವಿಝ್ನಲ್ಲಿ ಪ್ರಥಮ ಸ್ಥಾನ, ಆರ್ಯಭಟ ಅಬಕಾಸ್ ಆಕಾಡೆಮಿಯ ಪರೀಕ್ಷೆಯಲ್ಲಿ ಎಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ, ತಾಲೂಕು ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ, ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ಉತ್ತೀರ್ಣ ಮತ್ತಿತರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಕೆ ಪಡೆದ ಬಹುಮಾನಗಳ ಸಾಧನೆಯನ್ನು ಪರಿಗಣಿಸಿ ಈ ಬಾರಿಯ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿ ನೀಡಲಾಗಿದೆ. ಬಹು ಮುಖ್ಯವಾಗಿ ಈಕೆ ರಾಸಾಯನಿಕಗಳಿಗೆ ಹಾಕೋಣ ಮಿತಿ ಇನ್ನಾಗಲಿ ಸಾವಯವ ನಮ್ಮ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ರಾಸಾಯನಿಕಗಳ ಬಳಕೆಯಿಂದ ಕೃಷಿಯಲ್ಲಾಗುವ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಅವುಗಳ ಬಳಕೆಯನ್ನು ಕಡಿಮೆ

ಶ್ರೀದೇವಿ ಭವನ್ ನ ಬೋಜರಾಜ್ ಗೆ ಕಾಯಕರತ್ನ ಪ್ರಶಸ್ತಿ

ಹುಳಿಯಾರು ಶ್ರೀದೇವಿ ಭವನ್ ಹೋಟಲ್ ಮಾಲಿಕ ಬೋಜರಾಜ್ ಅವರಿಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸುತ್ತಿರುವುದು. ಕಳೆದ 4 ದಶಕಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ಇಲ್ಲಿನ ರಾಂಗೋಪಾಲ್ ಸರ್ಕಲ್ ಬಳಿಯ ಶ್ರೀದೇವಿ ಭವನ್ ಮಾಲೀಕ ಕೆ.ಬೋಜರಾಜ್ ಅವರಿಗೆ ಹುಳಿಯಾರು ನಾಗರೀಕರ ಪರವಾಗಿ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪತ್ರಕರ್ತರ ಸಂಘವು ಇತ್ತೀಚೆಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಿತು. ಪರಿಚಯ: ಸದಾ ಬಿಳಿ ಬನಿಯನ್, ನೀಲಿ ಅಥವಾ ಬಿಳಿ ಪಂಚೆ ತೊಟ್ಟು ಮುಂಜಾನೆಯಿಂದ ಸಂಜೆಯವರೆಗೂ ಜಾಗ ಬಿಟ್ಟು ಕದಲದೆ ಹೋಟೆಲ್ ಕ್ಯಾಷಿಯರ್ ಛೇರ್ ನಲ್ಲಿ ಕಾಣಸಿಗುವ ಇವರು ಆಗಾಗ ಈರುಳ್ಳಿ, ಬೈಟು ಟೀ, ಜಾಮೂನ್, ಕಾರ ಎಂದು ಕೂಗಿ ಸುಮ್ಮನಾಗುವ ದೃಶ್ಯ ಮಾಮೂಲು.ಹುಳಿಯಾರಿನ ತಿಂಡಿ ಪ್ರಿಯರಿಗೆಲ್ಲ ಚಿರಪರಿಚಿತರಾಗಿರುವ ಇವರ ಬಗ್ಗೆ ಅರಿಯದವರ್ಯಾರು ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ಅಶ್ವಥ್ ಪುರ ಗ್ರಾಮದ ಇವರು 4 ನೇ ತರಗತಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು ಜೀವನ ನಿರ್ವಹಣೆಗಾಗಿ ಚಿಕ್ಕವಯಸ್ಸಿನಿಂದಲೇ ಹೋಟೆಲ್ ವೃತ್ತಿ ಆಯ್ದುಕೊಂಡು ದಾವಣಗೆರೆ, ಚಿತ್ರದುರ್ಗದಲ್ಲಿ ಕಾಯಕ ಆರಂಭಿದರು.ನಂತರ ಹುಳಿಯಾರಿನ ಪೇಟೆ ಬೀದಿಯಲ್ಲಿ ಸಾಹುಕಾರ್ ಕೆ.ಸುಬ್ಬರಾವ್ ಹೋಟೆಲ್ಗೆ ಅನಿರೀಕ್ಷಿತವಾಗಿ ಸೇರಿ ಕಾಲಕ್ರಮೇಣ ಇದೇ ಹೋಟೆಲ್ ಮಾಲೀಕರಾದ ಇವರು ಬರೋಬ್ಬರಿ 4 ದಶಕಗಳಿಂದಲೂ ಹೋಟೆಲ್ ಅನ್ನೇ ನಂಬಿ ಬದುಕು ಕಟ್ಟುತ್ತಿದ್ದಾರೆ. ಇಷ್ಟು ಸುಧೀರ್ಘ

