ಹುಳಿಯಾರು-ಕೆಂಕೆರೆ ಸಕಾ೯ರಿ ಪ್ರೌಢಶಾಲೆಯ ಇಂಗ್ಲೀಷ್ ಮೀಡಿಯಂ ವಿದ್ಯಾಥಿ೯ ರೇಣುಕಾ ಪ್ರಸಾದ್ ಎಂಬುವವರೇ ಗುರುವಾರ ವೆಬ್ ಸೈಟ್ ನಲ್ಲಿ ಪ್ರಕಟವಾದ ಫಲಿತಾಂಶದಿಂದ ಘಾಸಿಯಾಗಿ ಸಾವನ್ನಪ್ಪಿದವನಾಗಿದ್ದಾನೆ.
ಈತ ಇಲ್ಲಿನ ಪೇಟೆ ಬೀದಿಯಲ್ಲಿನ ಗ್ರಾಮ ಪಂಚಾಯ್ತಿ ಪಕ್ಕದಲ್ಲಿ ಗುಡಿಸಲು ಹೋಟೆಲ್ ನೆಡೆಸುತ್ತಿದ್ದ ಗಾಡಿರಾಜಪ್ಪ ಹಾಗೂ ಪುಟ್ಟಕ್ಕ ಎಂಬುವವರ ಮಗನಾಗಿರುವ ಈತ ಎಲ್ಲಾ ವಿದ್ಯಾಥಿ೯ಗಳಂತೆ ಇಂದು ಮದ್ಯಾನ್ಹ ಇವನೂ ಸಹ ಕುತುಹಲದಿಂದ ಇಂಟರ್ ನೆಟ್ ನಲ್ಲಿ ಫಲಿತಾಂಶ ನೋಡಿ ಬಂದಿದ್ದಾನೆ.
ಆದರೆ ಈತ ಪರೀಕ್ಷೆಯಲ್ಲಿ 2 ವಿಷಯಗಳಲ್ಲಿ ಅನುತೀರ್ಣವಾಗಿರುವುದನ್ನು ಕಂಡು ಮನನೊಂದು ಸಂಜೆಯ ಸಮಯ ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಪ್ರಯತ್ನಿಸಿದ್ದಾನೆ. ಕುಟುಂಬದವರೆಲ್ಲ ಹೋಟೆಲ್ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಿದಾಗ ಮಗ ಮನೆಯ ತೀರಿನಲ್ಲಿ ನೇತಾಡುತ್ತಿದ್ದುದನ್ನು ಕಂಡು ಗಾಭರಿಯಿಂದ ಕಿರುಚಿದಾಗ ಅಕ್ಕ-ಪಕ್ಕದ ಮನೆಯವರು ಧಾವಿಸಿ ಬಂದು ಆಸ್ಪತ್ರಗೆ ಸಾಗಿಸಿ ಬದುಕಿಸಲು ಪ್ರಯತ್ನಿಸಿದರಾದರೂ ರಕ್ತ ಸಂಚಲನ ತೀವ್ರವಾಗಿ ತೊಡಕಾದ ಕಾರಣ ಮಾರ್ಗಮಧ್ಯೆ ಈತ ಕೊನೆಯುಸಿರೆಳೆದನೆಂದು ಪ್ರತ್ಯಕ್ಷದಶಿ೯ಗಳು ಪತ್ರಿಕೆಗೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