(ಹುಳಿಯಾರಿನ 5 ನೇ ಬ್ಲಾಕ್ನಲ್ಲಿ ಮತದಾರರ ಓಲೈಕೆಗಾಗಿ ಕಂಬಗಳಿಗೆ ದೀಪ ಅಳವಡಿಸುತ್ತಿರುವುದು)
ಮತದಾರರನ್ನು ಓಲೈಸಿಕೊಳ್ಳವ ಸಲುವಾಗಿ ಚುನಾವಣಾ ಚಟುವಟಿಕೆಗಳು ಈಗಾಗಲೇ ಆರಂಭವಾಗಿದ್ದು ಹುಳಿಯಾರಿನ 5 ನೇ ಬ್ಲಾಕ್ನಲ್ಲಿ ರಾಜಾರೋಷವಾಗಿ ಬೀದಿದೀಪಗಳನ್ನು ಅಳವಡಿಸಿರುವದು ತಕರಾರಿನ ವಿಚಾರವಾಗಿದೆ.
ಈ ಬ್ಲಾಕಿನಲ್ಲಿ ಒಟ್ಟು 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇದರಲ್ಲಿ 2 ಜನರಲ್ ಸ್ಥಾನಗಳು, 1 ಜನರಲ್ ಮಹಿಳೆ, 1 ಎಸ್ಸಿ ಮಹಿಳೆ ಸ್ಥಾನಗಳಿಗೆ ಹಂಚಿಕೆಯಾಗಿದ್ದು ಇದರಲ್ಲಿ ಜನರಲ್ ಸ್ಥಾನಗಳಿಗೆ ಮಾಜಿ ಸದಸ್ಯರುಗಳಾದ ಎಚ್.ಎಂ.ಅಶೋಕ್ ಹಾಗೂ ಮಾಜಿ ಉಪಾಧ್ಯಕ್ಷ ಸೈಯದ್ ಜಹೀರ್ ಅವರು ಸ್ಫರ್ಧಿಸಿರುವುದರಿಂದ ಮಹತ್ವ ಪಡೆದುಕೊಂಡಿದೆ.
ಹಾಗಾಗಿ ಶತಾಯ ಗತಾಯ ಈ ಚುನಾವಣೆಗೆ ಗೆಲ್ಲಲೇ ಬೇಕೆಂದು ಮಾಜಿ ಉಪಾಧ್ಯಕ್ಷ ಸೈಯದ್ ಜಹೀರ್ ಅವರು ಅಡ್ಡದಾರಿ ತುಳಿದಿದ್ದು ರಾಜಾರೋಷವಾಗಿ ತಮ್ಮ ಬ್ಲಾಕಿನ ಕಂಬಗಳಿಗೆ ದೀಪಗಳನ್ನು ಹಾಕಿಸುವ ಮೂಲಕ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಯಾವುದೇ ಆಮಿಷ ಹಾಗೂ ಸಹಾಯ, ಸೌಲಭ್ಯಗಳನ್ನು ನೀಡಬಾರದು ಎಂದು ಆಯೋಗದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆಂಬ ಆರೋಪ ಮಾಡಲಾಗಿದೆ.
