ಸಿಪಿಐ ನೇತೃತ್ವದಲ್ಲಿ ಇಬ್ಬರು ಪಿಎಸ್ಐ ಹಾಗೂ ಸಿಬ್ಬಂದಿಗಳು ಮಫ್ತಿ ಕಾಯಾ೯ಚರಣೆ ನಡಸಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 13 ಮಂದಿ ಹಾಗೂ ಸ್ಥಳದಲ್ಲಿದ್ದ 15 ಬೈಕ್ ಗಳನ್ನು ವಶಪಡಿಸಿಕೊಂಡ ಘಟನೆ ಹುಳಿಯಾರು ಸಮೀಪದ ಬೆಳ್ಳಾರದಲ್ಲಿ ಗುರುವಾರ ಮದ್ಯಾಹ್ನ ಜರುಗಿದೆ.
ಬೆಳ್ಳಾರ, ಅಂಬಾರಪುರ ರಸ್ತೆಯ ಜಮೀನಿನ ಮರದಕೆಳಗೆ ಅಂದರ್ ಬಾಹರ್ ಆಡುತಿದ್ದಾರೆಂದು ವ್ಯಕ್ತಿಯೊಬ್ಬರು ನೀಡಿದ ಖಚಿತ ಮಾಹಿತಿ ಮೇರೆಗೆ ಸಿಪಿಐ ಪಿ.ರವಿಪ್ರಸಾದ್ ನೇತೃತ್ವದಲ್ಲಿ ಚಿ.ನಾ.ಹಳ್ಳಿ ಪಿಎಸ್ಐ ಶಿವಕುಮಾರ್, ಹುಳಿಯಾರು ಪಿಎಸ್ಐ ಪಾರ್ವತಮ್ಮ ಯಾದವ್ ಹಾಗೂ ಸಿಬ್ಬಂದಿವರ್ಗದವರು ಮಫ್ತಿಯಲ್ಲಿ ಜೂಜಾಟದ ಸ್ಥಳದ ಸಮೀಪ ತೆರಳಿ ಮೊದಲು ತಮ್ಮ ಸಿಬ್ಬಂದಿಯೊಬ್ಬರನ್ನು ಸ್ಥಳಕ್ಕೆ ಕಳಿಸಿ ಜೂಜಾಟದ ಸಂಗತಿ ಖಚಿತಪಡಿಸಿಕೊಂಡು ನಂತರ ಈ ಕಾರ್ಯಾಚರಣೆ ನಡೆಸಿ ಜೂಜಾಡುತ್ತಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ಇಪ್ಪತ್ತಿಪ್ಪತೈದು ಮಂದಿ ಜೂಜಾಟದಲ್ಲಿ ತೊಡಗಿದ್ದಿರಬಹುದೆಂದು ದಾಳಿ ನಡೆದಾಗ 13 ಮಂದಿ ಮಾತ್ರ ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ. ಜೂಜಾಡುವ ಸ್ಥಳದಲ್ಲಿದ್ದ 15 ದ್ವಿಚಕ್ರ ವಾಹನ ಹಾಗೂ ಪಣಕ್ಕಿಟ್ಟಿದ್ದ 7970 ರು. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