ಶ್ರೀದೇವಿ ಭವನ್ ನ ಬೋಜರಾಜ್ ಗೆ ಕಾಯಕರತ್ನ ಪ್ರಶಸ್ತಿ

ಹುಳಿಯಾರು ಶ್ರೀದೇವಿ ಭವನ್ ಹೋಟಲ್ ಮಾಲಿಕ ಬೋಜರಾಜ್ ಅವರಿಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸುತ್ತಿರುವುದು. ಕಳೆದ 4 ದಶಕಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ಇಲ್ಲಿನ ರಾಂಗೋಪಾಲ್ ಸರ್ಕಲ್ ಬಳಿಯ ಶ್ರೀದೇವಿ ಭವನ್ ಮಾಲೀಕ ಕೆ.ಬೋಜರಾಜ್ ಅವರಿಗೆ ಹುಳಿಯಾರು ನಾಗರೀಕರ ಪರವಾಗಿ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪತ್ರಕರ್ತರ ಸಂಘವು ಇತ್ತೀಚೆಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಿತು. ಪರಿಚಯ: ಸದಾ ಬಿಳಿ ಬನಿಯನ್, ನೀಲಿ ಅಥವಾ ಬಿಳಿ ಪಂಚೆ ತೊಟ್ಟು ಮುಂಜಾನೆಯಿಂದ ಸಂಜೆಯವರೆಗೂ ಜಾಗ ಬಿಟ್ಟು ಕದಲದೆ ಹೋಟೆಲ್ ಕ್ಯಾಷಿಯರ್ ಛೇರ್ ನಲ್ಲಿ ಕಾಣಸಿಗುವ ಇವರು ಆಗಾಗ ಈರುಳ್ಳಿ, ಬೈಟು ಟೀ, ಜಾಮೂನ್, ಕಾರ ಎಂದು ಕೂಗಿ ಸುಮ್ಮನಾಗುವ ದೃಶ್ಯ ಮಾಮೂಲು.ಹುಳಿಯಾರಿನ ತಿಂಡಿ ಪ್ರಿಯರಿಗೆಲ್ಲ ಚಿರಪರಿಚಿತರಾಗಿರುವ ಇವರ ಬಗ್ಗೆ ಅರಿಯದವರ್ಯಾರು ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ಅಶ್ವಥ್ ಪುರ ಗ್ರಾಮದ ಇವರು 4 ನೇ ತರಗತಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು ಜೀವನ ನಿರ್ವಹಣೆಗಾಗಿ ಚಿಕ್ಕವಯಸ್ಸಿನಿಂದಲೇ ಹೋಟೆಲ್ ವೃತ್ತಿ ಆಯ್ದುಕೊಂಡು ದಾವಣಗೆರೆ, ಚಿತ್ರದುರ್ಗದಲ್ಲಿ ಕಾಯಕ ಆರಂಭಿದರು.ನಂತರ ಹುಳಿಯಾರಿನ ಪೇಟೆ ಬೀದಿಯಲ್ಲಿ ಸಾಹುಕಾರ್ ಕೆ.ಸುಬ್ಬರಾವ್ ಹೋಟೆಲ್ಗೆ ಅನಿರೀಕ್ಷಿತವಾಗಿ ಸೇರಿ ಕಾಲಕ್ರಮೇಣ ಇದೇ ಹೋಟೆಲ್ ಮಾಲೀಕರಾದ ಇವರು ಬರೋಬ್ಬರಿ 4 ದಶಕಗಳಿಂದಲೂ ಹೋಟೆಲ್ ಅನ್ನೇ ನಂಬಿ ಬದುಕು ಕಟ್ಟುತ್ತಿದ್ದ

