ವಿಷಯಕ್ಕೆ ಹೋಗಿ

ಉತ್ತಮ ಆರೋಗ್ಯಕ್ಕೆ ಬಳಸಿ ಕರಿಬೇವು

ಗ್ಯಾಸ್ ಟ್ರಬಲ್ ಇದ್ದರೆ ಕರಿಬೇವು ಪುಡಿ ಉಪಯೋಗಿಸಿ,ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ ಎಂದು ಮನಸ್ವಿನಿ,ನಾರಾವಿ ಎಂಬುವವರು ದಟ್ಸ್ ಕನ್ನಡದ ಅಡುಗೆ ಮನೆ ವಿಭಾಗದಲ್ಲಿ ಬರೆದಿರುವ ಲೇಖನವಿದು.ಇದನ್ನು ಓದಿದ ನಂತರ ಎಲ್ಲರಿಗೂ ಇದು ಉಪಯೋಗವಾಗಬಹುದೆಂದು ಈ ಬ್ಲಾಗಿಗೆ ಹಾಕಲಾಗಿದೆ.ನೀವು ಇದನ್ನು ಓದಿ ಆರೋಗ್ಯ ಕಾಪಾಡಿಕೊಳ್ಳಿ.


ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು.


ಉಪಯೋಗಗಳು:* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ.

* ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

* ಕುರು, ಗಾಯವಾದಾಗ ಕರಿಬೇವಿನ ಎಲೆಗಳನ್ನು ಅರೆದು ಸ್ವಲ್ಪ ಅರಿಶಿನದೊಂದಿಗೆ ಬೆರೆಸಿ ಅರೆದು ಹಚ್ಚಬಹುದು.* ಕಾಮಾಲೆ ರೋಗವಿದ್ದಾಗ 10-12 ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅರೆದುಕೊಂಡು ಸುಮಾರು 60-100ಮಿ.ಲೀ ಎಳನೀರಿನೊಂದಿಗೆ ನೀಡಬಹುದು.

* ಸೊಳ್ಳೆ, ಇರುವೆ, ನೊಣ ಮುಂತಾದ ಕೀಟಗಳ ತೊಂದರೆ ತಪ್ಪಿಸಲು ಕರಿಬೇವಿನ ಸುವಾಸನೆ ಸಾಕು.

* ಕರಿಬೇವಿನ ಎಲೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ, ಹಸಿ ಎಲೆಯನ್ನು ಅಗಿದು ತಿಂದರೆ ಒಳ್ಳೆಯದು.


ಅತ್ಯಧಿಕಇದು ದಿವ್ಯೌಷಧಿ.* ಹೇರಳವಾಗಿ ದೊರೆಯುತ್ತಿದ್ದರೆ ಕರಿಬೇವು ಪುಡಿಯನ್ನೋ ಚಟ್ನಿಪುಡಿಯನ್ನೋ ಮಾಡಿ ತಿನ್ನಿರಿ

ಕಬ್ಬಿಣದ ಅಂಶವುಳ್ಳ ಕರಿಬೇವು ಪುಡಿ ಗ್ಯಾಸ್ ಟ್ರಬಲ್ ಇರುವವರಿಗೆ ಮನೇಲೇ ಸಿಗುವ ಅತ್ಯುತ್ತಮ ಔಷಧಿ. ಅದನ್ನು ತಯಾರಿಸುವ ವಿಧಾನ ಹೀಗಿದೆ ನೋಡಿ.ಬೇಕಾಗುವ ಪದಾರ್ಥಗಳು : ಕರಿಬೇವು ಒಂದು ಬಟ್ಟಲು | ಜೀರಿಗೆ ಅರ್ಧ ಮುಟಿಗೆಯಷ್ಟು | ಮೆಣಸಿನ ಕಾಳು ಏಳೆಂಟು ಹತ್ತು | ರುಚಿಗೆ ಉಪ್ಪು.ತಯಾರಿಸುವ ವಿಧಾನಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಇಷ್ಟೇ. ಆದರೆ, ಅದು ಆರೋಗ್ಯದ ಮೇಲೆ ಮಾಡುವ ಪರಿಣಾಮ ಮಾತ್ರ ಅಗಾಧ. ಸೋ, ಮೊದಲು ಕರಿಬೇವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಗರಿಗರಿಯಾದ ನಂತರ ಅದಕ್ಕೆ ಹುರಿದ ಜೀರಿಗೆ ಮತ್ತು ಮೆಣಸಿನ ಕಾಳುಗಳನ್ನು ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಚಟ್ನಿಪುಡಿಗಿಂದ ಸ್ವಲ್ಪ ನುಣ್ಣಗಾಗಿರಲಿ. ಇದೇ ಕರಿಬೇವು ಪುಡಿ.ಕರಿಬೇವು ಪುಡಿಯನ್ನು ಬಿಸಿಬಿಸಿ ಅನ್ನ ಮತ್ತು ತುಪ್ಪದೊಡನೆ ಸೇರಿಸಿ ಸವಿಯಬಹುದು. ಗ್ಯಾಸ್ ಟ್ರಬಲ್ ನಿಂದ ಬಳಲುತ್ತಿರುವವರು ಜೆಲ್ಯುಸಿಲ್ ಅಥವಾ ಇನ್ನಾವುದೇ ಆಂಟ್ಯಾಸಿಡ್ ಔಷಧಿಯನ್ನು ಸೇವಿಸುವ ಬದಲು ಅನ್ನದ ಜೊತೆ ಕರಿಬೇವು ಪುಡಿಯನ್ನು ತಿನ್ನಬಹುದು. ಇದನ್ನು ಚಟ್ನಿಪುಡಿಯಂತೆ ಕೂಡ ಮೊಸರಿನೊಂದಿಗೆ ಕಲಿಸಿ ಚಪಾತಿ ಜೊತೆ ಮೆಲ್ಲಬಹುದು. ಟ್ರೈ ಮಾಡಿ ನೋಡಿ.ಗಮನಿಸಿ* ಊಟದಲ್ಲಿ ಕರಿಬೇವು ಬಂದಾಗ ಪಕ್ಕಕ್ಕೆ ತೆಗೆದಿಡಬೇಡಿ. ಅಗಿದು ತಿಂದುಬಿಡಿ.* ಅಜೀರ್ಣ, ಮಧುಮೇಹ, ಬೇಧಿ, ಬೊಜ್ಜು ಕರಗಿಸಲು, ಕಾಮಾಲೆ ರೋಗಕ್ಕೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.