ಕಳೆದ ಎರಡುವರೆ ವರ್ಷ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ಬ್ಲಾಕಿನ ಮತದಾರರ ಸೇವೆ ಮಾಡುವ ವಿಫುಲ ಅವಕಾಶ ವಿದ್ದರೂ ಸಹ ಆಗ ಮತದಾರರನ್ನು ಕಡೆಗಣಿಸಿ ಬೀದಿದೀಪಗಳನ್ನು ಅಳವಡಿಸದೆ ಕತ್ತಲೆಯಲ್ಲಿ ಹಾಗೂ ಸಮರ್ಪಕವಾಗಿ ನೀರು ಸರಬರಾಜು ಮಾಡದೆ ನೀರಿನ ಸಮಸ್ಯೆ ಸೃಷ್ಟಿಸಿ ಈಗ ಮತಗಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಬೀದಿದೀಪಗಳನ್ನು ಅಳವಡಿಸಿ ಹಾಗೂ ಪಂಚಾಯ್ತಿ ನೀರುಘಂಟಿಗಳನ್ನು ದುರ್ಬಳಕೆ ಮಾಡಿಕೊಂಡು ನೀರು ಬಿಡಿಸುತ್ತಿದ್ದಾರೆನ್ನುವ ವಿಚಾರ ಮತದಾರರ ನಗೆಪಾಟಲಿಗೀಡು ಮಾಡಿದೆಯಲ್ಲದೆ ಪ್ರತಿಸ್ಪರ್ಧಿಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಹಾಲಿ ಸ್ಪರ್ಧಿಗಳಾದ ಅಶೋಕ್ ಬಾಬು ಹಾಗೂ ಜಾವೀದ್ ಅವರು ಈ ಜಹೀರ್ ಅವರು ಮತದಾರರ ಓಲೈಕೆಗೆ ಹಿಡಿದಿರುವ ವಾಮಮಾರ್ಗವನ್ನು ಬೆಳಕಿಗೆ ತಂದಿದ್ದು ಮಾಧ್ಯಮದವರು ದೀಪ ಅಳವಡಿಸುತ್ತಿರುವ ಪೋಟೊ ಸೆರೆ ಹಿಡಿಯಲು ತೆರಳಿದಾಗ ಸ್ವತಃ ಮುಂದೆ ನಿಂತ್ತು ದೀಪ ಅಳವಡಿಸುತ್ತಿದ್ದ ಜಹೀರ್ ಅವರು ಬೈಕ್ ಹತ್ತಿ ಪರಾರಿಯಾಗಿದ್ದು ದೀಪ ಅಳವಡಿಸುತ್ತಿದ್ದವರನ್ನು ಪ್ರಶ್ನಿಸಿದಾಗ ಜಹೀರ್ ಅವರೇ ಹಣ ಕೊಟ್ಟು ದೀಪ ಅಳವಡಿಸುತ್ತಿದ್ದಾರೆ ಎಂದು ತಿಳಿಸಿದರು.
ಬೀದಿದೀಪ ಅಳವಡಿಸಿದ್ದು ಸಂಘದ ಹಣದಲ್ಲಿ: ಸ್ಪಷ್ಟನೆ
----------------------------------
ಆದರೆ ಈ ವಿಚಾರ ಪತ್ರಿಕೆಯಲ್ಲಿ ಪ್ರಕಟವಾದ ನಂತರ ನಡೆದದ್ದೆ ಬೇರೆ.ಆ ಬಡಾವಣೆಯ ಸುಮಾರು ೧೫೦ ಕ್ಕೂ ಹೆಚ್ಚು ಮಂದಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಇದನ್ನು ಅಲ್ಲಗೆಳೆಯುವ ಸಲುವಾಗಿ ಪತ್ರಿಕೆಯ ವರದಿಗಾರರನ್ನು ಕರೆಸಿ ಇದಕ್ಕೆ ಸ್ಪಷ್ಟೀಕರಣ ನೀಡಿದರು.
ಹುಳಿಯಾರು ಗ್ರಾಮ ಪಂಚಾಯ್ತಿಯ ಐದನೇ ಬ್ಲಾಕ್ನಲ್ಲಿ ಬೀದಿದೀಪಗಳನ್ನು ಅಳವಡಿಸುತ್ತಿದ್ದುದು ಸ್ವಸಹಾಯ ಸಂಘದ ಹಣದಲ್ಲಿಯೇ ವಿನಃ ಮಾಜಿ ಉಪಾಧ್ಯಕ್ಷ ಸೈಯದ್ ಜಹೀರ್ ಅವರು ಮತದಾರರನ್ನು ಓಲೈಸಿಕೊಳ್ಳವ ಸಲುವಾಗಿ ಅಳವಡಿಸಿಲ್ಲ ಎಂದು ಕೆಜಿಎನ್ ಸ್ವಸಹಾಯ ಸಂಘದ ಅಧ್ಯಕ್ಷ ದಾದಾಪೀರ್, ಉಪಾಧ್ಯಕ್ಷ ಬಾಬು ಹಾಗೂ ಬಿಸ್ಮಿಲ್ಲಾ ಸ್ವಸಹಾಯ ಸಂಘದ ಅಧ್ಯಕ್ಷೆ ಶಮೀಮ್ ಉನ್ನೀಸ, ಉಪಾಧ್ಯಕ್ಷೆ ಬೀಬೀಜಾನ್ ಅವರ ನೇತೃತ್ವದಲ್ಲಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಸಂಘದ ಪದಾಧಿಕಾರಿಗಳು ಸ್ಪಷ್ಟನೆ ನೀಡಿದರು.