ಹುಳಿಯಾರಿನಲ್ಲಿ ಬೀದಿದೀಪವೀಗ ಚುನಾವಣ ವಿಚಾರ

(ಹುಳಿಯಾರಿನ 5 ನೇ ಬ್ಲಾಕ್ನಲ್ಲಿ ಮತದಾರರ ಓಲೈಕೆಗಾಗಿ ಕಂಬಗಳಿಗೆ ದೀಪ ಅಳವಡಿಸುತ್ತಿರುವುದು) ಮತದಾರರನ್ನು ಓಲೈಸಿಕೊಳ್ಳವ ಸಲುವಾಗಿ ಚುನಾವಣಾ ಚಟುವಟಿಕೆಗಳು ಈಗಾಗಲೇ ಆರಂಭವಾಗಿದ್ದು ಹುಳಿಯಾರಿನ 5 ನೇ ಬ್ಲಾಕ್ನಲ್ಲಿ ರಾಜಾರೋಷವಾಗಿ ಬೀದಿದೀಪಗಳನ್ನು ಅಳವಡಿಸಿರುವದು ತಕರಾರಿನ ವಿಚಾರವಾಗಿದೆ. ಈ ಬ್ಲಾಕಿನಲ್ಲಿ ಒಟ್ಟು 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇದರಲ್ಲಿ 2 ಜನರಲ್ ಸ್ಥಾನಗಳು, 1 ಜನರಲ್ ಮಹಿಳೆ, 1 ಎಸ್ಸಿ ಮಹಿಳೆ ಸ್ಥಾನಗಳಿಗೆ ಹಂಚಿಕೆಯಾಗಿದ್ದು ಇದರಲ್ಲಿ ಜನರಲ್ ಸ್ಥಾನಗಳಿಗೆ ಮಾಜಿ ಸದಸ್ಯರುಗಳಾದ ಎಚ್.ಎಂ.ಅಶೋಕ್ ಹಾಗೂ ಮಾಜಿ ಉಪಾಧ್ಯಕ್ಷ ಸೈಯದ್ ಜಹೀರ್ ಅವರು ಸ್ಫರ್ಧಿಸಿರುವುದರಿಂದ ಮಹತ್ವ ಪಡೆದುಕೊಂಡಿದೆ. ಹಾಗಾಗಿ ಶತಾಯ ಗತಾಯ ಈ ಚುನಾವಣೆಗೆ ಗೆಲ್ಲಲೇ ಬೇಕೆಂದು ಮಾಜಿ ಉಪಾಧ್ಯಕ್ಷ ಸೈಯದ್ ಜಹೀರ್ ಅವರು ಅಡ್ಡದಾರಿ ತುಳಿದಿದ್ದು ರಾಜಾರೋಷವಾಗಿ ತಮ್ಮ ಬ್ಲಾಕಿನ ಕಂಬಗಳಿಗೆ ದೀಪಗಳನ್ನು ಹಾಕಿಸುವ ಮೂಲಕ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಯಾವುದೇ ಆಮಿಷ ಹಾಗೂ ಸಹಾಯ, ಸೌಲಭ್ಯಗಳನ್ನು ನೀಡಬಾರದು ಎಂದು ಆಯೋಗದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆಂಬ ಆರೋಪ ಮಾಡಲಾಗಿದೆ. ಕಳೆದ ಎರಡುವರೆ ವರ್ಷ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ಬ್ಲಾಕಿನ ಮತದಾರರ ಸೇವೆ ಮಾಡುವ ವಿಫುಲ ಅವಕಾಶ ವಿದ್ದರೂ ಸಹ ಆಗ ಮತದಾರರನ್ನು ಕಡೆಗಣಿಸಿ ಬೀದಿದೀಪಗಳನ್ನು ಅಳವಡಿಸದೆ ಕತ್ತಲೆಯಲ್ಲಿ ಹಾಗೂ ಸ

