ಹುಳಿಯಾರು ಸಮೀಪದ ಮೈಲಾರಪುರದಲ್ಲಿ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಬ್ರಹ್ಮರತೋತ್ಸವದ ತಿಂಗಳ ಪೂಜಾ ಮಹೋತ್ಸವವನ್ನು ಮೇ.2 ರ ಭಾನುವಾರ ಏರ್ಪಡಿಸಲಾಗಿದೆ.
ಬೆಲಗೂರು ಶ್ರೀಕ್ಷೇತ್ರದ ಶ್ರೀ ಬಿಂಧುಮಾಧವ ಮಹಾಸ್ವಾಮಿಗಳ ದಿವ್ಯಸಾನಿಧ್ಯ ಹಾಗೂ ಆಗಮಿಕರಾದ ಕಡೂರು ಹ್ಯಾರಳಘಟ್ಟದ ಶ್ರೀ ತೋಟೇಶಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಪೂಜಾಮಹೋತ್ಸವದಲ್ಲಿ ಬೆಳಿಗ್ಗೆ 6 ಗಂಟೆಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ತಿಂಗಳು ಪೂಜೆ ಉತ್ಸವ, ರಾತ್ರಿ 8 ಗಂಟೆಗೆ ಸರ್ಪಮಂಡಲೋತ್ಸವ, ರಾತ್ರಿ 9 ಗಂಟೆಗೆ ಚೌಡಿಕೆ ಚನ್ನಪ್ಪ ಮತ್ತು ಸಂಗಡಿಗರಿಂದ ಚೌಡಿಕೆ ಮೇಳ ಮುಂತಾದ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.
ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವ ಕಾಲದಲ್ಲಿ ಮೀಸಲು ಮತ್ತು ಕಾಣಿಕೆಯನ್ನು ಅರ್ಪಿಸದೆ ಇರುವ ವಕ್ಕಲುಗಳು ಅರ್ಪಿಸಬೇಕಾಗಿ ಹಾಗೂ ತಿಂಗಳ ಪೂಜಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಎ.ನಿರಂಜನಾರಾಧ್ಯ ಹಾಗೂ ಸೂಜಿಕಲ್ಲು ಧರ್ಮದರ್ಶಿ ಎಸ್.ನಿಂಗಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