ತಮ್ಮ 5 ನೇ ಬ್ಲಾಕ್ನ ಮಾರುತಿ ನಗರದಲ್ಲಿ ಕಳೆದ ಎರಡು ತಿಂಗಳಿಂದ ಬೀದಿದೀಪಗಳಿಲ್ಲ. 1 ತಿಂಗಳಿಂದ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಪಂಚಾಯ್ತಿಗೆ ಎಷ್ಟು ಬಾರಿ ದೂರು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಇಲ್ಲಿ ಹೇರಳವಾಗಿ ಗಿಡಗಂಟೆಗಳು ಬೆಳೆದಿದ್ದು ಲೈಟ್ ಇಲ್ಲದ ಕಾರಣ ವಿಷಜಂತುಗಳ ಕಾಟದಿಂದ ರಾತ್ರಿವೇಳೆ ಮನೆಯಿಂದ ಹೊರಬರುವುದಕ್ಕೆ ಭಯವಾಗುತ್ತಿದೆ. ಜೊತೆಗೆ ಈ ಬ್ಲಾಕಿನಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ನಿರ್ವಹಿಸುವವರೇ ಹೆಚ್ಚಾಗಿದ್ದು ದುಡ್ಡುಕೊಟ್ಟು ನೀರು ಖರೀದಿಸುವುದು ದುಸ್ಥರವಾಗಿದೆ.
ಹಾಗಾಗಿ ಸಂಘದ ಸದಸ್ಯರೇ ಹತ್ತತ್ತು ರೂಗಳನ್ನು ಕೈಯಿಂದ ಹಾಕಿ ಬೀದಿದೀಪಗಳನ್ನು ಕಟ್ಟಿಸಿಸಿದ್ದೇವೆ ಹಾಗೂ ಇಲ್ಲೊಬ್ಬರ ಮನೆಯಲ್ಲಿ ದೇವರ ಕೆಲಸವಿದ್ದ ಕಾರಣ ತಾವೇ 5 ನಿಮಿಷ ನೀರು ಬಿಡಿ ಎಂದು ಕೇಳಿ ಬಿಡಿಸಿಕೊಂಡಿದ್ದೇವೆಯೇ ವಿನಃ ಈ ಜನಪರ ಕಾರ್ಯದಲ್ಲಿ ಹಾಲಿ ಅಭ್ಯರ್ಥಿ ಹಾಗೂ ಮಾಜಿ ಉಪಾಧ್ಯಕ್ಷ ಜಹೀರ್ ಸಾಬ್ ಕೈವಾಡ ಖಂಡಿತಾ ಇರುವುದಿಲ್ಲ ಎಂದರು.
ಅವರ ಜನಪ್ರಿಯತೆ ಹಾಗೂ ಪ್ರಸಕ್ತ ಚುನಾವಣೆಯಲ್ಲಿ ಮತದಾರರು ಇವರ ಪರ ನಿಂತಿರುವುದನ್ನು ಸಹಿಸಲಾಗದೆ ಹಾಗೂ ಸೋಲಿನ ಭೀತಿಯಿಂದ ಕಂಗೆಟ್ಟಿರುವ ಪ್ರತಿಸ್ಪರ್ಧಿ ಅಶೋಕ್ ಬಾಬು ಅವರು ಜಹೀರ್ ಅವರು ತಮ್ಮ ಸ್ವಂತ ಹಣದಲ್ಲಿ ಬೀದಿದೀಪಗಳನ್ನು ಕಟ್ಟಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದು ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಇಬ್ರಾಹಿಂಸಾಬ್, ಖಲಂದರ್ ಸಾಬ್, ಹಜರತ್ ಜಾನ್, ಅನ್ಸರ್, ನಯಾಝ್, ಜಾಫರ್, ಪಾತೀಮಾಭಿ, ಷಹಾಜಾದಿಬೀ, ನಗೀನಾಬಾನು, ಅಮ್ರೀನ್ತಾಜ್, ಜಾಫರ್ ಸಾಧಿಕ್ ಮುಂತಾದವರು ಎಚ್ಚರಿಕೆ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