ಮೈಲಾರಪುರದಲ್ಲಿ ಇಂದು ತಿಂಗಳ ಪೂಜೆ

ಹುಳಿಯಾರು ಸಮೀಪದ ಮೈಲಾರಪುರದಲ್ಲಿ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಬ್ರಹ್ಮರತೋತ್ಸವದ ತಿಂಗಳ ಪೂಜಾ ಮಹೋತ್ಸವವನ್ನು ಮೇ.2 ರ ಭಾನುವಾರ ಏರ್ಪಡಿಸಲಾಗಿದೆ. ಬೆಲಗೂರು ಶ್ರೀಕ್ಷೇತ್ರದ ಶ್ರೀ ಬಿಂಧುಮಾಧವ ಮಹಾಸ್ವಾಮಿಗಳ ದಿವ್ಯಸಾನಿಧ್ಯ ಹಾಗೂ ಆಗಮಿಕರಾದ ಕಡೂರು ಹ್ಯಾರಳಘಟ್ಟದ ಶ್ರೀ ತೋಟೇಶಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಪೂಜಾಮಹೋತ್ಸವದಲ್ಲಿ ಬೆಳಿಗ್ಗೆ 6 ಗಂಟೆಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ತಿಂಗಳು ಪೂಜೆ ಉತ್ಸವ, ರಾತ್ರಿ 8 ಗಂಟೆಗೆ ಸರ್ಪಮಂಡಲೋತ್ಸವ, ರಾತ್ರಿ 9 ಗಂಟೆಗೆ ಚೌಡಿಕೆ ಚನ್ನಪ್ಪ ಮತ್ತು ಸಂಗಡಿಗರಿಂದ ಚೌಡಿಕೆ ಮೇಳ ಮುಂತಾದ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವ ಕಾಲದಲ್ಲಿ ಮೀಸಲು ಮತ್ತು ಕಾಣಿಕೆಯನ್ನು ಅರ್ಪಿಸದೆ ಇರುವ ವಕ್ಕಲುಗಳು ಅರ್ಪಿಸಬೇಕಾಗಿ ಹಾಗೂ ತಿಂಗಳ ಪೂಜಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಎ.ನಿರಂಜನಾರಾಧ್ಯ ಹಾಗೂ ಸೂಜಿಕಲ್ಲು ಧರ್ಮದರ್ಶಿ ಎಸ್.ನಿಂಗಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹುಳಿಯಾರಿಗೆ ಕೀರ್ತಿ ತಂದ ಕು.ಐಶ್ವರ್ಯ

( ಹುಳಿಯಾರಿನ ಕು.ಐಶ್ವರ್ಯ ಅವರು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಂದ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿ ಪಡೆಯುತ್ತಿರುವುದು) ಅಂತರರಾಷ್ಟ್ರೀಯ ಜೀವ ವೈವಿಧ್ಯ ವರ್ಷಚರಣೆ ಅಂಗವಾಗಿ ತುಮಕೂರು ವಿಜ್ಞಾನ ಕೇಂದ್ರ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ನೀಡಿದ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕು.ಐಶ್ವರ್ಯ ಅವರು ಹುಳಿಯಾರು ಹೋಬಳಿಗೆ ಕೀರ್ತಿತಂದಿದ್ದಾರೆ. ಪ್ರತಿಭಾ ಕಾರಂಜಿಯ ಜಿಲ್ಲಾ ಮಟ್ಟದ ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಪ್ರಥಮ ಸ್ಥಾನ, ಕೆ.ಆರ್.ವಿ.ಪಿಯ ಜಿಲ್ಲಾ ಮಟ್ಟದ ವಿಜ್ಞಾನ ಕ್ವಿಝ್ನಲ್ಲಿ ಪ್ರಥಮ ಸ್ಥಾನ, ಆರ್ಯಭಟ ಅಬಕಾಸ್ ಆಕಾಡೆಮಿಯ ಪರೀಕ್ಷೆಯಲ್ಲಿ ಎಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ, ತಾಲೂಕು ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ, ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ಉತ್ತೀರ್ಣ ಮತ್ತಿತರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಕೆ ಪಡೆದ ಬಹುಮಾನಗಳ ಸಾಧನೆಯನ್ನು ಪರಿಗಣಿಸಿ ಈ ಬಾರಿಯ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿ ನೀಡಲಾಗಿದೆ. ಬಹು ಮುಖ್ಯವಾಗಿ ಈಕೆ ರಾಸಾಯನಿಕಗಳಿಗೆ ಹಾಕೋಣ ಮಿತಿ ಇನ್ನಾಗಲಿ ಸಾವಯವ ನಮ್ಮ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ರಾಸಾಯನಿಕಗಳ ಬಳಕೆಯಿಂದ ಕೃಷಿಯಲ್ಲಾಗುವ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಅವುಗಳ ಬಳಕೆಯನ್ನು ಕಡಿ

ಹುಳಿಯಾರು ಗ್ರಾ.ಪಂ. ಮುಂದೆ ನೀರಿಗಾಗಿ ಪ್ರತಿಭಟನೆ

( ಹುಳಿಯಾರು ಆಜಾದ್ ನಗರದ ನಿವಾಸಿಗಳು ನೀರಿಗಾಗಿ ಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವುದು. ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಪ್ರತಿಭಟನಾನಿರತರ ಸಮಸ್ಯೆ ಆಲಿಸುತ್ತಿರುವುದು ) ಕಳೆದ ಒಂದು ತಿಂಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಮಹಿಳೆಯರು ದಿನಬೆಳಗಾದರೆ ನೀರಿಗಾಗಿ ಪರದಾಡುವಂತಾಗಿದೆ ಎಂದು ಆರೋಪಿಸಿ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡ ಘಟನೆ ಹುಳಿಯಾರಿನಲ್ಲಿ ಜರುಗಿದೆ. ಇಲ್ಲಿನ ಆಜಾದ್ ನಗರಕ್ಕೆ ಬೋರನಕಣಿವೆ ನೀರು ಹಾಗೂ ರೋಟರಿ ಕ್ಲಬ್ ನವರು ವ್ಯವಸ್ಥೆಗೊಳಿಸಿರುವ ಮಿನಿಟ್ಯಾಂಕಿನಿಂದ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ ತಿಂಗಳಿಂದ ಮೋಟರ್ ಕೆಟ್ಟು ಬೋರನಕಣಿವೆಯ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಬೋರನಕಣಿವೆ ನೀರು ನಿಂತು ವಾರದಲ್ಲಾಗಲೇ ರೋಟರಿ ಬೋರಿನ ನೀರು ಪೈರೈಕೆಯಲ್ಲಿಯೂ ಸಹ ವ್ಯತ್ಯಯವಾಗಿ ದೂರದ ತೋಟದ ಕೊಳವೆ ಬಾವಿಯಿಂದ ನೀರು ಹೊತ್ತು ತರುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಅಲ್ಲದೆ, ಪಂಚಾಯ್ತಿ ನೀರು ವ್ಯತ್ಯಯವಾದಾಗ ಇಲ್ಲಿನ ಎಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಸುತ್ತಿದ್ದ ಕೈಪಂಪು ಕೆಟ್ಟು ಆರು ತಿಂಗಳಾದರೂ ಸಹ ದುರಸ್ಥಿ ಮಾಡದೆ ತಾತ್ಸಾರ ಮಾಡಲಾಗಿದೆ. ಜೊತೆಗೆ ಪಂಚಾಯ್ತಿಯಿಂದ ಪ್ರತ್ಯೇಕ 2 ಪೈಪ್ ಲೈನ್ ಮಾಡಿ 6 ತಿಂಗಳಾದರೂ ಅದಕ್ಕೆ ಮೈನ್ ಲೈನ್ ಸಂಪರ್ಕ ಕೊಡದಿದ್ದ ಕಾರಣ ನೀರಿನ ಸಮಸ್ಯೆ ಇಲ್ಲಿ ಆ